IPL 2024: ರಸೆಲ್ ಸುನಾಮಿ ಆಟಕ್ಕೆ ನಲುಗಿದ ಎಸ್‌ಆರ್‌ಎಚ್: ರೋಚಕ ಗೆಲುವಿನಲ್ಲಿ ಮಿಂಚಿದ ಹರ್ಷಿತ್ ರಾಣಾ
ಕೊನೆಯ ಕ್ಷಣದವರೆಗೂ ಅಭಿಮಾನಿಗಳನ್ನು ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದ ಎಸ್‌ಆರ್‌ಎಚ್ ಹಾಗೂ ಕೆಕೆಆರ್ ನಡುವಣ ಪಂದ್ಯದಲ್ಲಿ ಆತಿಥೇಯ ತಂಡ ಗೆಲುವಿನ ನಗೆ ಬೀರಿದೆ. ಈಡನ್ ಗಾರ್ಡನ್ ಅಂಗಳದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 4 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ, ಐಪಿಎಲ್ 2024ರಲ್ಲಿ ಕೆಕೆಆರ್ ಶುಭಾರಂಭ ಮಾಡಿದೆ. ಮೊದಲು ಕೆಕೆಆರ್ ಬ್ಯಾಟರ್ ಆಂಡ್ರಿ ರಸೆಲ್ ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕಿದರೆ, ನಂತರ ಹೆನ್ರಿಚ್ ಕ್ಲಾಸೇನ್ ತಮ್ಮ ಕ್ಲಾಸಿಕ್ ಆಟದ ಮುಖಾಂತರ ಅಬ್ಬರಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 208 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಎಸ್‌ಆರ್‌ಎಚ್ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗಳಿಂದ 204 ರನ್ ಸೇರಿಸಿ ಸೋಲು ಕಂಡಿತು.

ಉತ್ತಮ ಆರಂಭ
ಗುರಿಯನ್ನು ಹಿಂಬಾಲಿಸಿದ ಎಸ್‌ಆರ್‌ಎಚ್ ತಂಡದ ಆರಂಭ ಭರ್ಜರಿಯಾಗಿತ್ತು. ತಂಡದ ಅನುಭವಿ ಆಟಗಾರ ಮಯಾಂಕ್ ಅಗರ್‌ವಾಲ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ಸಮಯೋಚಿತ ಆಟದ ಪ್ರದರ್ಶನ ನೀಡಿತು. ಅಗತ್ಯ ರನ್ ಗಳನ್ನು ಕಲೆ ಹಾಕುತ್ತಲೇ ಸಾಗಿದ ಜೋಡಿ ಪವರ್ ಪ್ಲೇನಲ್ಲಿ ಪವರ್ ಫುಲ್ ಆರಂಭ ನೀಡಿತು. ಈ ಜೋಡಿ 33 ಎಸೆತಗಳಲ್ಲಿ 60 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. ಮಯಾಂಕ್ ಹಾಗೂ ಅಭಿಷೇಕ್ ಶರ್ಮಾ ಇಬ್ಬರೂ ಸಹ 32 ರನ್ ಕಾಣಿಕೆ ನೀಡಿದರು.
ಮೊದಲ ವಿಕೆಟ್ ಜೊತೆಯಾಟದ ಬಳಿಕ ಯಾವುದೇ ಒಂದು ಜೊತೆಯಾಟ ಹೆಚ್ಚು ಗಟ್ಟಿಯಾಗಿ ನಿಲ್ಲಲಿಲ್ಲ. ರಾಹುಲ್ ತ್ರಿಪಾಠಿ (20), ಎಸ್‌ಆರ್‌ಎಚ್ ತಂಡದ ಮಾಜಿ ನಾಯಕ ಎಂಡೆನ್ ಮಾರ್ಕ್ರಮ್ (18) ರನ್‌ಗಳಿಗೆ ಆಟ ಮುಗಿಸಿದರು.

ಆರನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ
ಆರನೇ ವಿಕೆಟ್‌ಗೆ ಹ್ಯಾನಿಚ್ ಕ್ಲಾಸೆನ್ ಹಾಗೂ ಶಹಬಾಜ್ ಅಹ್ಮದ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಕೇವಲ 16 ಎಸೆತಗಳಲ್ಲಿ 58 ರನ್ ಸೇರಿಸಿ ಅಬ್ಬರಿಸಿತು. ಕ್ಲಾಸೇನ್ 8 ಸಿಕ್ಸರ್‌ಗಳ ಸಹಾಯದಿಂದ 63 ರನ್ ಬಾರಿಸಿ ತಂಡಕ್ಕೆ ಜಯದ ಮಾಲೆ ತೊಡಿಸುವ ಸೂಚನೆ ನೀಡಿದ್ದರು. ಆದರೆ ಕೊನೆಯ ಓವರ್‌ನಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಶಹಬಾಜ್ ಸಹ 16 ರನ್‌ಗಳಿಗೆ ಆಟ ಮುಗಿಸಿದರು.
ಮಿಂಚಿದ ಭಾರತದ ಬೌಲರ್
ಕೆಕೆಆರ್ ತಂಡದ ಪರ ದುಬಾರಿ ಬೌಲರ್ ಮಿಚೆಲ್ ಸ್ಟಾರ್ಕ್ 19ನೇ ಓವರ್‌ನಲ್ಲಿ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡರು. ಆದರೆ ಭಾರತದ ಬೌಲರ್ ಹರ್ಷಿತ್ ರಾಣಾ ಕೊನೆಯ ಓವರ್‌ನಲ್ಲಿ 13 ರನ್ ನೀಡದಂತೆ ತಡೆದ ಮಿಂಚಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಅರ್ ಆರಂಭ ಕಳಪೆಯಾಗಿತ್ತು. ಸ್ಟಾರ್ ಆಟಗಾರರಾದ ಸುನಿಲ್ ನಾರಾಯಣ್ (2), ಇಲ್ಲದ ರನ್ ಕದಿಯಲು ಹೋಗಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್ (7), ನಾಯಕ ಶ್ರೇಯಸ್ ಅಯ್ಯರ್ (0), ಭರವಸೆಯ ಆಟಗಾರ ನಿತೀಶ್ ರಾಣ್ (9) ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಹುಸಿಯಾಗಿಸಿದರು.
ಐದನೇ ವಿಕೆಟ್‌ಗೆ 54 ರನ್ ಜೊತೆಯಾಟ
51 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆರಂಭಿಕ ಫಿಲ್ ಸಾಲ್ಟ್ ಹಾಗೂ ರಮಣದೀಪ್ ಸಿಂಗ್ ಆಧಾರವಾದರು. ಈ ಜೋಡಿಯನ್ನು ಕಟ್ಟಿ ಹಾಕಲು ಎಸ್‌ಆರ್‌ಎಚ್ ಮಾಡಿಕೊಂಡ ಪ್ಲ್ಯಾನ್ ಎಲ್ಲಾ ಉಲ್ಟಾ ಆಯಿತು. ರಮಣದೀಪ್ ಸಿಂಗ್ ಅವರಿಗೆ ಪ್ಯಾಟ್ ಕಮಿನ್ಸ್ ಖೆಡ್ಡಾ ತೋಡಿದರು. ಇವರು 17 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ 35 ರನ್ ಸಿಡಿಸಿದರು. ಐದನೇ ವಿಕೆಟ್‌ಗೆ ಫಿಲ್ ಸಾಲ್ಟ್ ಹಾಗೂ ರಮಣದೀಪ್ ಸಿಂಗ್ ಕೇವಲ 29 ಎಸೆತಗಳಲ್ಲಿ 54 ರನ್ ಸೇರಿಸಿ ತಂಡಕ್ಕೆ ಆಧಾರವಾದರು.
ಫಿಲ್ ಸಾಲ್ಟ್ ಅರ್ಧಶತಕ
ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದಲೇ ಹೆಸರು ವಾಸಿಯಾಗಿರುವ ಫಿಲ್ ಸಾಲ್ಟ್ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು 40 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 54 ರನ್ ಬಾರಿಸಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಮಯಾಂಕ್ ಮಾರ್ಕಾಂಡೆ ಅವರ ಎಸೆತದಲ್ಲಿ ಜಾನ್ಸೆನ್ ಹಿಡಿದ ಅಮೋಘ ಕ್ಯಾಚ್‌ಗೆ ಇವರು ಬಲಿಯಾದರು.
ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ಟಾರ್ ಬ್ಯಾಟರ್ ಆಂಡ್ರಿ ರಸೆಲ್ ಅಮೋಘ ಬ್ಯಾಟಿಂಗ್ ನಡೆಸಿದರು. ತವರಿನಲ್ಲಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕಿದ ರಸೆಲ್ ಆರ್ಭಟಿಸಿದರು. ಸ್ಪಿನ್ ಬೌಲರ್‌ಗಳು ಹಾಗೂ ವೇಗದ ಬೌಲರ್‌ಗಳನ್ನು ಲೆಕ್ಕಿಸದೆ ಬ್ಯಾಟ್ ಮಾಡಿದ ರಸೆಲ್ ತಮ್ಮ ನೈಜ ಆಟವನ್ನು ಆಡಿದರು. 17ನೇ ಆವೃತ್ತಿಯ ಐಪಿಎಲ್‌ನ ಮೂರನೇ ಪಂದ್ಯದಲ್ಲಿ ರಸೆಲ್ ತಮ್ಮ ಸುನಾಮಿ ಬ್ಯಾಟಿಂಗ್‌ನಿಂದ ಎದುರಾಳಿಗಳಿಗೆ ಕಾಡಿದರು. ರಸೆಲ್ 25 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 64 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications