IPL 2024: ಆರ್‌ಸಿಬಿ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಯಾಕೆ ಬೇಕು?; ಮಾಜಿ ಕ್ರಿಕೆಟಿಗ ಹೇಳಿದ್ದೇನು?
ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿನ ಸಮಯದಲ್ಲಿ ದೊಡ್ಡ ಮೊತ್ತವನ್ನು ಪಡೆಯುವ ನಿರೀಕ್ಷೆಯ ಆಟಗಾರರಲ್ಲಿ ಮಿಚೆಲ್ ಸ್ಟಾರ್ಕ್ ಕೂಡ ಒಬ್ಬರು ಮತ್ತು ಈ ಹಿಂದೆ ಬೆಂಗಳೂರು ಮೂಲದ ಫ್ರಾಂಚೈಸಿಯ ಜೆರ್ಸಿ ಧರಿಸಿ ಆಡಿದ್ದರು.
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಹಿಂತಿರುಗುವುದನ್ನು ನಾವು ನೋಡಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಎಡಗೈ ವೇಗಿ 2014 ಮತ್ತು 2015ರಲ್ಲಿ ಆರ್‌ಸಿಬಿ ತಂಡಕ್ಕಾಗಿ ಎರಡು ಆವೃತ್ತಿಗಳನ್ನು ಆಡಿದ್ದರು ಮತ್ತು ಎರಡು ಋತುಗಳಲ್ಲಿ ಒಟ್ಟು 34 ವಿಕೆಟ್‌ಗಳನ್ನು ಪಡೆದು ಪ್ರಭಾವಿಯಾಗಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದು ಮತ್ತು ರೀಸ್ ಟೋಪ್ಲಿ ಅವರ ಗಾಯದ ಸಮಸ್ಯೆ ಹೊಂದಿರುವುದರಿಂದ ವಿದೇಶಿ ವೇಗಿಗಳ ಹುಡುಕಾಟದಲ್ಲಿದೆ.
ಮಾಜಿ ಆಲ್‌ರೌಂಡರ್ ಇಫಾನ್ ಪಠಾಣ್ ಅವರು ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡುತ್ತಾ, ಮಿಚೆಲ್ ಸ್ಟಾರ್ಕ್ ಮುಂಬರುವ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿ ಆಡುವುದನ್ನು ನೋಡಬಹುದು. ಏಕೆಂದರೆ ಅವರಿಗೆ ಅಲ್ಲಿ ಆಡಿದ ಅನುಭವವಿದೆ ಎಂದು ಹೇಳಿದರು.
ಅಲ್ಲದೆ, ಆರ್‌ಸಿಬಿ ತಂಡಕ್ಕೆ ಮಿಚೆಲ್ ಸ್ಟಾರ್ಕ್‌ನಮತಹ ಬೌಲರ್‌ನ ಕೌಶಲ್ಯದ ಅಗತ್ಯವಿದೆ ಎಂದು ಭಾವಿಸುತ್ತಾನೆ, ವಿಶೇಷವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವಾಗ ಎಂದು ಮಾಜಿ ಆಲ್‌ರೌಂಡರ್ ಅಭಿಪ್ರಾಯಪಟ್ಟರು.
"ಈ ಬಾರಿ ಮಿಚೆಲ್ ಸ್ಟಾರ್ಕ್ ಆರ್‌ಸಿಬಿ ತಂಡಕ್ಕಾಗಿ ಆಡುವುದನ್ನು ನೀವು ನೋಡಬಹುದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರು ಈ ಮೊದಲು ಅಲ್ಲಿ ಆಡಿದ್ದರು. ಅವರು ಎಡಗೈ ಬೌಲರ್, 140-ಪ್ಲಸ್ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಎಂ. ಚಿನ್ನಸ್ವಾಮಿ ಸ್ಟೇಡಿಯಂನ ಆ ರೀತಿಯ ಪಿಚ್‌ಗಳಲ್ಲಿ ಹೆಚ್ಚುವರಿ ವೇಗವನ್ನು ಹೊಂದಿರುವ ಕಾರಣ, ಆರ್‌ಸಿಬಿಗೆ ಇವರು ಅತ್ಯಂತ ಪ್ರಮುಖ ಬೌಲರ್ ಆಗಲಿದ್ದಾರೆ," ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಸಂಭಾವ್ಯ ಬದಲಿಯಾಗಿ ವೈಶಾಕ್ ವಿಜಯ್‌ಕುಮಾರ್ ಅವರು ತಂಡದಲ್ಲಿ ಇರುವುದರಿಂದ ಹರ್ಷಲ್ ಪಟೇಲ್ ಅವರನ್ನು ಆರ್‌ಸಿಬಿ ಬಿಡುಗಡೆ ಮಾಡಿರಬಹುದು ಎಂದು ಇರ್ಫಾನ್ ಪಠಾಣ್ ಅಂದಾಜಿಸಿದರು.
"ಆರ್‌ಸಿಬಿ ತುಂಬಾ ಕಳಪೆ ಬೌಲರ್ ಅನ್ನು ಹೊಂದಿದ್ದರು. ಜನರು ಅದರ ಬಗ್ಗೆ ಮಾತನಾಡದೇ ಇರಬಹುದು, ಬದಲಿಯಾಗಿ ಬಂದ ವೈಶಾಕ್ ವಿಜಯ್‌ಕುಮಾರ್ ಅವರಲ್ಲಿ ಇಷ್ಟಪಡುವ ಕೆಲವು ವಿಷಯಗಳಿವೆ ಎಂದು ನಾನು ಭಾವಿಸಿದ್ದೇನೆ. ಆತನ ನಿಧಾನಗತಿ ಬೌಲಿಂಗ್ ತುಂಬಾ ಪ್ರಭಾವಶಾಲಿಯಾಗಿತ್ತು ಮತ್ತು ಅದಕ್ಕಾಗಿಯೇ ಹರ್ಷಲ್ ಪಟೇಲ್ ಅವರನ್ನು ಕೈಬಿಡುವ ನಿರ್ಧಾರವನ್ನು ಆರ್‌ಸಿಬಿ ತೆಗೆದುಕೊಂಡಿದೆ," ಎಂದು ಭಾರತ ತಂಡದ ಮಾಜಿ ವೇಗಿ ಇರ್ಫಾನ್ ಪಠಾಣ್ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications