Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಮೊದಲ ಓವರ್‌ನಲ್ಲಿ ವಿಕೆಟ್‌ ಪಡೆದ ಬೌಲರ್‌ಗಳಲ್ಲಿ ಅಗ್ರ ಸ್ಥಾನದಲ್ಲಿರುವರು ಯಾರು? ಇಲ್ಲಿದೆ ಡಿಟೇಲ್ಸ್

ಐಪಿಎಲ್‌ ಯಾವಾಗಲೂ ಬ್ಯಾಟರ್‌ಗಳ ಲೀಗ್‌ ಎಂದೇ ಗುರುತಿಸಲಾಗುತ್ತದೆ. ಆದರೆ ಬೌಲರ್‌ಗಳು ಸಹ ಅಬ್ಬರಿಸಿದ್ದಾರೆ. ಕೆಲವೊಮ್ಮೆ ಬೌಲರ್‌ಗಳು ಐದು ವಿಕೆಟ್, ಹ್ಯಾಟ್ರಿಕ್‌ ಪಡೆದು ಸುದ್ದಿ, ಮಾಡಿದರೆ, ಇನ್ನು ಕೆಲವೊಮ್ಮೆ ರನ್‌ಗಳಿಗೆ ಕಡಿವಾಣ ಹಾಕಿ ಸುದ್ದಿಯಲ್ಲಿರುತ್ತಾರೆ. ಆದರೆ ಐಪಿಎಲ್‌ನಲ್ಲಿ ಮೊದಲ ಓವರ್‌ನಲ್ಲಿ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಪೇಸರ್‌ಗೆ ಅಗ್ರ ಸ್ಥಾನ..

ಟಿ20 ಲೀಗ್‌ ಎಂದರೆ ಬೌಲರ್‌ಗಳ ಮೇಲೆ ಒತ್ತಡ ಇದ್ದೇ ಇರುತ್ತದೆ. ಈ ಒತ್ತಡವನ್ನು ಮೆಟ್ಟಿನಿಂತು ಅಬ್ಬರಿಸುವ ಲೆಕ್ಕಾಚಾರವನ್ನು ಬೌಲರ್‌ಗಳು ಹಾಕಿಕೊಂಡಿರುತ್ತಾರೆ. ಆದರೆ, ಈ ಪ್ರಯತ್ನದಲ್ಲಿ ಹಲವು ಬೌಲರ್‌ಗಳು ಫೇಲ್‌ ಆಗಿದ್ದೇ ಹೆಚ್ಚು. ಇನ್ನು ಕೆಲವು ಬೌಲರ್‌ಗಳು ಸಿಕ್ಕ ಅವಕಾಶದಲ್ಲಿ ಅಬ್ಬರಿಸುವ ಸೂಚನೆಯನ್ನು ಹೊಂದಿರುತ್ತಾರೆ. ಅದು ಅಂತಾರಾಷ್ಟ್ರೀಯ ಪಂದ್ಯಗಳೇ ಆಗಿರಲಿ ಅಥವಾ ಐಪಿಎಲ್‌ ಟಿ20 ಲೀಗ್‌ ಆಗಿರಲಿ ಮೊದಲ ಓವರ್‌ನಲ್ಲೇ ಎದುರಾಳಿಗಳಿಗೆ ಪೆಟ್ಟು ನೀಡುತ್ತಾರೆ.

IPL 2024 Most Wickets In First Over In IPL History

ರಾಜಸ್ಥಾನ ಬೌಲರ್‌ಗೂ ಪಟ್ಟಿಯಲ್ಲಿ ಸ್ಥಾನ

ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 193 ರನ್ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ಲಖ್ನೋಗೆ ಆರಂಭಿಕ ಪೆಟ್ಟು ನೀಡುವಲ್ಲಿ ವೇಗದ ಬೌಲರ್‌ ಟ್ರೆಂಟ್ ಬೌಲ್ಟ್‌ ಯಶಸ್ವಿಯಾದರು. ಇವರು ಮೊದಲ ಓವರ್‌ನ ಐದನೇ ಎಸೆತದಲ್ಲಿ ಕ್ವಿಂಟನ್‌ ಡಿಕಾಕ್ ಅವರನ್ನು ಔಟ್ ಮಾಡಿ ಅಬ್ಬರಿಸಿದರು. ಈ ಮೂಲಕ ಮೊದಲ ಓವರ್‌ನಲ್ಲೇ ವಿಕೆಟ್‌ ಪಡೆದು ಬೀಗಿದರು.

ಇದಾದ ಬಳಿಕ ದೇವದತ್‌ ಪಡಿಕ್ಕಲ್‌ ಕ್ರೀಸ್‌ಗೆ ಬಂದರು. ಆದರೆ ಇವರಿಗೆ ನೆಲಕ್ಕೂರಿ ನಿಲ್ಲಲು ಟ್ರೆಂಟ್‌ ಬಿಡಲೇ ಇಲ್ಲ. ಮೊದಲು ಟ್ರೆಂಟ್‌ ಬೌಲ್ಟ್‌ ಎಸೆತ ದೇವದತ್‌ ಅವರ ಹೆಲ್ಮೆಟ್‌ಗೆ ಬಡಿಯಿತು. ಇದಾದ ಬಳಿಕ ಪಡಿಕ್ಕಲ್‌ ಟ್ರೆಂಟ್‌ ಬೌಲ್ಟ್‌ ಮುಂದಿನ ಎಸೆತವನ್ನೂ ಸಹ ಇದೇ ರೀತಿ ಮಾಡುತ್ತಾರೆ ಎಂದು ಬ್ಯಾಕ್‌ ಫುಟ್‌ಗೆ ಹೋದರು. ಆದರೆ ಟ್ರೆಂಟ್‌ ಬೌಲ್ಟ್‌ ವೇರಿಯೆಷನ್‌ ಮಾಡಿ ದೇವದತ್‌ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು. ತಮ್ಮ ಎರಡೂ ಓವರ್‌ಗಳಲ್ಲಿ ಬೌಲ್ಟ್‌ ಎರಡು ವಿಕೆಟ್ ಕಬಳಿಸಿದರು.

IPL 2024 Most Wickets In First Over In IPL History

ಎರಡನೇ ಸ್ಥಾನದಲ್ಲಿ ಟ್ರೆಂಟ್ ಬೌಲ್ಟ್‌

ಟ್ರೆಂಟ್‌ ಬೋಲ್ಟ್‌ ಮೊದಲ ಓವರ್‌ನಲ್ಲೇ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ. ಇವರು 79 ಬಾರಿ ಮೊದಲು ಬೌಲಿಂಗ್ ಮಾಡಿ 23 ವಿಕೆಟ್‌ ಪಡೆದಿದ್ದಾರೆ. ಈ ವೇಳೆ ಇವರ ಎಕನಾಮಿ 5.45 ಆಗಿದೆ. ಮೊದಲ ಓವರ್‌ನಲ್ಲಿ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಟ್ರೆಂಟ್‌ ಬೌಲ್ಟ್‌ ಯಶಸ್ವಿ ಬೌಲರ್‌..

ಅಗ್ರಸ್ಥಾನದಲ್ಲಿರುವರು ಯಾರು?

ಮೊದಲ ಓವರ್‌ನಲ್ಲೇ ವಿಕೆಟ್‌ ಪಡೆದ ಬೌಲರ್‌ಗಳನ್ನು ನೋಡಿದಾಗ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಬೌಲರ್‌ ಟೀಮ್ ಇಂಡಿಯಾದ ಅನುಭವಿ ಭುವನೇಶ್ವರ್‌ ಕುಮಾರ್.. ಇವರು 114 ಬಾರಿ ಮೊದಲ ಓವರ್ ಬೌಲ್ ಮಾಡಿ 25 ವಿಕೆಟ್‌ ಕಬಳಿಸಿದ್ದಾರೆ. ಇವೇಳೆ ಇವರ ಎಕನಾಮಿ 5.07 ಆಗಿದೆ.

ಉಳಿದಂತೆ ಪ್ರವೀಣ್‌ ಕುಮಾರ್‌ (15), ಸಂದೀಪ್ ಶರ್ಮಾ (13), ದೀಪಕ್ ಚಹಾರ್‌ (12), ಜಾಹೀರ್ ಖಾನ್‌ (12), ಲಸಿತ್‌ ಮಲಿಂff (11), ಡೇಲ್‌ ಸ್ಟೇನ್‌ (11), ಉಮೇಶ್‌ ಯಾದವ್‌ (9) ಸಹ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

Story first published: Sunday, March 24, 2024, 18:31 [IST]
Other articles published on Mar 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+