IPL 2024: ಕುಣಿದು ಕುಪ್ಪಳಿಸುತ್ತಿದ್ದ ಕಾವ್ಯಾ ಮಾರನ್ ಒಂದೇ ಕ್ಷಣಕ್ಕೆ ಥಂಡಾ; ಫೋಟೋ ವೈರಲ್!
ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡದ ಒಡತಿ ಕಾವ್ಯಾ ಮಾರನ್ ತನ್ನ ತಂಡ ಐಪಿಎಲ್‌ನಲ್ಲಿ ಸ್ಪರ್ಧಿಸಿದ ಪ್ರತಿ ಪಂದ್ಯದಲ್ಲೂ ಖುದ್ದು ಹಾಜರಿರುತ್ತಾಳೆ ಎಂಬುದು ಎಂಬುದು ಗುಟ್ಟಾಗಿ ಉಳಿದಿಲ್ಲ.
ಪಂದ್ಯದ ವಿವಿಧ ಹಂತಗಳಲ್ಲಿ ಕಾವ್ಯಾ ಮಾರನ್ ಪ್ರತಿಕ್ರಿಯೆಗಳಿಂದ ಅವರು ಆಗಾಗ ಗಮನ ಸೆಳೆಯುತ್ತಿರುತ್ತಾರೆ ಮತ್ತು ಇದು ಕೆಕೆಆರ್ ತಂಡದ ವಿರುದ್ಧದ ಪಂದ್ಯವೂ ಭಿನ್ನವಾಗಿಲ್ಲ ಎಂದು ಸಾಬೀತಾಯಿತು.

ಶನಿವಾರ, ಮಾರ್ಚ್ 23ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮೂರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡದ ಒಡತಿ ಕಾವ್ಯಾ ಮಾರನ್ ಒಂದೇ ಕ್ಷಣದಲ್ಲಿ ಎರಡು ವಿಭಿನ್ನ ಹಾವಭಾವಗಳಿಂದ ಸುದ್ದಿಯಾಗಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಅದ್ಭುತ ಪ್ರದರ್ಶನವನ್ನು ನೀಡಿ ಬೃಹತ್ ಗುರಿಯನ್ನು ಬೆನ್ನಟ್ಟುವ ಸಮೀಪಕ್ಕೆ ಬಂದಿತು. ಅಂತಿಮ ಓವರ್‌ನಲ್ಲಿ 13 ರನ್‌ಗಳ ಅಗತ್ಯವಿದ್ದಾಗ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲೀಕರಾದ ಕಾವ್ಯಾ ಮಾರನ್ ಅವರ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿವೆ.
ಎರಡನೇ ಇನ್ನಿಂಗ್ಸ್‌ನ 20ನೇ ಓವರ್‌ನ ಮೊದಲ ಎಸೆತದಲ್ಲಿ ಹೆನ್ರಿಚ್ ಕ್ಲಾಸೆನ್ ಅವರು ಸಿಕ್ಸರ್ ಬಾರಿಸಿದ ನಂತರ, ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡದ ಸಹ-ಒಡತಿ ಕಾವ್ಯಾ ಮಾರನ್ ಕುಣಿದು ಕುಪ್ಪಳಿಸಿದರು.

ಆದರೆ, ಐದನೇ ಎಸೆತದಲ್ಲಿ ಸ್ಟಾರ್ ಬ್ಯಾಟರ್‌ನ ಔಟಾಗುವುದರೊಂದಿಗೆ ಕಾವ್ಯಾ ಮಾರನ್ ಜಿಗಿದಾಟ ನಿರೀಕ್ಷಿಸಿದಂತೆ ಕ್ಷೀಣಿಸಿತು ಮತ್ತು ಬದಲಾದ ಹಾವಭಾವದೊಂದಿಗೆ ಸಪ್ಪೆ ಮೊರೆ ಹಾಕಿ ನಿಂತರು.
ಅಂತಿಮ 6 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿದ್ದಾಗ, ಹರ್ಷಿತ್ ರಾಣಾ ಅವರ ಬೌಲಿಂಗ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ಮೊದಲ ಎಸೆತವನ್ನು ಸ್ಕ್ವೇರ್ ಲೆಗ್ ಕಡೆಗೆ ಬೃಹತ್ ಸಿಕ್ಸರ್ ಸಿಡಿಸಿದರು. ಆ ಸಿಕ್ಸರ್ ನೋಡಿ ಸ್ಟ್ಯಾಂಡ್‌ನೊಳಗಿದ್ದ ಕಾವ್ಯಾ ಮಾರನ್‌ಗೆ ತನ್ನ ಉತ್ಸಾಹವನ್ನು ನಿಯಂತ್ರಿಸಲಾಗಲಿಲ್ಲ ಮತ್ತು ತನ್ನ ಮುಖದ ಮೇಲೆ ದೊಡ್ಡ ನಗು ಹೊಂದಿದ್ದಳು.
ನಂತರದ 5 ಎಸೆತಗಳಲ್ಲಿ ಗುರಿಯನ್ನು 7 ರನ್‌ಗಳಿಗೆ ಇಳಿಸಿದ ಬಳಿಕ ಸನ್‌ರೈಸರ್ಸ್ ಹೈದರಾಬಾದ್‌ಗೆ ರೋಚಕ ಗೆಲುವಿನ ಅವಕಾಶವಿತ್ತು. ಆದರೆ ಎರಡನೇ ಸಿಂಗಲ್ ರನ್ ಮತ್ತು ಮೂರನೇ ಎಸೆತದಲ್ಲಿ ಶಹಬಾಜ್ ಅಹ್ಮದ್ ವಿಕೆಟ್ ಕಳೆದುಕೊಂಡಿತು.

ಬಳಿಕ ನಾಲ್ಕನೇ ಎಸೆತದಲ್ಲಿ ಮಾರ್ಕೊ ಜಾನ್ಸೆನ್ ಸಿಂಗಲ್ ರನ್ ತೆಗೆದುಕೊಂಡು, ಹೆನ್ರಿಚ್ ಕ್ಲಾಸೆನ್‌ಗೆ ಕ್ರೀಸ್ ನೀಡಿದರು. ಕೊನೆಯ 2 ಎಸೆತಗಳಲ್ಲಿ 5 ರನ್‌ಗಳ ಅಗತ್ಯವಿದ್ದಾಗ, ಐದನೇ ಎಸೆತದಲ್ಲಿ ಹೆನ್ರಿಚ್ ಕ್ಲಾಸೆನ್ ದೊಡ್ಡ ಶಾಟ್ ಬಾರಿಸಲು ಹೋಗಿ ಸುಯಾಶ್ ಶರ್ಮಾ ಪಡೆದ ಅದ್ಭುತ ಕ್ಯಾಚ್‌ಗೆ ಔಟಾದರು.
ಕೊನೆಯ ಎಸೆತದಲ್ಲಿ 5 ರನ್ ಅಗತ್ಯವಿದ್ದಾಗ, ನಾಯಕ ಪ್ಯಾಟ್ ಕಮ್ಮಿನ್ಸ್ ಚೆಂಡನ್ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆರೆಂಜ್ ಆರ್ಮಿ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯವನ್ನು 4 ರನ್‌ಗಳಿಂದ ಸೋತಿದ್ದರಿಂದ ಕಾವ್ಯಾ ಮಾರನ್ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ.
ಒಂದರ ಹಿಂದೊಂದರಂತೆ ವಿಕೆಟ್‌ಗಳು ಬಿದ್ದ ನಂತರ ಮತ್ತು ತಂಡದ ಸೋಲು ಖಚಿತವಾದಾಗ ಕಾವ್ಯಾ ಮಾರನ್ ನಿರುತ್ಸಾಹಗೊಂಡಂತೆ ತೋರುತ್ತಿದ್ದಳು. ಈ ಎರಡು ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿವೆ.
ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ್ದ 209 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು.
ಹೆನ್ರಿಚ್ ಕ್ಲಾಸೆನ್ 29 ಎಸೆತಗಳಲ್ಲಿ 8 ಸಿಕ್ಸರ್ ಮೂಲಕ 63 ರನ್ ಬಾರಿಸಿದರು, ಆದರೆ ಅವರ ಧೈರ್ಯಶಾಲಿ ಪ್ರಯತ್ನ ಕೊನೆಯಲ್ಲಿ ವ್ಯರ್ಥವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications