IPL 2024: LSG ಮಾಲೀಕ-ರೋಹಿತ್ ಶರ್ಮಾ ಸಂಭಾಷಣೆ ವಿಡಿಯೋ ವೈರಲ್; ಹಿಟ್‌ಮ್ಯಾನ್ ಪ್ಲಾನ್ ಏನು?
ಮೇ 18 ಶನಿವಾರ, ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳ ಅಭಿಯಾನ ಶುಕ್ರವಾರ ಕೊನೆಗೊಂಡಿತು. ಈ ಋತುವಿನಲ್ಲಿ ಉಭಯ ತಂಡಗಳಅಸ್ಥಿರ ಪ್ರದರ್ಶನದಿಂದ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.
ಕಳೆದ ರಾತ್ರಿ (ಮೇ 17) ಮುಂಬೈ ಎದುರು ಲಕ್ನೋ ಭರ್ಜರಿ ಜಯ ಗಳಿಸಿದೆ. ಅಬ್ಬರದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ಗೂ ಮುನ್ನ ಫಾರ್ಮ್ ಗೆ ಮರಳಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

17ನೇ ಆವೃತ್ತಿ ಐಪಿಎಲ್ ಆರಂಭದಿಂದಲೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬೇಸರದ ಹೊಗೆ ಆಡುತ್ತಿದೆ. ಕಳೆದ ಎರಡು ಋತುಗಳಲ್ಲಿ ಗುಜರಾತ್ ಟೈಟನ್ಸ್ ಮುನ್ನೆಡೆಸುತ್ತಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಮತ್ತೆ ಮುಂಬೈಗೆ ಕರೆ ತರಲಾಗಿತ್ತು.
ಬಳಿಕ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದು ಹಾರ್ದಿಕ್ ಅವರಿಗರ ಜವಾಬ್ದಾರಿ ನೀಡಲಾಗಿತ್ತು. ಇದಾದ ನಂತರ ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಲವು ಅಂತರಿಕ ಬದಲಾವಣೆಗಳು ಆಗಿವೆ. ಫ್ರಾಂಚೈಸಿ ನಿರ್ಧಾರದ ವಿರುದ್ಧ ಕೂಡ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದರು.
ಇದರೊಂದಿಗೆ ಮುಂದಿನ ಋತುವಿನಲ್ಲಿ ಮುಂಬೈ ಪರ ರೋಹಿತ್ ಶರ್ಮಾ ಆಡುವುದಿಲ್ಲ ಎಂಬ ವಿಚಾರ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಲಕ್ನೋ ವಿರುದ್ಧ ಪಂದ್ಯಕ್ಕೂ ಮುನ್ನೆ ಕೆಕೆಆರ್ ಸಹಾಯಕ ಕೋಚ್ ಅಭಿಷೇಕ್ ನಾಯರ್ ಜೊತೆಗೆ ರೋಹಿತ್ ಶರ್ಮಾ ಸಂಭಾಷಣೆ ನಡೆಸಿರುವುದು ವೈರಲ್ ಆಗಿತ್ತು. ನಂತರ ಕೆಕೆಆರ್ ತನ್ನ ಟ್ವೀಟರ್ (ಎಕ್ಸ್)ನಿಂದ ತೆಗೆದು ಹಾಕಿದ್ದರು.
ಈ ಸಯಮದಲ್ಲಿ ಹಿಟ್‌ಮ್ಯಾನ್ ಮುಂಬೈಗೆ ಇದು ಕೊನೆಯ ಸೀಸನ್ ಅಥವಾ ಐಪಿಎಲ್‌ನ ಕೊನೆಯ ಸೀಸನ್ ಎಂದು ಅಭಿಮಾನಿಗಳು ಚರ್ಚಿಸಲು ಆರಂಭಿಸಿದ್ದರು. ಇದರ ಬೆನ್ನೆಲ್ಲೆ ಲಕ್ನೋ ಪಂದ್ಯದ ಬಳಿಕ ರೋಹಿತ್ ಶರ್ಮಾ ಹಾಗು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರ ಜೊತೆ ಸುದೀರ್ಘವಾದ ಮಾತುಕತೆ ನಡೆಸಿದ್ದಾರೆ.
ಸಂಭಾಷಣೆಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆದರೆ ವಿಡಿಯೋದಲ್ಲಿ ರೋಹಿತ್ ಶರ್ಮಾ ಮತ್ತು ಸಂಜೀವ್ ಗೋಯೆಂಕಾ ಯಾವ ವಿಚಾರವಾಗಿ ಮಾತನಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ಮೇ 9 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಹೀನಾಯವಾಗಿ ಸೋತಿತ್ತು.
ಈ ಸೋಲಿನ ಬಳಿಕ ಸಂಜೀವ್ ಗೋಯೆಂಕಾ ಬಹಿರಂಗವಾಗಿಯೇ ನಾಯಕ ಕೆಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಹೀಗಾಗಿ ಮುಂದಿನ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಲಕ್ನೋ ಪರ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಹೀಗಾಗಿ ಲಕ್ನೋ ತಂಡಕ್ಕೆ ಹೊಸ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಕರೆ ತರಲು ಸಂಜೀವ್ ಗೋಯೆಂಕಾ ಪ್ರಯ್ನತ ಮಾಡಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಮುಂಬೈ ಬಿಟ್ಟು ರೋಹಿತ್ ಹೊರ ನಡೆದರೆ ಲಕ್ನೋ ತಂಡಕ್ಕೆ ಬಲ ಇನ್ನಷ್ಟು ಬಲ ಸಿಗಲಿದೆ. ಆದರೆ ರೋಹಿತ್ ಅವರ ಮುಂದಿನ ನಡೆ ನಿಗೂಢವಾಗಿದೆ.
ಈ ಋತುವಿನಲ್ಲಿ ಮುಂಬೈ ಪರ ನಾನು ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ ಎಂದು ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ. ರೋಹಿತ್ 14 ಇನ್ನಿಂಗ್ಸ್‌ಗಳಲ್ಲಿ 32.08 ರ ಸರಾಸರಿ ಮತ್ತು 150 ರ ಸ್ಟ್ರೈಕ್-ರೇಟ್‌ನಲ್ಲಿ 417 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಅರ್ಧಶತಕ ಕೂಡ ಸೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications