ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ.. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಅಂಗಳಕ್ಕೆ ಇಳಿದಾಗಲೆಲ್ಲಾ ದಾಖಲೆ ನಿರ್ಮಾಣ. ಈ ಪ್ಲೇಯರ್ ಕ್ರಿಕೆಟ್‌ನ ಮೂರು ಫಾರ್ಮೆಟ್‌ಗಳು ಹೊಂದಿಕೊಳ್ಳುವ ಆಟಗಾರ. ಟೆಸ್ಟ್, ಏಕದಿನ, ಟಿ20 ಫಾರ್ಮೆಟ್‌ಗೆ ತನ್ನನ್ನು ತಾನು ಅಡ್ಜಸ್ಟ್ ಮಾಡಿಕೊಳ್ಳುವ ಆಟಗಾರ.
ನಿಜಕ್ಕೂ ಈ ಕಲೆಯನ್ನು ವಿರಾಟ್ ಕರಗತ ಮಾಡಿಕೊಂಡಿದ್ದಾರೆ. ಅಸಲಿಗೆ ಒಂದು ಫಾರ್ಮೆಟ್‌ನಿಂದ ಇನ್ನೊಂದು ಫಾರ್ಮೆಟ್‌ಗೆ ಹೊಂದಿಕೊಳ್ಳುವುದು ಅಷ್ಟು ಸುಲಭದ ವಿಷಯ ಅಲ್ಲವೇ ಅಲ್ಲ. ವಿರಾಟ್ ನಿಧಾನಗತಿಯಲ್ಲಿ ಇನ್ನಿಂಗ್ಸ್ ಮುನ್ನಡೆಸುವ ಕಲೆಯನ್ನು ಹೊಂದಿರುವ ಪ್ಲೇಯರ್.. ಆದರೆ ಇವರ ಬ್ಯಾಟಿಂಗ್ ಧಾಟಿಯನ್ನು ನೋಡಿದರೆ ಇವರಿಗೆ ಟಿ20 ತಂಡದಲ್ಲಿ ಸ್ಥಾನ ಸಿಗುತ್ತದಾ ಎಂಬ ಸಂಶಯ ಇರುತ್ತದೆ. ಆದರೆ ವಿರಾಟ್ ಎಲ್ಲ ಫಾರ್ಮೆಟ್‌ಗೂ ಹೊಂದಿಕೊಳ್ಳುವ ಆಟಗಾರ.

ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ನಿಧಾನಗತಿಯಲ್ಲೇ ಇನ್ನಿಂಗ್ಸ್ ಆರಂಭಿಸಿದರೂ ಸಹ ಅಗತ್ಯವಿದ್ದಾಗ ಬಿಗ್ ಶಾಟ್‌ಗಳನ್ನು ಬಾರಿಸುವುದರಲ್ಲಿ ಹಿಂದೆ ಬೀಳುವುದಿಲ್ಲ. ಕೆಟ್ಟ ಎಸೆತ ಕಂಡು ಬಂದರೆ ಅವುಗಳನ್ನು ಗ್ರೌಂಡ್ ನಿಂದ ಹೊರಕ್ಕೆ ತಳ್ಳುವ ಕ್ಷಮತೆಯನ್ನು ವಿರಾಟ್ ಹೊಂದಿದ್ದಾರೆ. ಹೀಗಾಗಿ ಆರಂಭದಲ್ಲಿರುವ ಇರುವ ಸ್ಟ್ರೈಕ್ ರೇಟ್ ಹಾಗೂ ಇನಿಂಗ್ಸ್ ಮುಕ್ತಾಯವಾಗುವಗಿನ ಸ್ಟ್ರೈಕ್ ರೇಟ್‌ಗೆ ವ್ಯತ್ಯಾಸವಿರುತ್ತದೆ.
ಭಾರತ ತಂಡದ ಮಾಜಿ ನಾಯಕ, ಕೊಹ್ಲಿ ತಮ್ಮ ಹೆಸರಿನಲ್ಲಿ ಅನೇಕ ಐಪಿಎಲ್ ದಾಖಲೆಗಳನ್ನು ಮಾಡಿದ್ದಾರೆ ಮತ್ತು ಇಲ್ಲಿಯವರೆಗೆ 7,263 ರನ್ ಗಳಿಸಿದ್ದಾರೆ, ಆದರೆ ಕಿಂಗ್ ಕೊಹ್ಲಿ ಮುರಿಯಲು ಸಾಧ್ಯವೇ ಇಲ್ಲದ ಹಲವು ದಾಖಲೆಗಳು ಇವೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಹಿರಿಮೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾಗ ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ ಅಬ್ಬರಿಸಿದರು. ಇವರ ಹೆಸರಿನಲ್ಲೇ ಅತಿ ವೇಗದ ಶತಕವೂ ಇದೆ.

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವೇಗದ ಶತಕದ ಬಾರಿಸಿದ್ದಾರೆ. ಅದು 2016 ರಲ್ಲಿ ಬಂದಿದೆ. ಆರ್‌ಸಿಬಿ ಹಾಗೂ ಪಂಜಾಬ್ ನಡುವೆ ನಡೆದ ಪಂದ್ಯದಲ್ಲಿ ವಿರಾಟ್ 47 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆ ಇನ್ನಿಂಗ್ಸ್‌ನಲ್ಲಿ ಅವರು 12 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದ್ದರು. ಕ್ರಿಸ್ ಗೇಲ್ ಅವರ ವೇಗದ ಶತಕ ಮತ್ತು ವಿರಾಟ್ ಕೊಹ್ಲಿ ಅವರ ವೇಗದ ಶತಕಗಳ ನಡುವಿನ 17 ಎಸೆತಗಳ ವ್ಯತ್ಯಾಸವು ಇದೆ. ಟಿ20 ಸ್ವರೂಪದಲ್ಲಿ ಇದು ತುಂಬಾ ಹೆಚ್ಚು.
ಕೊಹ್ಲಿ ತನಗೆ ಬೇಕಾದಾಗ ನಿಧಾನವಾಗಿ ಮತ್ತು ವೇಗವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಆದರೆ ಪವರ್ ಹಿಟ್ಟಿಂಗ್ ಸಾಮರ್ಥ್ಯದ ವಿಷಯದಲ್ಲಿ, ಅವರು ಬಲಿಷ್ಠ ಬ್ಯಾಟ್ಸ್‌ಮನ್‌ಗಳ ಮುಂದೆ ಹಿಂದೆ ಬೀಳುತ್ತಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟ್ಸ್‌ಮನ್ ಕೊಹ್ಲಿಯೇ ಆಗಿದ್ದರೂ, ಅತಿ ವೇಗದ ಶತಕ ಬಾರಿಸಿದ ದಾಖಲೆ ಇವರಿಂದ ದೂರವಾದಂತಿದೆ. ಅಲ್ಲದೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಈ ದಾಖಲೆಯನ್ನು ವಿರಾಟ್ ಮುರಿಯುವುದು ಕಷ್ಟವೇ ಸರಿ..