ಇಂಡಿಯನ್ ಪ್ರೀಮಿಯರ್ ಲೀಗ್‌ನ ಎಂಟನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದು, ಮೊದಲ ಗೆಲುವಿನ ಹುಡುಕಾಟದಲ್ಲಿವೆ. ಎರಡೂ ತಂಡಗಳಿಗೂ ನಾಯಕ ಬದಲಾಗಿದ್ದರಿಂದ ರೋಚಕತೆ ಹೆಚ್ಚಿಸಿದೆ.
ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಅವರ ಬದಲಿಗೆ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಇವರ ನಾಯಕತ್ವದಲ್ಲಿ ಮುಂಬೈ ಇನ್ನು ಗೆಲುವಿನ ಖಾತೆಯನ್ನು ತೆರೆಯಬೇಕಿದೆ. ಇತ್ತ ಹೈದರಾಬಾದ್ ಸಹ ಏಡೆನ್ ಮಾರ್ಕ್ರಾಮ್ ಅವರ ಬದಲಿಗೆ ವಿಶ್ವ ಕಪ್ ವಿಜೇತ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ನೀಡಿದೆ. ಇವರ ನಾಯಕತ್ವದಲ್ಲೂ ಎಸ್‌ಆರ್‌ಎಚ್ ಮೊದಲ ಗೆಲುವಿನ ವಿಶ್ವಾಸದಲ್ಲಿದೆ.

ಮುಂಬೈ ಇಂಡಿಯನ್ಸ್ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಕಂಡಿತ್ತು. ಈ ಪಂದ್ಯದಿಂದ ಸೋಲು ಕಂಡಿದ್ದು ಇದರಿಂದ ಪಾಠ ಕಲಿಯಬೇಕಿದೆ. ಮೊದಲ ಪಂದ್ಯದಲ್ಲಿ ಆರಂಭಿಕ ಇಶಾನ್ ಕಿಶನ್ ರನ್ ಕಲೆ ಹಾಕುವಲ್ಲಿ ಎಡವಿದ್ದರು. ಇವರು ಅಬ್ಬರದ ಆಟವನ್ನು ನಡೆಸಿ ಟಿ20 ವಿಶ್ವಕಪ್‌ನಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ಕನಸು ಹೊಂದಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಇವರ ಕ್ಲಾಸಿಕ್ ಆಟಕ್ಕೆ ಬ್ರೇಕ್ ಹಾಕುವುದು ಎಸ್‌ಆರ್‌ಎಚ್ ತಂಡಕ್ಕೆ ಸವಾಲಾಗಿದೆ.
ಮಧ್ಯಮ ಕ್ರಮಾಂಕದಲ್ಲಿ ಯುವ ಆಟಗಾರ ನಮನ್ ಧೀರ್, ತಿಲಕ್ ವರ್ಮಾ, ಡೇವಿಡ್ ಬ್ರೇವಿಸ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಅವಶ್ಯಕತೆ ಇದೆ. ಆದರೆ ನಾಯಕ ಹಾರ್ದಿಕ್ ಪಾಂಡ್ಯ ತಮ್ಮನ್ನು ತಾವು ಪ್ರಮೋಟ್ ಮಾಡಿಕೊಳ್ಳವು ಅವಶ್ಯಕತೆ ಇದೆ. ಅಲ್ಲದೆ ಇವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಶ್ಯಕತೆ ಇದೆ. ಟೀಮ್ ಡೇವಿಡ್ ತಮ್ಮ ನ್ಯೂನತೆಗಳನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಬೇಕಿದೆ.
ಜಸ್ಪ್ರಿತ್ ಬುಮ್ರಾ ಎಸ್ ಆರ್‌ಎಚ್ ತಂಡಕ್ಕೆ ಮಾರಕವಾಗಬಲ್ಲರು. ಇವರು ಆಡಿರುವ 13 ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿದ್ದಾರೆ. ಇವರಿಗೆ ಲುಕ್ ವುಡ್ ಹಾಗೂ ಪಿಯುಷ್ ಚಾವ್ಲಾ ಸಮಯೋಚಿತ ಬೌಲಿಂಗ್ ನಡೆಸುವ ಅವಶ್ಯಕತೆ ಇದೆ.

ಈ ಲೀಗ್‌ನಲ್ಲಿ ಹೆನ್ರಿಚ್ ಕ್ಲಾಸೇನ್ ಇತ್ತೀಚಿನ ವರ್ಷಗಳಲ್ಲಿ ತಂಡಕ್ಕೆ ನೆರವಾಗವಬಲ್ಲ ಆಟಗಾರ. ಇವರು 177 ಸ್ಟ್ರೈಕ್ ರೇಟ್‌ನಲ್ಲಿ 448 ರನ್ ಸಿಡಿಸಿದ್ದಾರೆ. ಕೆಕೆಆರ್ ವಿರುದ್ಧ ಹೆನ್ರಿಚ್ 29 ಎಸೆತಗಳಲ್ಲಿ 63 ರನ್ ಸಿಡಿಸಿ ಭರವಸೆ ಮೂಡಿಸಿದ್ದಾರೆ. ಇನ್ನು ಆರಂಭಿಕರಾದ ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ ಉತ್ತಮ ಜೊತೆಯಾಟದ ಕಾಣಿಕೆ ನೀಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ, ಮಾಜಿ ನಾಯಕ ಏಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಜವಾಬ್ದಾರಿಯುತ ಬ್ಯಾಟ್ ಮಾಡಬೇಕು.
ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್, ಪ್ಯಾಟ್ ಕಮಿನ್ಸ್ ಶಿಸ್ತು ಬದ್ಧ ದಾಳಿ ನಡೆಸಬೇಕಿದೆ. ಇನ್ನು ಟಿ.ನಟರಾಜನ್ ಎದುರಾಳಿಯನ್ನು ಕಾಡಬೇಕಿದೆ. ಅಂದಾಗ ಮಾತ್ರ ಗೆಲುವಿನ ಕನಸು ನನಸಾಗುತ್ತದೆ.
ಎಸ್‌ಆರ್‌ಎಚ್ ಸಂಭಾವ್ಯ ತಂಡ: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸೆನ್/ಫಜಲ್ಹಕ್ ಫಾರೂಕಿ, ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್.
ಮುಂಬೈ ಸಂಭಾವ್ಯ ತಂಡ: ಇಶಾನ್ ಕಿಶನ್, ರೋಹಿತ್ ಶರ್ಮಾ, ನಮನ್ ಧೀರ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಟಿಮ್ ಡೇವಿಡ್, ಶಮ್ಸ್ ಮುಲಾನಿ, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾಲಾ, ಜಸ್ಪ್ರೀತ್ ಬುಮ್ರಾ, ಲ್ಯೂಕ್ ವುಡ್