IPL 2024: SRH ವಿರುದ್ಧ ಸೋತ ಬಳಿಕ ಮೈದಾನದಲ್ಲೇ ಕೆಎಲ್ ರಾಹುಲ್ ಮೇಲೆ ಕೋಪಗೊಂಡ LSG ಮಾಲೀಕ
ಬುಧವಾರ, ಮೇ 8ರಂದು ಹೈದರಾಬಾದ್‌ನಲ್ಲಿ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 166 ರನ್‌ಗಳ ಗುರಿಯನ್ನು ಕೇವಲ 9.4 ಓವರ್‌ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತು.
ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ ಅಜೇಯ 89 ರನ್ ಮತ್ತು ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿ ತಮ್ಮ ತಂಡವನ್ನು ಐಪಿಎಲ್ 2024ರ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿಸಿದರು. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತನ್ನ ಪ್ಲೇಆಫ್ ಅವಕಾಶಗಳನ್ನು ಬಲಪಡಿಸಲು ಬೃಹತ್ ಅಂತರದ ಗೆಲುವು ಸಾಧಿಸಿತು.

ಮತ್ತೊಂದೆಡೆ, ಈ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸತತ ಎರಡನೇ ಬೃಹತ್ ಸೋಲಾಗಿದೆ. ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್‌ನ ವಿರುದ್ಧ ಎಲ್‌ಎಸ್‌ಜಿ ತಂಡ ಹೀನಾಯ ಸೋಲನ್ನು ಕಂಡಿತ್ತು. ಗೆಲ್ಲಲು 236 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೇವಲ 137 ರನ್‌ಗಳಿಗೆ ಆಲೌಟ್ ಆಗಿತ್ತು.
ಬುಧವಾರದಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯವಾಗಿ ಸೋತ ನಂತರ, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರು ಮೈದಾನದಲ್ಲೇ ನಾಯಕ ಕೆಎಲ್ ರಾಹುಲ್ ಅವರ ಮೇಲೆ ಸ್ಪಷ್ಟವಾಗಿ ಅಸಮಾಧಾನದಿಂದ ಮಾತನಾಡಿದ್ದಾರೆ.
ಸಂಜೀವ್ ಗೋಯೆಂಕಾ ಇಡೀ ಎಲ್‌ಎಸ್‌ಜಿ ತಂಡದ ವಿರುದ್ಧ ಮೈದಾನದಲ್ಲೇ ಸಾರ್ವಜನಿಕವಾಗಿ ಕೋಪ ವ್ಯಕ್ತಪಡಿಸಿದರು ಮತ್ತು ಈ ವೇಳೆ ಕೆಎಲ್ ರಾಹುಲ್ ತಮ್ಮ ಮಾಲೀಕನಿಗೆ ವಿಷಯಗಳನ್ನು ವಿವರಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಏಕೆಂದರೆ ಸಂಜೀವ್ ಗೋಯೆಂಕಾ ಕೋಪದಿಂದ ಉರಿದುಕೊಂಡಂತೆ ಕಂಡುಬಂದರು.

ಎಲ್‌ಎಸ್‌ಜಿ ಮಾಲೀಕರು ತಮ್ಮ ನಿರಾಶೆ ತೋರಿಸಲು ಮತ್ತು ಡ್ರೆಸ್ಸಿಂಗ್ ಕೋಣೆಯಲ್ಲಿ ತಂಡದ ಮ್ಯಾನೇಜ್‌ಮೆಂಟ್‌ನಿಂದ ಉತ್ತರಗಳನ್ನು ಕೇಳಬೇಕಾಗಬಹುದು ಎಂದು ಇಂಗ್ಲಿಷ್ ಕಾಮೆಂಟೇಟರ್ಸ್ ಹೇಳಿದ್ದಾರೆ. ಸಾರ್ವಜನಿಕವಾಗಿ ಕೆಎಲ್ ರಾಹುಲ್ ವಿರುದ್ಧ ಕೋಪಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಹೀನಾಯ ಸೋಲು ಲಕ್ನೋ ಸೂಪರ್ ಜೈಂಟ್ಸ್ ತಂಡದ ಐಪಿಎಲ್ 2024ರ ಪ್ಲೇಆಫ್ ತಲುಪುವ ಅವಕಾಶಗಳಿಗೆ ಅಡ್ಡಿಯಾಯಿತು.
ಲಕ್ನೋ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿಯಿತು ಮತ್ತು ಏಕಪಕ್ಷೀಯ ಪಂದ್ಯದ ನಂತರ ಅವರ ನೆಟ್ ರನ್ ರೇಟ್ ಮೇಲೆ ಭಾರೀ ಹೊಡೆತ ಬಿದ್ದಿದೆ. ಲಕ್ನೋ ಆಡಿದ 12 ಪಂದ್ಯಗಳಲ್ಲಿ 12 ಅಂಕಗಳನ್ನು ಹೊಂದಿದೆ.
ಇನ್ನು ಮೂರನೇ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ 14 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದು, ಪ್ಲೇಆಫ್‌ಗೆ ಇನ್ನಷ್ಟು ಹತ್ತಿರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications