For Quick Alerts
ALLOW NOTIFICATIONS  
For Daily Alerts
 

IPL 2024: ಕೆಕೆಆರ್ ತಂಡದಿಂದ ಹೊರಬಿದ್ದ ಜೇಸನ್ ರಾಯ್; ಬದಲಿಯಾಗಿ ಸ್ಫೋಟಕ ಬ್ಯಾಟರ್ ಆಯ್ಕೆ

ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮಾರ್ಚ್ 22ರಂದು ಚೆನ್ನೈನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಅದ್ಧೂರಿ ಚಾಲನೆ ಸಿಗಲಿದೆ.

ಇದೇ ವೇಳೆ ವೈಯಕ್ತಿಕ ಕಾರಣಗಳಿಂದಾಗಿ ಮುಂಬರುವ 2024ರ ಐಪಿಎಲ್ ಆವೃತ್ತಿಯಿಂದ ಜೇಸನ್ ರಾಯ್ ಹೊರಬರಲು ನಿರ್ಧರಿಸಿದ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ಮತ್ತೊಬ್ಬ ಇಂಗ್ಲೆಂಡ್ ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿದೆ.

IPL 2024 KKR s Jason Roy Ruled Out of IPL Phil Salt Selected As Replacement

ಐಪಿಎಲ್‌ನ ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಫಿಲ್ ಸಾಲ್ಟ್, 2024ರ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದರು.

ಐಪಿಎಲ್ ಹೇಳಿಕೆಯ ಪ್ರಕಾರ, ಇಂಗ್ಲೆಂಡ್ ವಿಕೆಟ್-ಕೀಪರ್ ಬ್ಯಾಟರ್ ಫಿಲ್ ಸಾಲ್ಟ್ ಅವರ ಮೀಸಲು ಬೆಲೆ 1.5 ಕೋಟಿ ರೂಪಾಯಿಗೆ ಕೆಕೆಆರ್ ಫ್ರಾಂಚೈಸಿ ಖರೀದಿಸಿದೆ.

"ವೈಯಕ್ತಿಕ ಕಾರಣಗಳಿಂದಾಗಿ ಮುಂಬರುವ ಟಾಟಾ ಐಪಿಎಲ್ 2024ರಿಂದ ಜೇಸನ್ ರಾಯ್ ಹಿಂದೆ ಸರಿದ ಕಾರಣ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಫಿಲ್ ಸಾಲ್ಟ್ ಅವರನ್ನು ಬದಲಿಯಾಗಿ ಹೆಸರಿಸಿದೆ".

"ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ ನಂತರ, ಫಿಲ್ ಸಾಲ್ಟ್ ಕಳೆದ ವರ್ಷ ನಡೆದ ಮಿನಿ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದು, ಇದು ಐಪಿಎಲ್‌ನಲ್ಲಿ ಫಿಲ್ ಸಾಲ್ಟ್‌ ಅವರ ಎರಡನೇ ಆವೃತ್ತಿಯಾಗಿದೆ''.

"1.5 ಕೋಟಿ ರೂಪಾಯಿಗೆ ತನ್ನ ಮೀಸಲು ಬೆಲೆಗೆ ಕೆಕೆಆರ್ ಸೇರಿದ ಇಂಗ್ಲೆಂಡ್‌ನ ಆಕ್ರಮಣಕಾರಿ ವಿಕೆಟ್-ಕೀಪರ್ ಬ್ಯಾಟರ್ ಫಿಲ್ ಸಾಲ್ಟ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸತತ ಎರಡು ಟಿ20 ಶತಕಗಳನ್ನು ಗಳಿಸಿದರು. ಟ್ರಿನಿಡಾಡ್‌ನಲ್ಲಿ 4ನೇ ಟಿ20 ಪಂದ್ಯದಲ್ಲಿ ಕೇವಲ 48 ಎಸೆತಗಳ ಶತಕವು ಇಂಗ್ಲೆಂಡ್‌ನ ಜಂಟಿ ವೇಗದ ಶತಕವಾಗಿದೆ," ಎಂದು ಐಪಿಎಲ್ ತಿಳಿಸಿದೆ.

IPL 2024 KKR s Jason Roy Ruled Out of IPL Phil Salt Selected As Replacement

2023ರ ಐಪಿಎಲ್‌ನಲ್ಲಿ ಫಿಲ್ ಸಾಲ್ಟ್ ಮತ್ತು ಜೇಸನ್ ರಾಯ್ ಪ್ರದರ್ಶನವೇನು?

ಐಪಿಎಲ್‌ನ 2023ರ ಆವೃತ್ತಿಯು ಫಿಲ್ ಸಾಲ್ಟ್ ಅವರಿಗೆ ಮೊದಲ ಪಂದ್ಯಾವಳಿಯಾಗಿತ್ತು ಮತ್ತು ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ 9 ಪಂದ್ಯಗಳನ್ನು ಆಡಿದರು. ಈ ಸಮಯದಲ್ಲಿ ಫಿಲ್ ಸಾಲ್ಟ್ 23ರ ಸರಾಸರಿಯಲ್ಲಿ 218 ರನ್ ಗಳಿಸಿದರು.

ಆದಾಗ್ಯೂ, ಫಿಲ್ ಸಾಲ್ಟ್ ಅವರ ಸ್ಟ್ರೈಕ್-ರೇಟ್ 163.91 ಆಗಿತ್ತು ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಚೇಸಿಂಗ್‌ನಲ್ಲಿ ತಮ್ಮ ಗರಿಷ್ಠ ಸ್ಕೋರ್ 87 ರನ್ ಆಗಿತ್ತು.

ಕೆರಿಬಿಯನ್‌ನಲ್ಲಿ ನಡೆದ ಟಿ20 ಸರಣಿಯಲ್ಲಿ ಫಿಲ್ ಸಾಲ್ಟ್ ಬ್ಯಾಕ್-ಟು-ಬ್ಯಾಕ್ ಶತಕಗಳನ್ನು ಸಿಡಿಸಿದ ಕಾರಣ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಮುಖ ಪ್ರಭಾವ ಬೀರಿದರು. ನಾಲ್ಕನೇ ಪಂದ್ಯದಲ್ಲಿ ಅವರು ಗಳಿಸಿದ ಶತಕವು ಇಂಗ್ಲೆಂಡ್‌ ಪರ ಚುಟುಕು ಸ್ವರೂಪದಲ್ಲಿ ಜಂಟಿ-ವೇಗದ ಶತಕವಾಗಿದೆ.

ಕಳೆದ ವರ್ಷ ಶಕೀಬ್ ಅಲ್ ಹಸನ್‌ಗೆ ಬದಲಿ ಆಟಗಾರನಾಗಿ ಜೇಸನ್ ರಾಯ್ ಅವರನ್ನು ಕೆಕೆಆರ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು ಮತ್ತು ಎರಡು ಬಾರಿಯ ಚಾಂಪಿಯನ್ ತಂಡಕ್ಕಾಗಿ ಆಡಿದ 8 ಪಂದ್ಯಗಳಲ್ಲಿ 285 ರನ್ ಗಳಿಸಿದರು.

ಇನ್ನು ಇದಕ್ಕೂ ಮುನ್ನ ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ಅವರ ಸ್ಥಾನವನ್ನು ದುಷ್ಮಂತ ಚಮೀರಾ ಅವರು ಹೊಸ ಸೀಸನ್‌ಗೆ ಮುಂಚಿತವಾಗಿ ತುಂಬಿದ್ದರಿಂದ, ಕೆಕೆಆರ್ ತಂಡದಲ್ಲಿ ಇದು ಮೊದಲ ಬದಲಿ ಆಗಿರುವುದಿಲ್ಲ.

Story first published: Sunday, March 10, 2024, 19:37 [IST]
Other articles published on Mar 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+