IPL 2024: ಎದುರಾಳಿಗೆ ಪರೋಕ್ಷ ಸಂದೇಶ ರವಾನಿಸಿದ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್
ಮುಂಬೈ ಇಂಡಿಯನ್ಸ್.. ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದು.. ಐಪಿಎಲ್‌ನ ಟ್ರೋಫಿಯನ್ನು ಐದು ಬಾರಿ ಎತ್ತಿ ಇತಿಹಾಸ ನಿರ್ಮಿಸಿದೆ. ಈ ತಂಡಕ್ಕೆ ಅಧಿಕ ಅಭಿಮಾನಿಗಳ ಬಳಗವೂ ಇದೆ. ಆದರೆ ಈ ತಂಡ ಐಪಿಎಲ್ ಹರಾಜಿಗೂ ಮುನ್ನ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿ ಎಲ್ಲರ ಚಿತ್ತ ಕದ್ದಿತ್ತು.
ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಎಂಟ್ರಿ ನೀಡುತ್ತಲೆ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವವನ್ನು ನೀಡಲಾಯಿತು. ಇದು ರೋಹಿತ್ ಶರ್ಮಾ ಫ್ಯಾನ್ಸ್ ಗರಂ ಆಗುವಂತೆ ಮಾಡಿತ್ತು. ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಬಾರಿ ಟ್ರೋಫಿ ತೊಡಿಸಿದ ನಾಯಕ ರೋಹಿತ್ ಶರ್ಮಾ ಅವರನ್ನು ಮ್ಯಾನೇಜ್ಮೆಂಟ್ ಕೆಳಗಿಳಿಸಿತ್ತು. ಇದರಿಂದ ಅಭಿಮಾನಿಗಳು ತೀವ್ರ ಬೇಸರ ಗೊಂಡಿದ್ದರು.

ಹಾರ್ದಿಕ್ ಈಗ ಸಂಪೂರ್ಣ ಫಿಟ್ ಆಗಿದ್ದಾರೆ. ವೀಡಿಯೊದಲ್ಲಿ, ಹಾರ್ದಿಕ್ ಬಿಗ್ ಶಾಟ್‌ಗಳನ್ನು ಹೊಡೆಯುತ್ತಿರುವುದು ಕಂಡುಬಂದಿದೆ. ಹಾರ್ದಿಕ್ ಅವರನ್ನು ನೋಡಿದರೆ ಅವರ ಗಾಯ ಈಗ ಸಂಪೂರ್ಣ ವಾಸಿಯಾದಂತೆ ಕಾಣುತ್ತಿದೆ. ಅವರು ಈಗ ಐಪಿಎಲ್ ಮತ್ತು ವಿಶ್ವಕಪ್ ಆಡಲು ಸಂಪೂರ್ಣ ಸಿದ್ಧರಾಗಿದ್ದಾರೆ.
ಪರೋಕ್ಷ ಸಂದೇಶ
ಮುಂಬೈ ಇಂಡಿಯನ್ಸ್ ನಾಯಕ ನೆಟ್ಸ್‌ನಲ್ಲಿ ಭರ್ಜರಿ ಅಭ್ಯಾಸ ಆರಂಭಿಸುವ ಮೂಲಕ ಎದುರಾಳಿಗೆ ಭರ್ಜರಿ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೆ ತಾನು ಸಂಪೂರ್ಣ ಫಿಟ್ ಆಗಿದ್ದು, ಬಿಗ್ ಇನಿಂಗ್ಸ್ ಆಡಲು ತಾನು ಸಿದ್ಧ ಎಂದು ತಿಳಿಸಿದ್ದಾರೆ. ಅಲ್ಲದೆ ಹಳೆಯ ಖದರ್‌ನಲ್ಲೇ ಬರುವುದಾಗಿ ತಿಳಿಸಿದ್ದಾರೆ. ಇವರ ಈ ವಿಡಿಯೋ ನೋಡಿದರೆ, ಗಾಯ ಸಂಪೂರ್ಣವಾಗಿ ಗುಣವಾಗಿದೆ ಎಂದು ಕಾಣಿಸುತ್ತಿದೆ.
ಅಂದಹಾಗೆ ಹಾರ್ದಿಕ್ ಅವರು ಸಂದೇಶವನ್ನು ಬರೀ ಎದುರಾಳಿ ತಂಡಕ್ಕೆ ರವಾನಿಸಿದ್ದಾರೆ ಅಂದರೆ ಅದು ತಪ್ಪಾಗುತ್ತದೆ. ತಮಗೆ ನಾಯಕತ್ವ ನೀಡಿದಾಗ ಮೌನವಾಗಿ ಕೆಂಡ ಕಾರಿದ್ದ ಮುಂಬೈ ಇಂಡಿಯನ್ಸ್ ಆಟಗಾರರಿಗೂ ಮೆಸೇಜ್ ನೀಡಿದ್ದಾರೆ.
ವಿಶ್ವಕಪ್ ವೇಳೆ ಗಾಯ
ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ವೇಳೆ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗಿದ್ದರು. ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಆಲ್‌ರೌಂಡರ್ ಗಾಯಕ್ಕೆ ತುತ್ತಾಗಿದ್ದರು. ಅಲ್ಲಿಂದ ಹಾರ್ದಿಕ್ ಪಾಂಡ್ಯ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ತವರಿನಲ್ಲಿ ನಡೆದ ಹಲವು ಸರಣಿಗಳಿಂದ ಮಿಸ್ ಆಗಿರುವ ಹಾರ್ದಿಕ್, ಐಪಿಎಲ್‌ನಲ್ಲಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಟಿ20 ಸಾಧನೆ
ಹಾರ್ದಿಕ್ ಪಾಂಡ್ಯ ಭಾರತ ಪರ ಇದುವರೆಗೆ ಒಟ್ಟು 92 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ ಒಟ್ಟು 1348 ರನ್‌ಗಳು ಬಂದಿವೆ. ಅಲ್ಲದೆ 73 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications