For Quick Alerts
ALLOW NOTIFICATIONS  
For Daily Alerts
 

IPL 2024: ದುಬಾರಿ ಆಟಗಾರನ ಮೇಲೆ KKR ಅಪಾರ ನಿರೀಕ್ಷೆ

ಇಂಡಿಯನ್‌ ಪ್ರೀಮಿಯರ್ ಲೀಗ್‌ನ ಖ್ಯಾತ ತಂಡಗಳಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವೂ ಒಂದು. ಈ ತಂಡ ಸ್ಟಾರ್‌ ಆಟಗಾರರು ಹಾಗೂ ಸ್ಥಿರ ಪ್ರದರ್ಶನದಿಂದಲೇ ಎಲ್ಲರ ಚಿತ್ತವನ್ನು ಕದಿದ್ದಿದೆ. ಈ ಬಾರಿಯೂ ಕೆಕೆಆರ್‌ ತನ್ನ ಅದೃಷ್ಟ ಪರೀಕ್ಷೆಯನ್ನು ನಡೆಸಲು ಸಿದ್ಧತೆಯನ್ನು ನಡೆಸಿದೆ.

ಮಾರ್ಚ್ 23 ರಂದು ಕೆಕೆಆರ್‌ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಕೆಕೆಆರ್‌ ತಂಡ ಕಳೆದ ಬಾರಿಗಿಂತ ಈ ಬಾರಿ ಬಲಿಷ್ಠವಾಗಿದೆ. ಈ ಬಾರಿ ಕೆಕೆಆರ್‌ ವಿಶ್ವದ ಸ್ಟಾರ್‌ ಪೇಸರ್‌ ಮಿಚೆಲ್‌ ಸ್ಟಾರ್ಕ್‌ ಅವರಿಗೆ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಕೆಕೆಆರ್‌ ಚಾಂಪಿಯನ್‌ ಪಟ್ಟಕೇರುವ ಕನಸು ಕಾಣುತ್ತಿದ್ದು, ಈ ನಿಟ್ಟಿನಲ್ಲಿ ಅಭಿಮಾನಿಗಳು ಸ್ಟಾರ್ಕ್‌ ಅವರ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಶ್ರೇಯಸ್ ಅಯ್ಯರ್ ಆರಂಭಿಕ ಪಂದ್ಯದಲ್ಲಿ ಆಡುವುದು ಅನುಮಾನ.

IPL 2024 KKR s hopes are high on the expensive player

ಮಿಚೆಲ್ ಸ್ಟಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿಉತ್ತಮ ಪ್ರದರ್ಶನ ನೀಡಿದ್ದಾರೆ. ಸ್ಟಾರ್ಕ್ ಇದುವರೆಗೆ 27 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ 34 ವಿಕೆಟ್ ಪಡೆದಿದ್ದಾರೆ. 60 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 74 ವಿಕೆಟ್ ಪಡೆದಿದ್ದಾರೆ.

ಕೆಕೆಆರ್ ಆಡುವ ಹನ್ನೊಂದರ ಬಳಗದಲ್ಲಿ ಫಿಲಿಪ್ ಸಾಲ್ಟ್ ಅನ್ನು ಸಹ ಸೇರಿಸಿಕೊಳ್ಳಬಹುದು. ಇಂಗ್ಲೆಂಡ್‌ನ ಬ್ಯಾಟರ್‌ ಸಾಲ್ಟ್ 21 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 639 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 2 ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರು ದೇಶೀಯ ಟಿ20 ಪಂದ್ಯಗಳಲ್ಲಿ 32 ಅರ್ಧಶತಕಗಳನ್ನು ಗಳಿಸಿದ್ದಾರೆ.

IPL 2024 KKR s hopes are high on the expensive player

ಮಿಡ್ಲರ್‌ ಆರ್ಡರ್‌ ಸ್ಟ್ರಾಂಗ್

ರಿಂಕು ಸಿಂಗ್, ಆಂಡ್ರೆ ರಸೆಲ್ ಮತ್ತು ನಿತೀಶ್ ರಾಣಾ ಅವರಂತಹ ಶ್ರೇಷ್ಠ ಆಟಗಾರರನ್ನು ಕೆಕೆಆರ್ ಹೊಂದಿದ್ದು, ಈ ತಂಡದ ಮಿಡ್ಲ್ ಆರ್ಡರ್ ಸ್ಟ್ರಾಂಗ್ ಆಗಿದೆ. ಈ ಆಟಗಾರರು ಆಡುವ ಹನ್ನೊಂದರಲ್ಲಿಯೂ ಸ್ಥಾನ ಪಡೆಯಬಹುದು. ವರುಣ್ ಚಕ್ರವರ್ತಿ ಸುಯ್ಯಾಶ್ ಶರ್ಮಾ ಮಧ್ಯೆ ಒಂದು ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ.

IPL 2024 KKR s hopes are high on the expensive player

ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ಚೇತನ್ ಸಕರಿಯಾ, ವರುಣ್ ಚಕ್ರವರ್ತಿ, ಸುಯ್ಯಾಶ್ ಶರ್ಮಾ,

Story first published: Saturday, March 16, 2024, 13:50 [IST]
Other articles published on Mar 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+