For Quick Alerts
ALLOW NOTIFICATIONS  
For Daily Alerts
 

IPL 2024: ಫೈನಲ್‌ಗಾಗಿ ಆರ್ಮಿ ರೀತಿ ಕಠಿಣ ತಾಲೀಮು ನಡೆಸಿದ ಕೆಕೆಆರ್ ಆಟಗಾರರು

ಮೇ 25 ಶನಿವಾರ, 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಫೈನಲ್‌ ಪಂದ್ಯ ನಾಳೆ ಅಂದರೆ (ಮೇ 26) ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ಮತ್ತು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಗಳು ಚಾಂಪಿಯನ್‌ ಪಟ್ಟಕ್ಕಾಗಿ ಪ್ರಬಲ ಹೋರಾಟ ನಡೆಸಲಿವೆ.

ಸತಾಯಗತಾಯ ಹೈದರಾಬಾದ್‌ ಎದುರು ಗೆದ್ದು ಚಾಂಪಿಯನ್‌ ಆಗಲು ಕೆಕೆಆರ್‌ ಹೊಸ ಯೋಜನೆ ಹಾಕಿಕೊಂಡಿದೆ. ಇತ್ತ ಹೈದರಾಬಾದ್‌ ಕೂಡ ಕ್ವಾಲಿಫೈಯರ್‌ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗಿದೆ.

IPL 2024 KKR players had tough workout

ಇದಕ್ಕೂ ಮೊದಲು ಕೆಕೆಆರ್‌ ಆಟಗಾರರು ಆರ್ಮಿ ರೀತಿ ಕಠಿಣ ತಾಲೀಮು ನಡೆಸಿದ್ದಾರೆ. ಈ ವಿಡಿಯೋವನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಮ್ಮ ಅಧಿಕೃತ ಟ್ವೀಟರ್‌ (ಎಕ್ಸ್) ಖಾತೆಯಲ್ಲಿ "ಕಠಿಣವಾಗಿ ಕೆಲಸ ಮಾಡಿ, ಕಷ್ಟಪಟ್ಟು ಆಟವಾಡಿ" ಎಂಬ ಶೀರ್ಷಿಕೆಯನ್ನು ಬರೆದು ಹಂಚಿಕೊಂಡಿದ್ದಾರೆ .

ಇದೀಗಾ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎದುರಾಳಿ ತಂಡಕ್ಕೆ ಸೋಲಿಸುವ ಸಂದೇಶವನ್ನು ಕೆಕೆಆರ್‌ ಕೊಟ್ಟಂತೆ ಕಾಣುತ್ತಿದೆ.

ವಿಡಿಯೋದಲ್ಲಿ ಆಂಡ್ರೆ ರಸೆಲ್, ನಿತೀಶ್ ರಾಣಾ, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಮಿಚೆಲ್ ಸ್ಟಾರ್ಕ್, ಸುಯಶ್ ಶರ್ಮಾ ಮತ್ತು ವೆಂಕಟೇಶ್ ಅಯ್ಯರ್ ಸೇರಿದಂತೆ ಕೆಲ ಕೆಕೆಆರ್‌ ಆಟಗಾರರು ಗೌತಮ್‌ ಗಂಭೀರ್‌ ಅವರ ಮಾರ್ಗದರ್ಶನದಲ್ಲಿ ಕಠಿಣ ವ್ಯಾಯಾಮಗಳನ್ನು ಮಾಡುತ್ತಿರುವುದು ಕಂಡು ಬಂದಿದೆ.

ಕಠಿಣ ತಯಾರಿಯಲ್ಲಿ ಸಂಪೂರ್ಣವಾಗಿ ಮಗ್ನರಾಗಿರುವ ಆಟಗಾರರು ಸ್ಟ್ರೆಚಿಂಗ್, ರನ್ನಿಂಗ್, ಪುಷ್-ಅಪ್‌ಗಳು ಸೇರಿದಂತೆ ವಿವಿಧ ವ್ಯಾಯಾಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಐಪಿಎಲ್‌ 2024ರ ಅಂಕಪಟ್ಟಿ ಆಗ್ರಸ್ಥಾನಿಯಾಗಿರುವ ಕೆಕೆಆರ್‌ ಫೈನಲ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ. ಬ್ಯಾಟಿಂಗ್‌ ಹಾಗು ಬೌಲಿಂಗ್‌ ವಿಭಾಗದಲ್ಲಿ ಬಲಿಷ್ಠವಾಗಿರುವ ಕೆಕೆಆರ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಹೈದರಾಬಾದ್ ತಂಡ ಕೂಡ ಕೆಕೆಆರ್‌ಗೆ ಹೋಲಿಸಿದೆರೆ ಅಪಾಯಕಾರಿಯಾಗಿದೆ.

ಕೆಕೆಆರ್‌ vs ಎಸ್‌ಆರ್‌ಹೆಚ್‌ ಪಂದ್ಯದ ಟಿವಿ,ಲೈವ್‌ ಸ್ಟ್ರೀಮಿಂಗ್‌ ವಿವರ

ಕೋಲ್ಕತ್ತಾ ನೈಟ್‌ ರೈಡರ್ಸ್‌ vs ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಆರಂಭವಾಗಿರುವ ಐಪಿಎಲ್‌ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್‌ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದು, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಫ್ಲಿಕೇಶನ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಆಗಲಿದೆ.

ಕೆಕೆಆರ್‌ vs ಎಸ್‌ಆರ್‌ಹೆಚ್‌ ಸಂಭಾವ್ಯ ಆಡುವ 11ರ ಬಳಗ

ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ: ರಹಮಾನುಲ್ಲಾ ಗುರ್ಬಾಜ್ (ವಿ. ಕೀ), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್(ವಿ.ಕೀ), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್

Story first published: Saturday, May 25, 2024, 13:57 [IST]
Other articles published on May 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+