Virat Kohli: ಟಿ20 ವಿಶ್ವಕಪ್‌ನಲ್ಲಿ ಆಡಲು ವಿರಾಟ್ ಕೊಹ್ಲಿಗೆ 2024ರ ಐಪಿಎಲ್ ಕಡ್ಡಾಯ!
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಕೇವಲ 2 ವಾರಗಳು ಬಾಕಿ ಇರುವಾಗ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕೆ ಮರಳುವುದು ನಿರ್ಣಾಯಕವಾಗಿದೆ. ಏಕೆಂದರೆ, 2024ರ ಐಸಿಸಿ ಟಿ20 ವಿಶ್ವಕಪ್‌ನ ಭಾಗವಾಗಲು ವಿರಾಟ್ ಕೊಹ್ಲಿ 2024ರ ಐಪಿಎಲ್ ಪಂದ್ಯಾವಳಿಯನ್ನು ಆಡಲೇಬೇಕಿದೆ.
ಮುಂಬರುವ ಐಪಿಎಲ್ ಆವೃತ್ತಿಯು ಎಲ್ಲಾ ಆಟಗಾರರಿಗೆ ಅಲ್ಲ, ವಿಶೇಷವಾಗಿ ವಿರಾಟ್ ಕೊಹ್ಲಿಗೆ ಅತ್ಯಂತ ಪ್ರಮುಖ ಪಂದ್ಯಾವಳಿಯಾಗಿದೆ. ಟೀಮ್ ಇಂಡಿಯಾ ಮಾಜಿ ನಾಯಕ ಟಿ20 ವಿಶ್ವಕಪ್‌ನಲ್ಲಿ ತಂಡಕ್ಕೆ ಪ್ರಮುಖ ಆಸ್ತಿಯಾಗಲಿದ್ದಾರೆ.
ಆದರೆ, ಭಾರತ ತಂಡಕ್ಕೆ ಆಯ್ಕೆಯಾಗಬೇಕಾದರೆ, ವಿರಾಟ್ ಕೊಹ್ಲಿ ಅವರು 2024ರ ಐಪಿಎಲ್‌ನಲ್ಲಿ ಆಡಬೇಕಾಗಿದೆ. ಸದ್ಯಕ್ಕೆ ಕೊಹ್ಲಿ ಯುಕೆಯಲ್ಲಿ ಕುಟುಂಬದೊಂದಿಗಿದ್ದಾರೆ ಮತ್ತು ಮುಂದಿನ ವಾರ ಆರ್‌ಸಿಬಿ ಶಿಬಿರವನ್ನು ಸೇರುವ ನಿರೀಕ್ಷೆಯಿದೆ.

ವಿರಾಟ್ ಕೊಹ್ಲಿ ಐಪಿಎಲ್ 2024ರಲ್ಲಿ ಆಡುತ್ತಾರೆಯೇ?
ಸಾಕಷ್ಟು ಅನುಮಾನಗಳಿವೆ. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 2024ರ ಐಪಿಎಲ್‌ನಲ್ಲಿ ಆಡುತ್ತಾರೆ ಎಂಬುದು ಖಚಿತವಾಗಿದೆ. ಆದರೆ ಅವರು ಯಾವಾಗ, ಎಷ್ಟು ಪಂದ್ಯಗಳಿಗೆ ಲಭ್ಯವಾಗುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ.
"ನಮಗೆ ತಿಳಿದಿರುವಂತೆ, ವಿರಾಟ್ ಕೊಹ್ಲಿ ಐಪಿಎಲ್ ಆಡುತ್ತಾರೆ. ಆದರೆ ಯಾವಾಗ ತಂಡಕ್ಕೆ ಸೇರಿಕೊಳ್ಳುತ್ತಾರೆ ಎಂಬುದು ಅವರಿಗೆ ಮತ್ತು ಆರ್‌ಸಿಬಿ ಫ್ರಾಂಚೈಸಿಗೆ ಬಿಟ್ಟದ್ದು. ಅವರು ವಿರಾಮದಲ್ಲಿರುವುದರಿಂದ ನಾವು ಅವನಿಂದ ಕೇಳಿಲ್ಲ. ಖಚಿತವಾಗಿ ಟಿ20 ವಿಶ್ವಕಪ್‌ಗೆ ಆಟಗಾರರ ಆಯ್ಕೆಯಲ್ಲಿ ಐಪಿಎಲ್ ದೊಡ್ಡ ಪಾತ್ರವನ್ನು ವಹಿಸುತ್ತದೆ," ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು. ಅವರು ತಮ್ಮ ಎರಡನೇ ಮಗು ಅಕಾಯ್ ಜನನಕ್ಕಾಗಿ ಯುಕೆಗೆ ತೆರಳಿದ್ದರು.
ಸದ್ಯಕ್ಕೆ ಇಡೀ ವಿರಾಟ್ ಕೊಹ್ಲಿ ಕುಟುಂಬ ಯುಕೆಯಲ್ಲಿದೆ. ಮಾರ್ಚ್ 19ರಂದು ಬೆಂಗಳೂರಿ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ಗಾಗಿ ಅವರು ಮುಂದಿನ ವಾರ ಆರ್‌ಸಿಬಿ ಶಿಬಿರವನ್ನು ಸೇರುವ ಸಾಧ್ಯತೆ ಇದೆ.

ಐಸಿಸಿ ಟಿ20 ವಿಶ್ವಕಪ್‌ಗೆ ಐಪಿಎಲ್ ನಿರ್ಣಾಯಕ
2024ರ ಐಪಿಎಲ್ ಪಂದ್ಯಾವಳಿಯು ವಿರಾಟ್ ಕೊಹ್ಲಿಗೆ ಅತ್ಯಂತ ಮಹತ್ವದ್ದಾಗಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾದ ಭಾಗವಾಗಲು ಭಾರತದ ಮಾಜಿ ನಾಯಕ ಐಪಿಎಲ್‌ನಲ್ಲಿ ಆಡಬೇಕಾಗುತ್ತದೆ.
ವಿರಾಟ್ ಕೊಹ್ಲಿ ಕಳೆದೆರಡು ತಿಂಗಳುಗಳಿಂದ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಐಪಿಎಲ್‌ಗೆ 2 ವಾರಗಳಿಗಿಂತ ಕಡಿಮೆ ಸಮಯವಿದ್ದು, ಅಭಿಮಾನಿಗಳು ಕಿಂಗ್ ಕೊಹ್ಲಿಯ ಪುನರಾಗಮನಕ್ಕಾಗಿ ಕಾಯುತ್ತಿದ್ದಾರೆ.
ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಶ್ರೀಮಂತ ಟಿ20 ಲೀಗ್‌ಗಾಗಿ ದೇಶದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.
ಇದೇ ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಹಾಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಸೆಣಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications