For Quick Alerts
ALLOW NOTIFICATIONS  
For Daily Alerts
 

IPL 2024: ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಮುಂಬೈ ಇಂಡಿಯನ್ಸ್; ಈ ಸಾಧನೆ ಮಾಡಿದ ವಿಶ್ವದ ಮೊದಲ ತಂಡ

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸತತ ಮೂರು ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಭಾನುವಾರ, ಏಪ್ರಿಲ್ 7ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿತು.

ಇದು ಪ್ರಸಕ್ತ ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲ ಗೆಲುವಿನ ರುಚಿಯಾಗಿದ್ದು, ಕೊನೆಗೂ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 150 ಟಿ20 ಪಂದ್ಯಗಳಲ್ಲಿ ಗೆಲುವು ಪಡೆದ ವಿಶ್ವದ ಮೊದಲ ತಂಡವಾಗಿ ಇತಿಹಾಸ ನಿರ್ಮಿಸಿತು.

IPL 2024 Mumbai Indians Make History with Unique T20 Cricket Record in Victory Against Delhi

ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 29 ರನ್‌ಗಳ ಗೆಲುವಿನ ನಂತರ, 150 ಟಿ20 ಪಂದ್ಯಗಳಲ್ಲಿ ಗೆದ್ದ ಮೊದಲ ತಂಡವಾಯಿತು.

ಐಪಿಎಲ್‌ನಲ್ಲಿ ಅತಿ ಹೆಚ್ಚು ಟಿ20 ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ನಂತರ 148 ಗೆಲುವುಗಳೊಂದಿಗೆ ಸಿಎಸ್‌ಕೆ ಎರಡನೇ ಸ್ಥಾನದಲ್ಲಿದೆ.

ಟಿ20 ಕ್ರಿಕೆಟ್‌ನಲ್ಲಿ ಹೆಚ್ಚಿನ ಗೆಲುವು ಪಡೆದ ತಂಡಗಳು (ಸೂಪರ್ ಓವರ್ ಗೆಲುವು ಬಿಟ್ಟು)

150 - ಮುಂಬೈ ಇಂಡಿಯನ್ಸ್
148 - ಚೆನ್ನೈ ಸೂಪರ್ ಕಿಂಗ್ಸ್
144 - ಭಾರತ
143 - ಲಂಕಾಷೈರ್
143 - ನಾಟಿಂಗ್‌ಹ್ಯಾಮ್‌ಶೈರ್

ಮುಂಬೈ ಇಂಡಿಯನ್ಸ್ ಪರ 150 ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ

ಇದೇ ವೇಳೆ ಐಪಿಎಲ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಜಸ್ಪ್ರೀತ್ ಬುಮ್ರಾ ಪಾತ್ರರಾಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಮುಂಬೈ ಇಂಡಿಯನ್ಸ್ ತಮ್ಮ 150ನೇ ಗೆಲುವಿನ ಮೈಲಿಗಲ್ಲು ಸಾಧಿಸಿದ ಪಂದ್ಯದಲ್ಲಿ, ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್‌ನಲ್ಲಿ 150 ವಿಕೆಟ್‌ಗಳನ್ನು ಪಡೆದ ದಾಖಲೆ ಬರೆದರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮಾತ್ರ ಮುಂಬೈ ಇಂಡಿಯನ್ಸ್ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದರು. ಹೀಗಾಗಿ 4 ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರು.

ಜಸ್ಪ್ರೀತ್ ಬುಮ್ರಾ ಒಂದೇ ಐಪಿಎಲ್ ಫ್ರಾಂಚೈಸಿಗಾಗಿ ಈ ಮೈಲಿಗಲ್ಲನ್ನು ತಲುಪಿದ ಮೊದಲ ಭಾರತೀಯ ಆಟಗಾರನಾಗಿದ್ದಾರೆ. ಈ ಮೊದಲು ಲಸಿತ್ ಮಾಲಿಂಗ ಅವರು ಅದೇ ಮುಂಬೈ ಇಂಡಿಯನ್ಸ್ ತಂಡದ ಪರ ಈ ಸಾಧನೆ ಮಾಡಿದ್ದರೆ, ಸುನಿಲ್ ನರೈನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಈ ಸಾಧನೆ ಮಾಡಿದ್ದಾರೆ.

IPL 2024 Mumbai Indians Make History with Unique T20 Cricket Record in Victory Against Delhi

ಐಪಿಎಲ್‌ನಲ್ಲಿ ತಂಡವೊಂದರ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್

170 - ಲಸಿತ್ ಮಾಲಿಂಗ - ಮುಂಬೈ ಇಂಡಿಯನ್ಸ್
166 - ಸುನಿಲ್ ನರೈನ್ - ಕೋಲ್ಕತ್ತಾ ನೈಟ್ ರೈಡರ್ಸ್
150 - ಜಸ್ಪ್ರೀತ್ ಬುಮ್ರಾ - ಮುಂಬೈ ಇಂಡಿಯನ್ಸ್
147 - ಭುವನೇಶ್ವರ್ ಕುಮಾರ್ - ಸನ್ ರೈಸರ್ಸ್ ಹೈದರಾಬಾದ್
140 - ಡ್ವೇನ್ ಬ್ರಾವೋ - ಚೆನ್ನೈ ಸೂಪರ್ ಕಿಂಗ್ಸ್

ಸತತ ಮೂರು ಪಂದ್ಯಗಳಲ್ಲಿ ಸೋತ ಬಳಿಕ ರೋಹಿತ್ ಶರ್ಮಾ ಅವರ ಬಲವಾದ ಆರಂಭ ಮತ್ತು ರೊಮಾರಿಯೋ ಶೆಫರ್ಡ್‌ನಿಂದ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಮುಂಬೈ ಇಂಡಿಯನ್ಸ್ ಐಪಿಎಲ್ 2024ರಲ್ಲಿ ತಮ್ಮ ಮೊದಲ ಗೆಲುವನ್ನು ಭದ್ರಪಡಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 5 ವಿಕೆಟ್‌ಗೆ 234 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. 20ನೇ ಓವರ್‌ನಲ್ಲಿ ರೊಮಾರಿಯೋ ಶೆಫರ್ಡ್ ಅವರು 32 ರನ್ ಬಾರಿಸುವ ಮೂಲಕ ಸಂಪೂರ್ಣವಾಗಿ ಮುಂಬೈ ಪರವಾಗಿ ಬದಲಾಯಿಸಿದರು.

ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪೃಥ್ವಿ ಶಾ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಅದ್ಭುತ ಪ್ರದರ್ಶನದೊಂದಿಗೆ ವೀರೋಚಿತ ಹೋರಾಟವನ್ನು ನೀಡಿತು. ಅವರು ಬಹುತೇಕ ಗುರಿಯ ಸಮೀಪ ಬಂದಿದ್ದರು. ಆದರೆ ಅಂತಿಮವಾಗಿ 29 ರನ್‌ಗಳ ಅಂತರದಲ್ಲಿ ಸೋತರು.

Story first published: Monday, April 8, 2024, 12:33 [IST]
Other articles published on Apr 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+