IPL 2024: ಮುಂಬೈ ಇಂಡಿಯನ್ಸ್‌ನಲ್ಲಿ ಆಲ್ ಇಸ್ ವೆಲ್?; ರೋಹಿತ್ ಶರ್ಮಾ ತಬ್ಬಿಕೊಂಡ ಹಾರ್ದಿಕ್ ಪಾಂಡ್ಯ
ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ಗಾಗಿ ಭಾರತೀಯ ಅಭಿಮಾನಿಗಳು ಕಾತರರಾಗಿದ್ದಾರೆ.
ಶುಕ್ರವಾರ, ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಸೆಣಸಾಡಲಿವೆ.

ಇದೇ ವೇಳೆ ನೂತನ ನಾಯಕ ಹಾರ್ದಿಕ್ ಪಾಂಡ್ಯ ಅವರು ಮಾಜಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಅಪ್ಪುಗೆಯನ್ನು ಹಂಚಿಕೊಳ್ಳುತ್ತಿರುವಂತೆ ಮುಂಬೈ ಇಂಡಿಯನ್ಸ್ ಶಿಬಿರದೊಳಗೆ "ಆಲ್ ಈಸ್ ವೆಲ್' ಎಂದು ತೋರುತ್ತಿದೆ.
ಐದು ಬಾರಿಯ ಚಾಂಪಿಯನ್ ತಂಡದ ಇಬ್ಬರು ಆಟಗಾರರ ನಡುವಿನ ಬಿರುಕು ವದಂತಿಗಳನ್ನು ಕೊನೆಗೊಳಿಸಲು, ಹಾರ್ದಿಕ್ ಪಾಂಡ್ಯ ಅಭ್ಯಾಸದ ಅವಧಿಯಲ್ಲಿ ರೋಹಿತ್ ಶರ್ಮಾರತ್ತ ತೆರಳಿದರು ಮತ್ತು ಅವರನ್ನು ತಬ್ಬಿಕೊಂಡರು.
ಇದೇ ವೇಳೆ ರೋಹಿತ್ ಶರ್ಮಾ ಅವರು ಹಾರ್ದಿಕ್ ಪಾಂಡ್ಯರನ್ನು ನಗುಮುಖದಿಂದ ಸ್ವಾಗತಿಸಿ, ಬೆಚ್ಚಗಿನ ಅಪ್ಪುಗೆಯನ್ನು ಹಂಚಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಗಾಯದ ಕಾರಣ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಗುಳಿದಿರುವ ಶ್ರೀಲಂಕಾದ ದಿಲ್ಶನ್ ಮಧುಶಂಕ ಅವರ ಬದಲಿಗೆ ಮುಂಬೈ ಇಂಡಿಯನ್ಸ್ (ಎಂಐ) ತಂಡವು ಬುಧವಾರ ಕ್ವೆನಾ ಮಫಕಾ ಅವರನ್ನು ಆಯ್ಕೆ ಮಾಡಿದೆ.
ದಕ್ಷಿಣ ಆಫ್ರಿಕಾದ 17 ವರ್ಷದ ಕ್ವೆನಾ ಮಫಕಾ ಈ ವರ್ಷದ ಆರಂಭದಲ್ಲಿ ಅಂಡರ್-19 ವಿಶ್ವಕಪ್‌ನಲ್ಲಿ ಗಮನ ಸೆಳೆದರು. ಅಲ್ಲಿ ಅವರು 21 ವಿಕೆಟ್‌ಗಳನ್ನು ಪಡೆದಿದ್ದಕ್ಕಾಗಿ ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು. ಎಡಗೈ ಆಟಗಾರನ 21 ವಿಕೆಟ್‌ಗಳು ಅಂಡರ್-19 ವಿಶ್ವಕಪ್‌ನ ಆವೃತ್ತಿಯಲ್ಲಿ ವೇಗದ ಬೌಲರ್‌ನಿಂದ ಅತಿ ಹೆಚ್ಚು ವಿಕೆಟ್ ಆಗಿದೆ.
ಮುಂಬೈ ಇಂಡಿಯನ್ಸ್ ತಂಡವು 2024ರ ಐಪಿಎಲ್ ಆವೃತ್ತಿಯ ಆರಂಭಿಕ ಪಂದ್ಯವನ್ನು ಹಾರ್ದಿಕ್ ಪಾಂಡ್ಯ ಅವರ ಮಾಜಿ ತಂಡ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಆಡಲಿದೆ. ಈ ತಂಡದಲ್ಲಿ ಪಾಂಡ್ಯ ಅವರು 2022ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದರು. ಇದೀಗ ಶುಭ್ಮನ್ ಗಿಲ್ ಈ ವರ್ಷ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
2024ರ ಐಪಿಎಲ್‌ಗಾಗಿ ಮುಂಬೈ ಇಂಡಿಯನ್ಸ್ ತಂಡ
ಬ್ಯಾಟರ್ಸ್: ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ನೆಹಾಲ್ ವಧೇರಾ, ಶಿವಾಲಿಕ್ ಶರ್ಮಾ.
ಆಲ್‌ರೌಂಡರ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಅಂಶುಲ್ ಕಾಂಬೋಜ್, ಮೊಹಮ್ಮದ್ ನಬಿ, ಶಮ್ಸ್ ಮುಲಾನಿ, ನಮನ್ ಧೀರ್, ರೊಮಾರಿಯೊ ಶೆಫರ್ಡ್.
ಬೌಲರ್‌ಗಳು: ಅರ್ಜುನ್ ತೆಂಡೂಲ್ಕರ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆನ್‌ಡಾರ್ಫ್, ಜೆರಾಲ್ಡ್ ಕೊಯೆಟ್ಜಿ, ದಿಲ್ಶನ್ ಮಧುಶಂಕ, ಶ್ರೇಯಸ್ ಗೋಪಾಲ್, ನುವಾನ್ ತುಷಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications