For Quick Alerts
ALLOW NOTIFICATIONS  
For Daily Alerts
 

2024ರ ಐಪಿಎಲ್ ಮಿನಿ ಹರಾಜು ಪಟ್ಟಿ ಪ್ರಕಟಿಸಿದ ಬಿಸಿಸಿಐ; ಸುತ್ತಿಗೆಗೆ ಹೋಗಲಿದ್ದಾರೆ 333 ಆಟಗಾರರು

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಆವೃತ್ತಿಗಾಗಿ ಆಟಗಾರರ ಹರಾಜಿನ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಶಾರ್ಟ್‌ಲಿಸ್ಟ್ ಮಾಡಲಾದ ಒಟ್ಟು 333 ಆಟಗಾರರು ಹೊಸ ಸೀಸನ್‌ಗೆ ಮುಂಚಿತವಾಗಿ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯುವ ಹರಾಜು ಸುತ್ತಿಗೆ ಹೋಗಲಿದ್ದಾರೆ.

ಡಿಸೆಂಬರ್ 19ರಂದು ಐಪಿಎಲ್ 2024ರ ಮಿನಿ-ಹರಾಜು ಪ್ರಕ್ರಿಯೆ ಸಮೀಪಿಸುತ್ತಿರುವಂತೆ, ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಎಲ್ಲರ ಕಣ್ಣುಗಳು ನೆಟ್ಟಿವೆ. ಈ ವೇಳೆ 214 ಭಾರತೀಯ ಮತ್ತು 119 ಸಾಗರೋತ್ತರ ಆಟಗಾರರು ಸೇರಿದಂತೆ 333 ಕ್ರಿಕೆಟಿಗರು (2 ಸಹವರ್ತಿ ರಾಷ್ಟ್ರಗಳಿಂದ) ಮಾರಾಟಕ್ಕಾಗಿ ಕಾಯುತ್ತಿದ್ದಾರೆ.

IPL 2024 Mini Auction List Announced by BCCI; 333 Players Will Go To the Hammer

ಇವರಲ್ಲಿ 116 ಕ್ಯಾಪ್ಡ್ ಆಟಗಾರರು, 215 ಅನ್‌ಕ್ಯಾಪ್ಡ್ ಆಗಿದ್ದಾರೆ ಮತ್ತು 2 ಅಸೋಸಿಯೇಟ್ ರಾಷ್ಟ್ರಗಳಿಂದ ಬಂದವರಾಗಿದ್ದು, ಎಲ್ಲಾ ಹತ್ತು ತಂಡಗಳ ಫ್ರಾಂಚೈಸಿಗಳಿಗೆ ವೈವಿಧ್ಯಮಯ ಆಯ್ಕೆಯನ್ನು ಒದಗಿಸುತ್ತಾರೆ.

ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಾರೆಗಳಾದ ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ 119 ಸಾಗರೋತ್ತರ ಆಟಗಾರರ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ.

2014 ಮತ್ತು 2015ರಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸಿದ್ದ ಮಿಚೆಲ್ ಸ್ಟಾರ್ಕ್, 2018ರ ನಂತರ ಮೊದಲ ಬಾರಿಗೆ ಐಪಿಎಲ್ ಆಟಗಾರರ ಹರಾಜಿಗೆ ಮರಳಿದರು. ಆದರೆ 2023ರ ಐಪಿಎಲ್ ಮೊದಲು ಟ್ರಾವಿಸ್ ಹೆಡ್ ಅನ್‌ಸೋಲ್ಡ್ ಆಗಿದ್ದರು.

ಇನ್ನು ಅಂತಾರಾಷ್ಟ್ರೀಯ ಬದ್ಧತೆಗಳ ಕಾರಣದಿಂದಾಗಿ ಪ್ಯಾಟ್ ಕಮಿನ್ಸ್ 2023ರ ಐಪಿಎಲ್‌ನಿಂದ ಹಿಂದೆ ಸರಿದಿದ್ದರು. ಮಿಚೆಲ್ ಸ್ಟಾರ್ಕ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 9.4 ಕೋಟಿ ರೂಪಾಯಿಗೆ ಖರೀದಿಸಲಾಯಿತು. ಆದರೆ ರಾಷ್ಟ್ರೀಯ ತಂಡದ ಬದ್ಧತೆ ಕಾರಣಕ್ಕಾಗಿ ಸ್ಟಾರ್ಕ್ ಆಡದಿರಲು ನಿರ್ಧರಿಸಿದ್ದರು.

