IPL 2024: RCB ವಿರುದ್ಧದ ಪಂದ್ಯದಲ್ಲಿ SRH ಅಳಿಸಿಹಾಕಿದ ದಾಖಲೆಗಳ ಪಟ್ಟಿ
ಸೋಮವಾರ, ಏಪ್ರಿಲ್ 15ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 287 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ದಾಖಲಿಸಿತು.
ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ಹಿಂದಿನ ಅತ್ಯುತ್ತಮ 277 ರನ್‌ಗಳನ್ನು ಮಾತ್ರವಲ್ಲದೆ, ಟಿ20 ಕ್ರಿಕೆಟ್ ಇತಿಹಾಸದಲ್ಲಿನ ಹಲವಾರು ದಾಖಲೆಗಳನ್ನು ಹಿಂದಿಕ್ಕುವ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಹೆಸರನ್ನು ರಾರಾಜಿಸುವಂತೆ ಮಾಡಿದೆ.

287 ರನ್‌ಗಳು ಇದೀಗ ಫ್ರಾಂಚೈಸಿ ಕ್ರಿಕೆಟ್ ಲೀಗ್‌ನಲ್ಲಿ ತಂಡದ ಅತ್ಯಧಿಕ ಮೊತ್ತವಾಗಿದೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದೆ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ತಂಡದ 3 ವಿಕೆಟ್‌ಗೆ 314 ರನ್‌ಗಳ ನಂತರ ಎರಡನೇ ಸ್ಥಾನದಲ್ಲಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಇನ್ನಿಂಗ್ಸ್‌ನಲ್ಲಿ 22 ಸಿಕ್ಸರ್‌ಗಳ ಸಿಡಿಸುವ ಮೂಲಕ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಐಪಿಎಲ್ ದಾಖಲೆಯನ್ನು ಮುರಿದಿದೆ. ಈ ಹಿಂದೆ 2013ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ 21 ಸಿಕ್ಸರ್‌ಗಳನ್ನು ಸಿಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಾಖಲೆಯನ್ನು ಹಿಂದಿಕ್ಕಿತು.

ಟ್ರಾವಿಸ್ ಹೆಡ್ ಈ ಐತಿಹಾಸಿಕ ಇನ್ನಿಂಗ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇವಲ 39 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಬಾರಿಸಿದರು.
ಈ ಸ್ಫೋಟಕ ಶತಕವು ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್‌ನಿಂದ ವೇಗವಾದ ಶತಕ ಮಾತ್ರವಲ್ಲದೆ, ಐಪಿಎಲ್‌ನ ಇತಿಹಾಸದಲ್ಲಿ ನಾಲ್ಕನೇ-ವೇಗದ ಶತಕವಾಗಿದೆ.
ಟ್ರಾವಿಸ್ ಹೆಡ್ ಅವರ ಸ್ಫೋಟಕ ಬ್ಯಾಟಿಂಗ್ ಅಭಿಮಾನಿಗಳು ಮತ್ತು ಕ್ರಿಕೆಟ್ ವಿಮರ್ಶಕರನ್ನು ವಿಸ್ಮಯಗೊಳಿಸಿತು. ಸನ್ ರೈಸರ್ಸ್ ಹೈದರಾಬಾದ್ ತಂಡದ ದಾಖಲೆ-ನಿರ್ಮಿಸುವ ಮೊತ್ತವನ್ನು ಸ್ಥಾಪಿಸಲು ಪ್ರಮುಖ ಕೊಡುಗೆ ನೀಡಿದರು.
ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ತಂಡದ ನಾಲ್ವರು ಬೌಲರ್‌ಗಳು ತಮ್ಮ ತಮ್ಮ ಸ್ಪೆಲ್‌ಗಳಲ್ಲಿ 50ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟರು.
