For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2024: ರೋಹಿತ್ ಶರ್ಮಾ ವಿಚಾರವಾಗಿ ಕೊನೆಗೂ ಬಾಯ್ಬಿಟ್ಟ ಮುಂಬೈ ಇಂಡಿಯನ್ಸ್ ಮಾಲೀಕ

ಮಂಗಳವಾರ, ಡಿಸೆಂಬರ್ 19ರಂದು ದುಬೈನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ 72 ಆಟಗಾರರನ್ನು ಖರೀದಿಸಲು ಎಲ್ಲಾ ಹತ್ತು ತಂಡಗಳು 230.45 ಕೋಟಿ ರೂಪಾಯಿ ಖರ್ಚು ಮಾಡುವುದರೊಂದಿಗೆ ಮುಕ್ತಾಯಗೊಂಡಿತು.

2024 ಐಪಿಎಲ್‌ಗಾಗಿ ತಮ್ಮ ತಂಡಗಳನ್ನು ಬಲಪಡಿಸಲು ಫ್ರಾಂಚೈಸಿಗಳು ತಮ್ಮ ಎಲ್ಲಾ ಪ್ರಯತ್ನದಲ್ಲಿ ತೊಡಗಿದ್ದರಿಂದ ಅಭಿಮಾನಿಗಳು ದಾಖಲೆಯ ಬಿಡ್‌ಗಳಿಗೆ ಸಾಕ್ಷಿಯಾದರು.

ಇದೇ ವೇಳೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 17.75 ಕೋಟಿ ರೂಪಾಯಿಯೊಂದಿಗೆ ಮಿನಿ ಹರಾಜು ಪ್ರವೇಶಿಸಿತು. ಲಭ್ಯವಿರುವ ಎಲ್ಲಾ 25 ಸ್ಲಾಟ್‌ಗಳನ್ನು ತುಂಬಲು ಎಂಟು ಆಟಗಾರರೊಂದಿಗೆ ಸಹಿ ಮಾಡಿತು.

IPL 2024: Mumbai Indians owner Akash Ambani clarifies Rohit Sharmas role

ಮುಂಬೈ ಇಂಡಿಯನ್ಸ್ ಜೆರಾಲ್ಡ್ ಕೊಯೆಟ್ಜಿ, ದಿಲ್ಶನ್ ಮಧುಶಂಕ ಮತ್ತು ನುವಾನ್ ತುಷಾರ ಅವರನ್ನು ಖರೀದಿಸುವ ಮೂಲಕ ತಮ್ಮ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸುವತ್ತ ಗಮನಹರಿಸಿತು. ಮೊಹಮ್ಮದ್ ನಬಿ ಮತ್ತು ಶ್ರೇಯಸ್ ಗೋಪಾಲ್ ರೂಪದಲ್ಲಿ ಸ್ಪಿನ್ ಅನುಭವ ಸೇರಿಸಿಕೊಂಡಿತು.

ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆಲ್ಲಲು ಗುಣಮಟ್ಟದ ತಂಡದೊಂದಿಗೆ ಹೊಸ ಆವೃತ್ತಿಗೆ ಪ್ರವೇಶಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಆದರೂ, ನಾಯಕತ್ವ ಸ್ಥಾನದಿಂದ ಕೆಳಗಿಳಿದ ರೋಹಿತ್ ಶರ್ಮಾ ಕುರಿತು ಫ್ರಾಂಚೈಸಿಯ ನಿಲುವಿನ ಮೇಲೆ ಪ್ರಶ್ನೆಗಳು ಹಾಗೆ ಉಳಿದಿವೆ.

ಅನುಭವಿ ಆರಂಭಿಕ ಬ್ಯಾಟರ್‌ನನ್ನು ನಾಯಕತ್ವದ ಪಾತ್ರದಿಂದ ತೆಗೆದುಹಾಕಲಾಯಿತು ಮತ್ತು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ನ ಅಚ್ಚರಿಯ ನಡೆಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟನ್ಸ್ ತಂಡದಿಂದ ವಾಪಸ್ ಕರೆತರುವ ಮೂಲಕ ರೋಹಿತ್ ಶರ್ಮಾರ ನಾಯಕನ ಸ್ಥಾನವನ್ನು ನೀಡಲಾಯಿತು.

ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ಫ್ರಾಂಚೈಸಿಯ ನಿರ್ಧಾರದ ಬಗ್ಗೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ತಮ್ಮ ನಿರಾಶೆಯನ್ನು ಸ್ಪಷ್ಟವಾಗಿ ಹೊರಹಾಕಿದರು.

ಕೆಲವು ಮಾಧ್ಯಮ ವರದಿಗಳು ಮುಂಬೈ ಇಂಡಿಯನ್ಸ್ ಆಟಗಾರರು ಫ್ರಾಂಚೈಸಿಯ ನಿರ್ಧಾರದಿಂದ ಸಂತೋಷವಾಗಿಲ್ಲ ಎಂದು ಸೂಚಿಸಿವೆ ಮತ್ತು ಕೆಲವರು ಭಾರತ ತಂಡದ ನಾಯಕ ಬೇರೆ ತಂಡವನ್ನು ಹುಡುಕುತ್ತಿದ್ದಾರೆ ಎಂದು ಹೇಳಿವೆ.

ಆದಾಗ್ಯೂ, ಮಂಗಳವಾರ ದುಬೈನಲ್ಲಿ ನಡೆದ ಹರಾಜು ಸಮಾರಂಭದಲ್ಲಿ, ಒಬ್ಬ ಮುಂಬೈ ಇಂಡಿಯನ್ಸ್ ಅಭಿಮಾನಿ 'ರೋಹಿತ್ ಶರ್ಮಾ ಕೋ ವಾಪಾಸ್ ಲಾವೋ' ಎಂದು ಕೂಗಿದಾಗ ಫ್ರಾಂಚೈಸಿಯ ಮಾಲೀಕರಾದ ಆಕಾಶ್ ಅಂಬಾನಿ ಅವರು ರೋಹಿತ್ ಶರ್ಮಾ ಪಾತ್ರವನ್ನು ಸ್ಪಷ್ಟಪಡಿಸಿದರು.

ಅಭಿಮಾನಿಗಳು ಚಿಂತಿಸಬೇಡಿ ಎಂದು ಹೇಳಿದ ಆಕಾಶ್ ಅಂಬಾನಿ, ಮಾಜಿ ನಾಯಕ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ವರದಿಯಾಗಿದೆ. 'ಚಿಂತಾ ಮತ್ ಕರೋ ವೋ ಬ್ಯಾಟಿಂಗ್ ಕರೇಗಾ' ಎಂದು ಉತ್ತರಿಸಿದರು.

ಕ್ರಿಕ್‌ಬಝ್‌ನ ಮತ್ತೊಂದು ವರದಿಯಲ್ಲಿ, ಮುಂಬೈ ಇಂಡಿಯನ್ಸ್ ಅಧಿಕಾರಿಯೊಬ್ಬರು ರೋಹಿತ್ ಶರ್ಮಾ ಬಗ್ಗೆ ತಂಡದ ನಿಲುವಿನ ಸುತ್ತಲಿನ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದರು ಮತ್ತು ಆರಂಭಿಕ ಆಟಗಾರನನ್ನು ಯಾವುದೇ ತಂಡದೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ಖಚಿತಪಡಿಸಿದರು.

"ರೋಹಿತ್ ಶರ್ಮಾ ಎಲ್ಲಿಯೂ ಹೋಗುವುದಿಲ್ಲ ಅಥವಾ ಯಾವುದೇ ಆಟಗಾರನೂ ಹೋಗುವುದಿಲ್ಲ," ಎಂದು ಮುಂಬೈ ಇಂಡಿಯನ್ಸ್ ಅಧಿಕಾರಿಯೊಬ್ಬರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.

"ರೋಹಿತ್ ಶರ್ಮಾ ಸೇರಿದಂತೆ ಉಳಿದ ಯಾವುದೇ ಆಟಗಾರರ ಕುರಿತ ವದಂತಿಗಳು ಸಂಪೂರ್ಣವಾಗಿ ನಕಲಿ ಮತ್ತು ಸುಳ್ಳು. ಯಾವುದೇ ಮುಂಬೈ ಇಂಡಿಯನ್ಸ್ ಆಟಗಾರನು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಅಥವಾ ನಮ್ಮಿಂದ ವ್ಯಾಪಾರ ಮಾಡುವುದಿಲ್ಲ. ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಪ್ರತಿಯೊಬ್ಬ ಆಟಗಾರನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ರೋಹಿತ್ ಶರ್ಮಾಗೂ ತಿಳಿಸಲಾಗಿದೆ ಮತ್ತು ಅವರು ನಿರ್ಧಾರ ಪ್ರಕ್ರಿಯೆಯ ಭಾಗವಾಗಿದ್ದಾರೆ," ಎಂದರು.

Story first published: Thursday, December 21, 2023, 6:30 [IST]
Other articles published on Dec 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+