30 ಸಾಗರೋತ್ತರ ಆಟಗಾರರಿಗೆ ಸೇರಿದಂತೆ 77 ಸ್ಲಾಟ್‌ಗಳು ಲಭ್ಯವಿದ್ದು, ಹರಾಜು ರೋಚಕತೆಯಿಂದ ಕೂಡಿರಲಿದೆ ಎಂದು ಭರವಸೆ ನೀಡಿದೆ. ಅತ್ಯಧಿಕ ಮೂಲ ಬೆಲೆ 2 ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿದ್ದು, ಇದರಲ್ಲಿ 23 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. 13 ಆಟಗಾರರು 1.5 ಕೋಟಿ ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದಾರೆ.

ಹರಾಜು ದುಬೈನಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ 1 ಗಂಟೆಗೆ ಮತ್ತು ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ. ಕ್ರಿಕೆಟ್ ಜಗತ್ತು ಐಪಿಎಲ್ 2024ರ ಪಂದ್ಯಾವಳಿಯನ್ನು ಮಾರ್ಚ್ 23ರಿಂದ ಮೇ 29ರವರೆಗೆ ನಡೆಯುವುದನ್ನು ಕುತೂಹಲದಿಂದ ನಿರೀಕ್ಷಿಸುತ್ತಿದೆ.

2023ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಡೇರಿಲ್ ಮಿಚೆಲ್ ಮತ್ತು ರಚಿನ್ ರವೀಂದ್ರ ಅವರು ಕ್ರಮವಾಗಿ 1 ಕೋಟಿ ರೂಪಾಯಿ ಮತ್ತು 50 ಲಕ್ಷ ರೂಪಾಯಿಗಳೊಂದಿಗೆ ಐಪಿಎಲ್ ಹರಾಜಿನಲ್ಲಿ ನೋಂದಾಯಿಸಿದ್ದಾರೆ.

ಸ್ಮರಣೀಯ ಚೊಚ್ಚಲ ವಿಶ್ವಕಪ್ ಅಭಿಯಾನವನ್ನು ಸಹ ಹೊಂದಿದ್ದ ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೊಯೆಟ್ಜಿ ಅವರು ಮೂಲ ಬೆಲೆ 2 ಕೋಟಿ ರೂಪಾಯಿಗೆ ನೋಂದಾಯಿಸಿಕೊಂಡಿದ್ದಾರೆ.

ಭಾರತದ ಶಾರ್ದೂಲ್ ಠಾಕೂರ್, ಹರ್ಷಲ್ ಪಟೇಲ್ ಮತ್ತು ಉಮೇಶ್ ಯಾದವ್ ಅವರು 2 ಕೋಟಿ ರೂಪಾಯಿಗೆ ನೋಂದಣಿ ಮಾಡಿಕೊಂಡಿದ್ದಾರೆ.

ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಇಬ್ಬರನ್ನೂ ರಿಟೇನ್ ದಿನಕ್ಕೆ ಮುಂಚಿತವಾಗಿ ಕೆಕೆಆರ್ ಬಿಡುಗಡೆ ಮಾಡಿತು. ಇನ್ನು ಆರ್‌ಸಿಬಿ ಮಾಜಿ ಪರ್ಪಲ್ ಕ್ಯಾಪ್-ವಿಜೇತ ಹರ್ಷಲ್ ಪಟೇಲ್ ಅವರನ್ನು ಕಳೆದ ಋತುವಿನಲ್ಲಿ ನಿರಾಶಾದಾಯಕ ಪ್ರದರ್ಶನದ ಬಳಿಕ ಬಿಡುಗಡೆ ಮಾಡಲು ನಿರ್ಧರಿಸಿತು.

Story first published: Monday, December 11, 2023, 21:54 [IST]
Other articles published on Dec 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+