ರೀಸ್ ಟೋಪ್ಲಿ, ಯಶ್ ದಯಾಳ್, ಲಾಕಿ ಫರ್ಗ್ಯುಸನ್ ಮತ್ತು ವಿಜಯ್‌ಕುಮಾರ್ ವೈಶಾಕ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ಆಕ್ರಮಣಕಾರಿ ಬ್ಯಾಟಿಂಗ್‌ಗೆ ದಂಡಿಸಿಕೊಂಡರು.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ತಂಡದ ಐತಿಹಾಸಿಕ ಇನ್ನಿಂಗ್ಸ್ ವಿಶ್ವದ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯುನ್ನತ ಆಟದ ರಸದೌತಣ ಒದಗಿಸಿತು ಮತ್ತು ಪಂದ್ಯವನ್ನು ಐಪಿಎಲ್ ಮತ್ತು ಟಿ20 ಫ್ರಾಂಚೈಸಿ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯ ಪಂದ್ಯಗಳಲ್ಲಿ ಒಂದಾಯಿತು.
RCB ಮತ್ತು SRH ನಡುವಿನ ಪಂದ್ಯದಲ್ಲಿ ನಿರ್ಮಿಸಲಾದ ದಾಖಲೆಗಳು
287: ಸನ್‌ರೈಸರ್ಸ್ ಹೈದರಾಬಾದ್ ತಂಡವು ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ 287 ರನ್ ಗಳಿಸುವ ಮೂಲಕ, ಮಾರ್ಚ್ 27ರಂದು ಹೈದರಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 277 ಗಳಿಸಿದ್ದ ತಮ್ಮದೇ ದಾಖಲೆಯನ್ನು ಮುರಿದರು.
2: ಸನ್‌ರೈಸರ್ಸ್ ಹೈದರಾಬಾದ್ ತಂಡದ 287 ರನ್‌ಗಳು ಟಿ20 ಕ್ರಿಕೆಟ್ ಇತಿಹಾಸದಲ್ಲಿ 2ನೇ ಅತಿ ಹೆಚ್ಚು ತಂಡದ ಮೊತ್ತವಾಗಿದೆ. ಮಂಗೋಲಿಯಾ ವಿರುದ್ಧದ ಏಷ್ಯನ್ ಗೇಮ್ಸ್‌ನಲ್ಲಿ ನೇಪಾಳ ತಂಡ 3 ವಿಕೆಟ್‌ಗೆ 314 ರನ್ ಗಳಿಸಿತು. ಇದು ಟಿ20 ಕ್ರಿಕೆಟ್‌ನ ಅತ್ಯಧಿಕ ಮೊತ್ತವಾಗಿದೆ.
1: ಸನ್‌ರೈಸರ್ಸ್ ಹೈದರಾಬಾದ್ ತಂಡದ 287 ರನ್‌ಗಳು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಇದುವರೆಗಿನ ಅತ್ಯಧಿಕ ತಂಡದ ಮೊತ್ತವಾಗಿದೆ.
22: ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟರ್‌ಗಳು ಬೆಂಗಳೂರಿನಲ್ಲಿ 22 ಸಿಕ್ಸರ್‌ಗಳನ್ನು ಸಿಡಿಸಿದರು. ಐಪಿಎಲ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ದಾಖಲೆಯನ್ನು ಮುರಿದರು. 2013ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಆರ್‌ಸಿಬಿ 21 ಸಿಕ್ಸರ್‌ಗಳ ದಾಖಲೆ ನಿರ್ಮಿಸಿತ್ತು.
287: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 287 ರನ್‌ಗಳು ತಂಡದ ಗರಿಷ್ಠ ಮೊತ್ತವಾಗಿದೆ.
39: ಟ್ರಾವಿಸ್ ಹೆಡ್ 39 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರು. ಇದು ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟರ್‌ನ ವೇಗವಾದ ಮತ್ತು ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ವೇಗದ ಶತಕವಾಗಿದೆ.
4: ಐಪಿಎಲ್ ಇನ್ನಿಂಗ್ಸ್‌ನಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಬೌಲರ್‌ಗಳು 50ಕ್ಕಿಂತ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟ ಮೊದಲ ನಿದರ್ಶನವಾಯಿತು. ಆರ್‌ಸಿಬಿ ತಂಡದ ರೀಸ್ ಟೋಪ್ಲಿ (68), ಯಶ್ ದಯಾಳ್ (51), ಲಾಕಿ ಫರ್ಗುಸನ್ (52) ಮತ್ತು ವಿಜಯ್‌ಕುಮಾರ್ ವೈಶಾಕ್ (64) ತಮ್ಮ ಸ್ಪೆಲ್‌ನಲ್ಲಿ 50ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications