For Quick Alerts
ALLOW NOTIFICATIONS  
For Daily Alerts
 

IPL 2024: ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೂಲಬೆಲೆ ಹೊಂದಿರುವ ಆಟಗಾರರ ಪಟ್ಟಿ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಆಡಳಿತ ಮಂಡಳಿಯು ಡಿಸೆಂಬರ್ 19ರಂದು ದುಬೈನಲ್ಲಿ ನಡೆಯುವ ಮಿನಿ ಹರಾಜಿಗೆ ಬರಲಿರುವ ಆಟಗಾರರ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ.

2024ರ ಐಪಿಎಲ್ ಹರಾಜು ಕಾರ್ಯಕ್ರಮ ಇದೇ ಮೊದಲ ಬಾರಿಗೆ ಭಾರತದ ಹೊರಗೆ ನಡೆಯುತ್ತಿದೆ ಮತ್ತು ಒಟ್ಟು 333 ಆಟಗಾರರು ಆಯ್ಕೆಗೆ ಮಾಡಲು ಲಭ್ಯವಿರುತ್ತಾರೆ.

 IPL 2024: List of Players With Highest Base Price in Mini Auction

ಈ 333 ಆಟಗಾರರಲ್ಲಿ 214 ಮಂದಿ ಭಾರತೀಯರಾಗಿದ್ದರೆ, 119 ಆಟಗಾರರು ಸಾಗರೋತ್ತರ ಆಟಗಾರರಾಗಿದ್ದು, ಇದರಲ್ಲಿ ಇಬ್ಬರು ಸಹವರ್ತಿ ರಾಷ್ಟ್ರಗಳ ಆಟಗಾರರಾಗಿದ್ದಾರೆ. ಒಟ್ಟು 116 ಕ್ಯಾಪ್ಡ್ ಮತ್ತು 215 ಅನ್‌ಕ್ಯಾಪ್ಡ್ ಆಟಗಾರರು ಇದ್ದಾರೆ ಎಂದು ಐಪಿಎಲ್ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ.

333 ಆಟಗಾರರ ಪೈಕಿ ಕೇವಲ 23 ಆಟಗಾರರು ಮಾತ್ರ ಅತಿ ಹೆಚ್ಚು ಅಂದರೆ, 2 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದು, ಇದರಲ್ಲಿ ಮೂವರು ಭಾರತೀಯರು ಮತ್ತ ಇಪ್ಪತ್ತು ಆಟಗಾರರು ಸಾಗರೋತ್ತರದವರಾಗಿದ್ದಾರೆ.

ಕೇವಲ 3 ಭಾರತೀಯರು 2 ಕೋಟಿ ರೂಪಾಯಿ ಮೂಲಬೆಲೆಗೆ ನೋಂದಣಿ ಮಾಡಿಕೊಂಡಿದ್ದಾರೆ ಮತ್ತು ಅವರೆಲ್ಲರೂ ಭಾರತ ತಂಡಕ್ಕಾಗಿ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು ಪ್ರಸ್ತುತ ತಂಡದ ಭಾಗವಾಗಿದ್ದಾರೆ.

ಗಮನಾರ್ಹ ಸಾಗರೋತ್ತರ ಆಟಗಾರರಲ್ಲಿ ದೊಡ್ಡ ಹೆಸರುಗಳೆಂದರೆ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್, ಕಳೆದ ತಿಂಗಳು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಬಿಡುಗಡೆ ಮಾಡಿತು. ಇನ್ನು ಆಸ್ಟ್ರೇಲಿಯಾದ ವಿಶ್ವಕಪ್ ಫೈನಲ್ ಹೀರೋ ಟ್ರಾವಿಸ್ ಹೆಡ್ ಕೂಡ 2 ಕೋಟಿ ರೂಪಾಯಿ ಹರಾಜಿನ ದಿನದಂದು ಹೆಚ್ಚು ಫ್ರಾಂಚೈಸಿಗಳು ಗುರಿ ಮಾಡುವ ಸಾಧ್ಯತೆಯಿದೆ.

ದಕ್ಷಿಣ ಆಫ್ರಿಕಾದ ಉದಯೋನ್ಮುಖ ವೇಗಿ ಜೆರಾಲ್ಡ್ ಕೊಯೆಟ್ಜಿ ಕೂಡ 2 ರೂಪಾಯಿ ಕೋಟಿ ಬ್ರಾಕೆಟ್‌ನಲ್ಲಿದ್ದರೆ, ಪ್ಯಾಟ್ ಕಮ್ಮಿನ್ಸ್, ಕ್ರಿಸ್ ವೋಕ್ಸ್, ಜೋಶ್ ಇಂಗ್ಲಿಸ್ ಮತ್ತು ಲಾಕಿ ಫರ್ಗುಸನ್ ಸಹ ಅತಿ ಹೆಚ್ಚು ಮೂಲ ಬೆಲೆ ವಿಭಾಗದಲ್ಲಿದ್ದಾರೆ.

ಇದೇ 2 ಕೋಟಿ ರೂಪಾಯಿ ಮೂಲ ಬೆಲೆ ಅಡಿಯಲ್ಲಿ ತನ್ನನ್ನು ನೋಂದಾಯಿಸಿಕೊಂಡಿರುವ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ 2015ರಲ್ಲಿ ಸ್ಟಾರ್ಕ್ ಕೊನೆಯ ಬಾರಿ ಐಪಿಎಲ್ ಆಡಿದ್ದರು.

ಆರ್‌ಸಿಬಿ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸುವ ನೆಚ್ಚಿನ ತಂಡಗಳಲ್ಲಿ ಒಂದಾಗಲಿದೆ. ಏಕೆಂದರೆ ಆರ್‌ಸಿಬಿಗೆ ಬಲವಾದ ವೇಗದ ಬೌಲಿಂಗ್ ದಾಳಿಯ ಅಗತ್ಯವಿದೆ.

ಈ ಮೊದಲು ಹೇಳಿದಂತೆ 2 ಕೋಟಿ ರೂಪಾಯಿಗಳ ವಿಭಾಗದಲ್ಲಿ ಕೇವಲ ಮೂವರು ಭಾರತೀಯ ಆಟಗಾರರಿದ್ದಾರೆ, ಎಲ್ಲರೂ ಭಾರತ ತಂಡದ ಕ್ಯಾಪ್ ಪಡೆದ ಆಟಗಾರರು.

ಅವರೆಂದರೆ ಶಾರ್ದೂಲ್ ಠಾಕೂರ್, ಹರ್ಷಲ್ ಪಟೇಲ್ ಮತ್ತು ಉಮೇಶ್ ಯಾದವ್. ಫ್ರಾಂಚೈಸಿಗಳು ತಮ್ಮ ಪರ್ಸ್‌ನಲ್ಲಿರುವ ಸೀಮಿತ ಹಣದೊಂದಿಗೆ ಎಲ್ಲರನ್ನೂ ಖರೀದಿಸಲು ಮುಂದಾಗಲಿವೆಯೇ ಎಂಬುದು ಕುತೂಹಲಕಾರಿಯಾಗಿದೆ.

ಮೂಲ ಬೆಲೆ 2 ಕೋಟಿ ರೂಪಾಯಿ ಹೊಂದಿರುವ ಆಟಗಾರರು

ಭಾರತ; ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್.

ಇಂಗ್ಲೆಂಡ್; ಹ್ಯಾರಿ ಬ್ರೂಕ್, ಕ್ರಿಸ್ ವೋಕ್ಸ್, ಜೇಮೀ ಓವರ್ಟನ್, ಡೇವಿಡ್ ವಿಲ್ಲಿ, ಬೆನ್ ಡಕೆಟ್, ಆದಿಲ್ ರಶೀದ್, ಜೇಮ್ಸ್ ವಿನ್ಸ್.

ಆಸ್ಟ್ರೇಲಿಯಾ; ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಪ್ಯಾಟ್ ಕಮ್ಮಿನ್ಸ್, ಜೋಶ್ ಇಂಗ್ಲಿಸ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್, ಸೀನ್ ಅಬಾಟ್.

ದಕ್ಷಿಣ ಆಫ್ರಿಕಾ; ರಿಲೀ ರೊಸೊವ್, ಜೆರಾಲ್ಡ್ ಕೋಯಟ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್.

ನ್ಯೂಜಿಲೆಂಡ್; ಲಾಕಿ ಫರ್ಗುಸನ್

ಅಫ್ಘಾನಿಸ್ತಾನ; ಮುಜೀಬ್-ಉರ್-ರೆಹಮಾನ್

ಬಾಂಗ್ಲಾದೇಶ; ಮುಸ್ತಾಫಿಜುರ್ ರೆಹಮಾನ್

ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಐಪಿಎಲ್ 2024ರ ಮಿನಿ-ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ ಹತ್ತು ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಲು ಪ್ರಯತ್ನಿಸಲಿವೆ.

2023ರ ವಿಶ್ವಕಪ್‌ನ ಉದಯೋನ್ಮುಖ ಪ್ರತಿಭೆಗಳಾದ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಮತ್ತು ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್ಜಾಯ್ ತಮ್ಮನ್ನು 50 ಲಕ್ಷ ರೂಪಾಯಿಗಳ ಬ್ರಾಕೆಟ್‌ನಲ್ಲಿ ಇರಿಸಿಕೊಂಡಿದ್ದಾರೆ. ಈ ಆಟಗಾರರಿಗಾಗಿ ತೀವ್ರ ಬಿಡ್ಡಿಂಗ್ ವಾರ್ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

Story first published: Tuesday, December 12, 2023, 10:55 [IST]
Other articles published on Dec 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+