For Quick Alerts
ALLOW NOTIFICATIONS  
For Daily Alerts
 

IPL 2024: ಲೀಗ್ ಹಂತದ ಅಂತ್ಯಕ್ಕೆ ಅತಿ ಹೆಚ್ಚು ರನ್, ವಿಕೆಟ್ ಪಡೆದವರು; ಆರೆಂಜ್, ಪರ್ಪಲ್ ಕ್ಯಾಪ್ ಮಾಲೀಕರ ಪಟ್ಟಿ

024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮ ಘಟ್ಟ ತಲುಪಿದ್ದು, ಈಗೇನಿದ್ದರೂ ಅಗ್ರ ನಾಲ್ಕು ತಂಡಗಳ ನಡುವಿನ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ.

17ನೇ ಐಪಿಎಲ್ ಆವೃತ್ತಿಯ ಎಲ್ಲಾ 70 ಪಂದ್ಯಗಳ ಲೀಗ್ ಹಂತವು ಮೇ 19ರಂದು ಮುಕ್ತಾಯ ಕಂಡಿದ್ದು, ಕ್ರಿಕೆಟ್ ಅಭಿಮಾನಿಗಳಿಗಾಗಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ಕಾಯುತ್ತಿವೆ.

IPL 2024 List of Highest Run Getters Wicket Takers After End of League Stage

ಇನ್ನು ಭಾನುವಾರದ ಮಧ್ಯಾಹ್ನ ಪಂದ್ಯವು ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಹೈ-ಸ್ಕೋರಿಂಗ್ ಪಂದ್ಯವಾಗಿದ್ದರೆ, ಸಂಜೆ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವು ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತು.

ಈ ಮೂಲಕ ಅಂಕಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅಗ್ರಸ್ಥಾನ ಪಡೆದರೆ, ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವು ಸನ್ ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಲು ನೆರವಾಯಿತು.

IPL 2024 List of Highest Run Getters Wicket Takers After End of League Stage

ಹೀಗಾಗಿ ಮೇ 21ರಂದು ಕ್ವಾಲಿಫೈಯರ್ 1ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್ ರೈಸರ್ಸ್ ಹೈದರಾಬಾದ್ ಸೆಣಸಾಡಲಿದ್ದರೆ, ಮೇ 22ರಂದು ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

ಎರಡೂ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿವೆ. ನಂತರದ ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿವೆ.

70 ಪಂದ್ಯಗಳ ಲೀಗ್ ಹಂತದ ಮುಕ್ತಾಯದೊಂದಿಗೆ, ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್, ಹೆಚ್ಚಿನ ಸಿಕ್ಸರ್‌ಗಳು ಮತ್ತು ಹೆಚ್ಚಿನ ಬೌಂಡರಿ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯನ್ನು ಗಮನಿಸೋಣ.

IPL 2024 List of Highest Run Getters Wicket Takers After End of League Stage

ಆರೆಂಜ್ ಕ್ಯಾಪ್ ಹೋಲ್ಡರ್

ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಅಗ್ರಸ್ಥಾನ. ಇದು ಅವರ ಎರಡನೇ ಅತ್ಯುತ್ತಮ ಐಪಿಎಲ್ ಆವೃತ್ತಿಯಾಗುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಆಡಿದ 14 ಪಂದ್ಯಗಳಲ್ಲಿ 64.36ರ ಸರಾಸರಿಯಲ್ಲಿ 708 ರನ್ ಗಳಿಸಿದ್ದಾರೆ.

ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳು

1) ವಿರಾಟ್ ಕೊಹ್ಲಿ (ಆರ್‌ಸಿಬಿ) - 14 ಪಂದ್ಯಗಳಲ್ಲಿ 708 ರನ್
2) ರುತುರಾಜ್ ಗಾಯಕ್ವಾಡ್ (ಸಿಎಸ್‌ಕೆ) - 14 ಪಂದ್ಯಗಳಲ್ಲಿ 583 ರನ್
3) ಟ್ರಾವಿಸ್ ಹೆಡ್ (ಎಸ್‌ಆರ್‌ಹೆಚ್) - 12 ಪಂದ್ಯಗಳಲ್ಲಿ 533 ರನ್
4) ರಿಯಾನ್ ಪರಾಗ್ (ಆರ್‌ಆರ್) - 13 ಪಂದ್ಯಗಳಲ್ಲಿ 531 ರನ್
5) ಸಾಯಿ ಸುದರ್ಶನ್ (ಜಿಟಿ) - 12 ಪಂದ್ಯಗಳಲ್ಲಿ 527 ರನ್

ಪರ್ಪಲ್ ಕ್ಯಾಪ್ ಹೋಲ್ಡರ್

ಐಪಿಎಲ್ 2024ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಕಳಪೆ ಅಭಿಯಾನ ಹೊಂದಿರಬಹುದು, ಆದರೆ ಅವರ ವೇಗದ ಬೌಲರ್ ಹರ್ಷಲ್ ಪಟೇಲ್ ತನ್ನ ತಲೆಯ ಮೇಲೆ ಪರ್ಪಲ್ ಕ್ಯಾಪ್ ಹೊಂದಿದ್ದಾರೆ. ಆಡಿದ 14 ಪಂದ್ಯಗಳಿಂದ 24 ವಿಕೆಟ್‌ಳೊಂದಿಗೆ ಲೀಗ್ ಹಂತವನ್ನುಮುಗಿಸಿದರು.

ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಅವರು 12 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಹೊಂದಿರುವ ಕಾರಣ, ಹರ್ಷಲ್ ಪಟೇಲ್ ಸ್ಥಾನಪಲ್ಲಟಗೊಳಿಸಬಹುದಾದ ಟಾಪ್ 5ರಲ್ಲಿರುವ ಏಕೈಕ ಬೌಲರ್.

ಐಪಿಎಲ್ 2024ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು

1) ಹರ್ಷಲ್ ಪಟೇಲ್ (ಪಂಜಾಬ್ ಕಿಂಗ್ಸ್) - 14 ಪಂದ್ಯಗಳಲ್ಲಿ 24 ವಿಕೆಟ್‌
2) ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್) - 13 ಪಂದ್ಯಗಳಲ್ಲಿ 20 ವಿಕೆಟ್‌
3) ಅರ್ಶ್‌ದೀಪ್ ಸಿಂಗ್ (ಪಂಜಾಬ್ ಕಿಂಗ್ಸ್) - 14 ಪಂದ್ಯಗಳಲ್ಲಿ 19 ವಿಕೆಟ್‌
4) ವರುಣ್ ಚಕ್ರವರ್ತಿ (ಕೋಲ್ಕತ್ತಾ ನೈಟ್ ರೈಡರ್ಸ್) - 12 ಪಂದ್ಯಗಳಲ್ಲಿ 18 ವಿಕೆಟ್‌
5) ತುಷಾರ್ ದೇಶಪಾಂಡೆ (ಚೆನ್ನೈ ಸೂಪರ್ ಕಿಂಗ್ಸ್) - 13 ಪಂದ್ಯಗಳಲ್ಲಿ 17 ವಿಕೆಟ್

Story first published: Monday, May 20, 2024, 9:55 [IST]
Other articles published on May 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+