Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಈ ಬಾರಿ ಆರ್‌ಸಿಬಿಗೆ ಐಪಿಎಲ್‌ ಮುಕಟ ತೊಡಿಸಲು ಸಿದ್ಧರಾಗಿದ್ದಾರೆ KGF ಸ್ಟಾರ್ಸ್

ಆರ್‌ಸಿಬಿ.. ಈ ಹೆಸರು ಕೇಳಿದ್ರೆ ಸಾಕು ಅಭಿಮಾನಿಗಳ ಜೋಶ್‌ ಎಂತಹದ್ದು ಎಂದು ಒಂದು ಬಾರಿ ಕಣ್ಣ ಮುಂದೆ ಬಂದು ಹೋಗುತ್ತದೆ. ಸ್ಟಾರ್ ಆಟಗಾರರನ್ನು ಹೊಂದಿರುವ ಆರ್‌ಸಿಬಿ ಒಮ್ಮೆಯೂ ಐಪಿಎಲ್‌ ಟ್ರೋಫಿಗೆ ಮುತ್ತಿಡುವಲ್ಲಿ ಸಫಲವಾಗಿಲ್ಲ. ಆದರೆ 17ನೇ ಆವೃತ್ತಿಯಲ್ಲಿ ಆರ್‌ಸಿಬಿ ನವ ಉತ್ಸಾಹದಲ್ಲಿ ಈ ಕಾರ್ಯವನ್ನು ಸಾಧಿಸಲು ಮುನ್ನುಗುತ್ತಿದೆ. ಈ ಕನಸನ್ನು ಸಾಕಾರಗೊಳಿಸಲು ಕೆಜಿಎಫ್‌ ಸ್ಟಾರ್‌ಗಳು ಕಂಕಣ ಕಟ್ಟಿ ಸಿದ್ಧರಾಗಿದ್ದಾರೆ.

ಪ್ರತಿ ಬಾರಿ ಆರ್‌ಸಿಬಿ ಸೋತಾಗಾಲೂ ಅಭಿಮಾನಿಗಳ ಉತ್ಸಾಹ ಕಡಿಮೆ ಆಗಲಿಲ್ಲ. ಅತಿ ಉತ್ಸಾಹದಿಂದಲೇ ಆರ್‌ಸಿಬಿ ಫ್ಯಾನ್ಸ್‌ ಮೈದಾನದಲ್ಲಿ ಆಟಗಾರರಿಗೆ ಸಪೋರ್ಟ್‌ ಮಾಡುತ್ತಾರೆ. ಆದರೆ ಕಳೆದ ಆವೃತ್ತಿಗಳನ್ನು ಹೋಲಿಸಿದರೆ, ಈ ಬಾರಿ ಆರ್‌ಸಿಬಿ ತಂಡದ ಸಂಯೋಜನೆ ಉತ್ತಮವಾಗಿದೆ ಎಂದು ಮೆಲ್ನೋಟಕ್ಕೆ ಕಾಣುತ್ತದೆ. ಇದರಲ್ಲಿ ಟಾಪ್‌ ಆರ್ಡರ್‌ ಬ್ಯಾಟರ್‌ಗಳ ಒಂದು ತೂಕವಾದರೆ, ಈ ಬಾರಿ ವೇಗದ ಬೌಲರ್‌ಗಳ ತೂಕವೂ ಅಷ್ಟೇ ಇದೆ.

IPL 2024 KGF star ready to Lift IPL Trophy for RCB this time

ಆರ್‌ಸಿಬಿ ಮತ್ತೊಮ್ಮೆ ಪ್ರಶಸ್ತಿಯ ಕನಸಿನೊಂದಿಗೆ ಕಣಕ್ಕೆ ಇಳಿಯಲಿದೆ. ತಂಡದ ಸ್ಟಾರ್ ಆಟಗಾರರಾದ 'ಕೆಜಿಎಎಫ್' ಸ್ಟಾರ್ಸ್‌ ಗೆಲುವಿನ ಹಾದಿಯನ್ನು ಸುಗಮಗೊಳಿಸಬಹುದು ಎಂಬ ಇರಾದೆ ಟೀಮ್ ಮ್ಯಾನೆಜ್ಮೆಂಟ್‌ನ್ನದಾಗಿದೆ. ಕೆಜಿಎಫ್ ಎಂದರೆ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಾಫ್ ಡು ಪ್ಲೆಸಿಸ್.

ಟಾಪ್‌ ಆರ್ಡರ್‌ ಬಲ

RCB ಈ ಬಾರಿ ಸರಿಯಾದ ಪ್ಯಾಕೇಜ್ ಹೊಂದಿದೆ. ಉತ್ತಮ ಆಟಗಾರರನ್ನು ಬಿಡ್ ಮಾಡಿದ್ದು, ಬೆಸ್ಟ್‌ ಪ್ಲೇಯಿಂಗ್ ಇಲೆವೆನ್‌ ಅಖಾಡಕ್ಕೆ ಇಳಿಸಬಹುದು. ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಕೊಹ್ಲಿ, ಡು ಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಆಟಗಾರರಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಆಲ್ ರೌಂಡರ್ ಪಾತ್ರವನ್ನು ನಿರ್ವಹಿಸಿದ್ದಾರೆ.

ರಜತ್ ಪಾಟಿದಾರ್ ಕೂಡ ತಂಡಕ್ಕೆ ಕಾಣಿಕೆ ನೀಡಲು ಸಿದ್ಧರಾಗಿದ್ದಾರೆ. ಈ ಬಾರಿ ಅವರಿಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಬೇರೆ ಇದೆ. ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ ಜೊತೆಗೆ ಆಕಾಶ್ ದೀಪ್ ಮತ್ತು ಅಲ್ಜಾರಿ ಜೋಸೆಫ್ ಅವರಂತಹ ಆಟಗಾರರಿದ್ದಾರೆ.

IPL 2024 KGF star ready to Lift IPL Trophy for RCB this time

ಬ್ಯಾಟಿಂಗ್‌ ಬಲ

ಟೂರ್ನಿಯಲ್ಲಿ ಕೊಹ್ಲಿ 237 ಪಂದ್ಯಗಳಲ್ಲಿ ಆಡಿದ್ದು 7263 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕ ಹಾಗೂ 50 ಅರ್ಧ ಶತಕ ಸೇರಿವೆ. ಅವರು ಆರ್‌ಸಿಬಿಯ ಕೆಜಿಎಫ್‌ನ ಪ್ರಬಲ ಅಸ್ತ್ರ. ಕೆಜಿಎಫ್‌ನ ಇನ್ನೊಂದು ಭಾಗವೆಂದರೆ ಗ್ಲೆನ್ ಮ್ಯಾಕ್ಸ್‌ವೆಲ್. ಮ್ಯಾಕ್ಸ್‌ವೆಲ್ ಐಪಿಎಲ್‌ನ 124 ಪಂದ್ಯಗಳಲ್ಲಿ 2719 ರನ್ ಗಳಿಸಿದ್ದಾರೆ. ಇದರೊಂದಿಗೆ 31 ವಿಕೆಟ್ ಕೂಡ ಕಬಳಿಸಿದ್ದಾರೆ. ಸದ್ಯ ಭರ್ಜರಿ ಫಾರ್ಮ್‌ನಲ್ಲಿರುವ ಮ್ಯಾಕ್ಸ್‌ವೆಲ್ ಏಕಾಂಗಿಯಾಗಿ ಪಂದ್ಯದ ಗತಿಯನ್ನು ಬುಡಮೇಲು ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ.

ಡು ಪ್ಲೆಸಿಸ್ ಅವರ ದಾಖಲೆಯೂ ಅತ್ಯುತ್ತಮವಾಗಿದೆ. ಇವರಲ್ಲದೆ, ರಜತ್ ಪಾಟಿದಾರ್, ಅನುಜ್ ರಾವತ್, ವಿಲ್ ಜಾಕ್ವೆಸ್ ಮತ್ತು ಮಹಿಪಾಲ್ ಲೊಮ್ರೋರ್ ಕೂಡ ತಂಡದ ಭಾಗವಾಗಿದ್ದಾರೆ.

ವೇಗಿಗಳೇ ಆಧಾರ

ವೇಗದ ದಾಳಿಯನ್ನು ಮಹಮ್ಮದ್ ಸಿರಾಜ್ ಮುನ್ನಡೆಸಲಿದ್ದಾರೆ. ಸಿರಾಜ್ ಐಪಿಎಲ್‌ನಲ್ಲಿ 79 ಪಂದ್ಯಗಳನ್ನು ಆಡಿದ್ದು, 78 ವಿಕೆಟ್‌ ಕಬಳಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಮಿಂಚು ಹರಿಸುತ್ತಿರುವ ಸಿರಾಜ್‌ಗೆ ರೀಸ್ ಟೋಪ್ಲಿ, ಆಕಾಶ್ ದೀಪ್ ಮತ್ತು ಅಲ್ಜಾರಿ ಜೋಸೆಫ್ ಕೂಡ ಸಾಥ್ ನೀಡಬಲ್ಲರು. ಈ ಬಾರಿ ಕ್ಯಾಮರಾನ್ ಗ್ರೀನ್ ಕೂಡ ತಂಡದ ಭಾಗವಾಗಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು.

ಆರ್‌ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯ್ಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್‌, ಮಹಿಪಾಲ್ ಲೊಮೊರೊರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಖ್, ವಿಜಯ್‌ಕುಮಾರ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.

Story first published: Saturday, March 16, 2024, 9:00 [IST]
Other articles published on Mar 16, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+