IPL 2024: ಹಳೆಯ ಖದರ್‌ನಲ್ಲಿ KKR ರಸೆಲ್ ಶೈನ್: 244 ಸ್ಟ್ರೈಕ್ ರೇಟ್, 71 ರನ್
ಕೆರಿಬಿಯನ್ ನಾಡಿನ ಆಟಗಾರರು ಎಂದರೆ ಅವರ ಗತ್ತೆ ಬೇರೆ. ಅವರು ಅಂಗಳಕ್ಕೆ ಬಂದಾಗಲೆಲ್ಲಾ ಅಬ್ಬರ ಫಿಕ್ಸ್.. ಅದು ಟಾಪ್ ಆರ್ಡರ್‌ನಲ್ಲೇ ಆಗಿರಲಿ ಅಥವಾ ಮಿಡ್ಲ್ ಆರ್ಡರ್‌ನಲ್ಲೇ ಆಗಿರಲಿ. ವಿಂಡೀಸ್ ದೈತ್ಯ ಆಟಗಾರರು ಕ್ರೀಸ್‌ಗೆ ಬಂದರೆ ತಮಗೆ ಬೇಕಾದಂತೆ ಆಟವನ್ನು ಬದಲಿಸಿ ಬಿಡುತ್ತಾರೆ. ಐಪಿಎಲ್ ಆರಂಭಕ್ಕೂ ಮುನ್ನವೇ ಕೆಕೆಆರ್ ತಂಡಕ್ಕೆ ಖುಷಿಯ ಸುದ್ದಿಯನ್ನು, ದೂರದ ಆಸ್ಟ್ರೇಲಿಯಾದಿಂದ ಆಲ್‌ರೌಂಡರ್ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಈ ಪ್ಲೇಯರ್ ಆಟ ಕಳೆಗುಂದಿತ್ತು. ಆದರೆ ಐಪಿಎಲ್ ಆರಂಭವಾಗುವ ಸಮಯದಲ್ಲಿ ಆಲ್‌ರೌಂಡರ್ ಹಳೇಯ ಖದರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ಲೇಯರ್ ಬೇರೆ ಯಾರು ಅಲ್ಲ ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಬ್ಯಾಟರ್ ಆಂಡ್ರಿ ರಸೆಲ್..

ಆಂಡ್ರಿ ರಸೆಲ್ ಬ್ಯಾಟಿಂಗ್ ಅಂದರೆ ಹಾಗೆ.. ಅವರು ಯಾವುದೇ ಕ್ರಮಾಂಕದಲ್ಲಿ ಬಂದರೂ ಸುನಾಮಿ ರೀತಿ ಬ್ಯಾಟಿಂಗ್ ಮಾಡಲು ಹೆಸರುವಾಸಿ. ಇದಕ್ಕೆ ಉತ್ತಮ ಉದಾಹರಣೆ ಆಸ್ಟ್ರೇಲಿಯಾ ವಿರುದ್ಧ ರಸೆಲ್ ಆಡಿದ ಅಮೋಘ ಇನ್ನಿಂಗ್ಸ್.. ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ರಸೆಲ್ ಸಿಡಿಲ್ಲಬ್ಬರ ಬ್ಯಾಟಿಂಗ್ ಮಾಡಿ ಅಬ್ಬರಿಸಿದ್ದಾರೆ.
ಆಸೀಸ್ ಬೌಲರ್‌ಗಳಿಗೆ ಕಾಡಿದ ರಸೆಲ್
ತಮ್ಮ ಹಳೆಯ ವರೆಸೆಯಲ್ಲೇ ಬ್ಯಾಟಿಂಗ್ ಮಾಡಿದ ಸ್ಟಾರ್ ಬ್ಯಾಟರ್ ಆಂಡ್ರಿ ರಸೆಲ್ ಪರ್ತ್‌ನಲ್ಲಿ ಬಿರುಗಾಳಿಯನ್ನೇ ಬೀಸಿದರು. ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ರಸೆಲ್ ಆಡಿದ ಧಾಟಿಗೆ ಕೆಕೆಆರ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ರಸೆಲ್ ಅಂಗಳಕ್ಕೆ ಬಂದಾಗ ವೆಸ್ಟ್ ಇಂಡೀಸ್ 79 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ರಸೆಲ್ ಆಗಮನದಿಂದ ಪಂದ್ಯದ ಚಿತ್ರಣವೇ ಬದಲಾಯಿತು.

ಹಳೆಯ ಧಾಟ್ಟಿಯಲ್ಲಿ ಬ್ಯಾಟಿಂಗ್
ಆಂಡ್ರಿ ರಸೆಲ್ ತಮ್ಮ ಬಿರುಸಿನ ಬ್ಯಾಟಿಂಗ್ ಹಾಗೂ ಮುಗಿಲೆತ್ತರದ ಸಿಕ್ಸರ್ ನಿಂದಲೇ ಹೆಸರುವಾಸಿ. ಪರ್ತ್ ಅಂಗಳದಲ್ಲೂ ರಸೆಲ್ ಹಳೆಯ ಖದರ್‌ನಲ್ಲಿ ಬ್ಯಾಟಿಂಗ್ ನಡೆಸಿ ಅಭಿಮಾನಿಗಳಿಗೆ ಬಾಡೂಟ ಉಣಬಡಿಸಿದರು. ಮೈದಾನದಲ್ಲಿ ದಶ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಿದ ರಸೆಲ್ ಆರ್ಭಟಿಸಿದರು.
ರಸೆಲ್, ಆಸೀಸ್ ವಿರುದ್ಧ 244.82 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿ ಅಬ್ಬರಿಸಿದರು. ಕೇವಲ 29 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್ ನೆರವಿನಿಂದ 71 ರನ್ ಸಿಡಿಸಿದರು.
ಐಪಿಎಲ್‌ನಲ್ಲಿ ಹೇಗಿದೆ ಸಾಧನೆ?
ಆಂಡ್ರಿ ರಸೆಲ್ 2012 ರಿಂದ ರಸೆಲ್ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಅಲ್ಲಿಂದ ಇಲ್ಲಿಯ ವರೆಗೆ ಸಿಕ್ಕ ಅವಕಾಶದಲ್ಲಿ ಅಬ್ಬರಿಸುತ್ತಿರುವ ವಿಂಡೀಸ್ ಬ್ಯಾಟ್ಸ್‌ಮನ್ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಆಡಿದ 112 ಪಂದ್ಯದಲ್ಲಿ ರಸೆಲ್ 2262 ರನ್ ಸಿಡಿಸಿದ್ದಾರೆ. ಇದರಲ್ಲಿ 10 ಅರ್ಧಶತಕಗಳು ಸೇರಿವೆ. ಅಲ್ಲದೆ 193 ಸಿಕ್ಸರ್, 150 ಬೌಂಡರಿ ಸೇರಿವೆ. ಅಲ್ಲದೆ 2262 ಸಿಡಿಸಿ ಸೈ ಎನಿಸಿಕೊಂಡಿದ್ದಾರೆ.

ಬೌಲಿಂಗ್‌ನಲ್ಲೂ ರಸೆಲ್ ಬಿಗುವಿನ ದಾಳಿ ನಡೆಸಿದ್ದಾರೆ. 112 ಪಂದ್ಯಗಳಲ್ಲಿ ರಸೆಲ್ 96 ವಿಕೆಟ್ ಕಬಳಿಸಿದ್ದಾರೆ. ಈ ವೇಳೆ ಎರಡು ಬಾರಿ ನಾಲ್ಕು ವಿಕೆಟ್ ಹಾಗೂ ಒಂದು ಬಾರಿ ಐದು ವಿಕೆಟ್ ಸಾಧನೆ ಸಹ ಸೇರಿದೆ.
ಮಾರ್ಚ್‌ನಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಆಂಡ್ರಿ ರಸೆಲ್ ಇದೇ ಫಾರ್ಮ್‌ನ್ನು ಕಾಯ್ದುಕೊಂಡು, ಸತತ ಹತ್ತು ವರ್ಷಗಳಿಂದ ತಂಡ ಅನುಭವಿಸುತ್ತಿರುವ ಪ್ರಶಸ್ತಿ ಬರವನ್ನು ನೀಗಿಸಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications