ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರೊಂದಿಗೆ ಬಿರುಕು ಉಂಟಾಗಿದೆ ಎಂಬ ವರದಿಗಳ ನಡುವೆಯೇ, ನಾಯಕ ಕೆಎಲ್ ರಾಹುಲ್ ತಮ್ಮ ತಂಡಕ್ಕೆ ದೊಡ್ಡ ಶಾಕ್ ನೀಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತಮ್ಮ ಮುಂಬರುವ ಐಪಿಎಲ್ 2024ರ ಪಂದ್ಯಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ದೆಹಲಿ ಪ್ರವಾಸದಲ್ಲಿ ಕೆಎಲ್ ರಾಹುಲ್ ಅನುಪಸ್ಥಿತಿಯು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೆಎಲ್ ರಾಹುಲ್ ನೇರವಾಗಿ ಪಂದ್ಯಕ್ಕೆ ಸೇರಬಹುದು ಎಂಬ ಊಹಾಪೋಹಗಳಿದ್ದರೂ, ನಾಯಕ ಎಂದಿನ ರೀತಿಯಲ್ಲಿ ತಂಡದೊಂದಿಗೆ ಪ್ರಯಾಣಿಸದಿರುವುದು ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರ ಕಣ್ಣರಳಿಸಿದೆ.

ಗಮನಾರ್ಹವಾಗಿ, 166 ರನ್‌ಗಳ ಗುರಿಯನ್ನು ಕೇವಲ 9.4 ಓವರ್‌ಗಳಲ್ಲಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ಇತ್ತೀಚಿನ 10 ವಿಕೆಟ್‌ಗಳ ಹೀನಾಯ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಹಾಗೂ ನಾಯಕನ ನಡುವೆ ಮೈದಾನದಲ್ಲಿಯೇ ಬಿಸಿಬಿಸಿ ಚರ್ಚೆಯಾಗಿತ್ತು.
ಪಂದ್ಯದ ನಂತರ ಎಲ್‌ಎಸ್‌ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಡಗೌಟ್‌ನ ಹತ್ತಿರ ನಾಯಕ ್ ಕೆಎಲ್ ರಾಹುಲ್ ಅವರೊಂದಿಗೆ ಕೋಪದಿಂದ ಮಾತುಕತೆ ನಡೆಸುತ್ತಿರುವುದು ಕಂಡುಬಂದಿದ್ದರಿಂದ ತಂಡದಲ್ಲಿ ಬಿರುಕು ಸ್ಪಷ್ಟವಾಗಿದೆ. ಆ ಬಳಿಕ ಎಲ್‌ಎಸ್‌ಜಿ ತಂಡದೊಳಗೆ ಕೆಎಲ್ ರಾಹುಲ್ ನಾಯಕತ್ವದ ಪಾತ್ರದ ಬಗ್ಗೆ ಚರ್ಚೆಗಳನ್ನು ಪ್ರಚೋದಿಸಿತು.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ ಅವಕಾಶಗಳು ತೂಗುಗತ್ತಿಯಲ್ಲಿ ನೇತಾಡುತ್ತಿರುವ ಕಾರಣ, ಎಲ್‌ಎಸ್‌ಜಿ ಪಂದ್ಯಾವಳಿಯಲ್ಲಿ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಲು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಲೇಬೇಕಾದ ಪರಿಸ್ಥಿತಿ ಹೊಂದಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ 2024ರಲ್ಲಿ ಆಡಿದ 12 ಪಂದ್ಯಗಳಿಂದ ಪ್ರಸ್ತುತ 12 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ ಮತ್ತು ಅವರ ಪ್ಲೇಆಫ್ ಹಾದಿ ಸುಲಭವಲ್ಲ.

ಈ ನಿರ್ಣಾಯಕ ಹಣಾಹಣಿಗೆ ತಂಡವು ಕಾಯುತ್ತಿರುವಾಗ, ತಮ್ಮ ಅದೃಷ್ಟವನ್ನು ದುಪ್ಪಟ್ಟುಗೊಳಿಸಲು ಎಲ್ಲ ಕಣ್ಣುಗಳು ಕೆಎಲ್ ರಾಹುಲ್ ಮತ್ತು ಎಲ್‌ಎಸ್‌ಜಿ ತಂಡದ ಮೇಲೆ ಇರಲಿವೆ. ಇದೇ ವೇಳೆ ಈ ಆವೃತ್ತಿಯಲ್ಲಿ ವಿಶೇಷವಾಗಿ 2024ರ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದ ನಂತರ, ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಫಾರ್ಮ್ ಪರಿಶೀಲನೆಗೆ ಒಳಪಟ್ಟಿದೆ.
ಆದರೆ, ಐಪಿಎಲ್ 2024ರ ಆವೃತ್ತಿಯುದ್ದಕ್ಕೂ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಪರಾಕ್ರಮವು ಶ್ಲಾಘನೀಯವಾಗಿದೆ. ಕರ್ನಾಟಕದ ವಿಕೆಟ್‌ಕೀಪರ್-ಬ್ಯಾಟರ್ 38.33ರ ಸರಾಸರಿ ಮತ್ತು 136.09ರ ಉತ್ತಮ ಸ್ಟ್ರೈಕ್‌ರೇಟ್‌ನಲ್ಲಿ 460 ರನ್ ಗಳಿಸಿದ್ದಾರೆ. ಕೆಎಲ್ ರಾಹುಲ್ ಒಮ್ಮೆ ಶತಕದಿಂದ ವಂಚಿತರಾಗಿದ್ದರೂ, ಈ ಋತುವಿನಲ್ಲಿ ಮೂರು ಅರ್ಧ ಶತಕಗಳನ್ನು ಗಳಿಸಿದರು.
ಎಲ್‌ಎಸ್‌ಜಿ ಫ್ರಾಂಚೈಸಿ ಕುರಿತು ಮಾತನಾಡುವುದಾದರೆ, 2022ರಿಂದ ಐಪಿಎಲ್ ಪಂದ್ಯಾವಳಿಗೆ ಗಮನಾರ್ಹ ಸೇರ್ಪಡೆಯಾಗಿದ್ದಾರೆ ಮತ್ತು ಇಲ್ಲಿಯವರೆಗೆ ಆಡಿದ ಎರಡೂ ಋತುಗಳಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದಾರೆ.
ಎಲ್‌ಎಸ್‌ಜಿ ತಂಡದ ಗಮನಾರ್ಹ ಖರೀದಿಗಳಲ್ಲಿ ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ಮಾರ್ಕ್ ವುಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರಂತಹ ಆಟಗಾರರು ಸೇರಿದ್ದಾರೆ. ನಂತರ ಕೆಎಲ್ ರಾಹುಲ್ ಅವರನ್ನು ತಂಡದ ನಾಯಕರಾಗಿ ನೇಮಿಸಲಾಯಿತು. ಆಂಡಿ ಫ್ಲವರ್ ಮುಖ್ಯ ಕೋಚ್ ಮತ್ತು ಗೌತಮ್ ಗಂಭೀರ್ ತಂಡದ ಮೆಂಟರ್ ಆಗಿ ನೇಮಕಗೊಂಡರು.
2022 ಮತ್ತು 2023ರ ಎರಡೂ ಋತುಗಳಲ್ಲಿ ಗುಂಪು ಹಂತದಲ್ಲಿ ಮೂರನೇ ಸ್ಥಾನ ಗಳಿಸಿದರೂ, ನಂತರ ಪ್ಲೇಆಫ್‌ನಲ್ಲಿ ಸೋತು ಹೊರಬಿದ್ದರು.