Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಮುಂಬೈ ಇಂಡಿಯನ್ಸ್ ತಂಡಕ್ಕೆ ಕ್ಲಾಸ್ ತೆಗೆದುಕೊಂಡ ನೀತಾ ಅಂಬಾನಿ

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಭಿಯಾನವನ್ನು 10-ತಂಡಗಳ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿ ಮುಗಿಸಿದ ಮುಂಬೈ ಇಂಡಿಯನ್ಸ್ ತಂಡ 14 ಪಂದ್ಯಗಳಲ್ಲಿ 10 ಸೋಲು ಮತ್ತು ಕೇವಲ 4 ಗೆಲುವುಗಳನ್ನು ಗಳಿಸಿದೆ.

ಈ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಅವರಿಂದ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ವಹಿಸಿಕೊಂಡರು. ಈ ನಿರ್ಧಾರವು ಇಡೀ ಅಭಿಯಾನದಲ್ಲಿ ಮುಖ್ಯಾಂಶವಾಗಿ ಉಳಿಯಿತು ಮತ್ತು ವಿವಾದವಾಗಿಯೂ ಕೊನೆಗೊಂಡಿತು.

IPL 2024 Nita Ambani Gave a Clear Message to Mumbai Indians team After Disappointing Show

ಪ್ರಸಕ್ತ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಬಾರಿಗೆ ಒಟ್ಟುಗೂಡಿದ ಕಾರಣ, ಮಾಲೀಕರಾದ ನೀತಾ ಅಂಬಾನಿ ಈ ಋತುವನ್ನು ಎಲ್ಲರಿಗೂ ನಿರಾಶಾದಾಯಕವೆಂದು ಕರೆಯಲು ಯಾವುದೇ ಹಿಂಜರಿಕೆ ಹೊಂದಲಿಲ್ಲ. ಈ ಅಭಿಯಾನದಲ್ಲಿ ಏನಾಯಿತು ಎಂಬುದನ್ನು ಹಿಂತಿರುಗಿ ಪರಿಶೀಲಿಸುವ ಅವಶ್ಯಕತೆಯಿದೆ ಎಂದು ಒಪ್ಪಿಕೊಂಡರು.

ಮುಂಬೈ ಇಂಡಿಯನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ನೀತಾ ಅಂಬಾನಿ ಪ್ರಸ್ತುತ ಋತುವನ್ನು ಕಳಪೆಯಾಗಿ ಕೊನೆಗೊಳಿಸಿದ ರೀತಿಯಲ್ಲಿ, ಮಾಲೀಕರಾಗಿ ಮಾತ್ರವಲ್ಲದೆ ಅಭಿಮಾನಿಯಾಗಿಯೂ ಮಾತನಾಡಿದರು.

"ನಮ್ಮೆಲ್ಲರಿಗೂ ಇದು ನಿರಾಶಾದಾಯಕ ಋತು. ನಾವು ಬಯಸಿದ ರೀತಿಯಲ್ಲಿ ವಿಷಯಗಳು ನಡೆಯಲಿಲ್ಲ. ಆದರೆ ಕೇವಲ ಮಾಲೀಕಿಯಾಗಲ್ಲ, ನಾನು ಈಗಲೂ ಮುಂಬೈ ಇಂಡಿಯನ್ಸ್‌ನ ದೊಡ್ಡ ಅಭಿಮಾನಿಯಾಗಿದ್ದೇನ".

IPL 2024 Nita Ambani Gave a Clear Message to Mumbai Indians team After Disappointing Show

"ಮುಂಬೈ ಇಂಡಿಯನ್ಸ್ ಜರ್ಸಿಯನ್ನು ಧರಿಸುವುದು ದೊಡ್ಡ ಗೌರವ ಮತ್ತು ಸವಲತ್ತು ಎಂದು ನಾನು ಭಾವಿಸುತ್ತೇನೆ. ಮುಂಬೈ ಇಂಡಿಯನ್ಸ್‌ನೊಂದಿಗೆ ಸಂಬಂಧ ಹೊಂದುವುದು ನನಗೂ ಗೌರವ ಮತ್ತು ಸವಲತ್ತು. ನಾವು ಹಿಂತಿರುಗಿ ಏನಾಗಿದೆ ಪರಿಶೀಲಿಸಬೇಕು ಮತ್ತು ಅದರ ಬಗ್ಗೆ ಯೋಚಿಸುತ್ತೇವೆ ಎಂದು ನಾನು ಭಾವಿಸುತ್ತೇನೆ," ಎಂದು ನೀತಾ ಅಂಬಾನಿ ಹೇಳಿದರು.

ಇದೇ ವೇಳೆ ನೀತಾ ಅಂಬಾನಿ ಅವರು ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಭಾರತೀಯ ತಂಡಕ್ಕೆ ವಿಶೇಷ ಸಂದೇಶ ತಿಳಿಸಿದರು. ಅವರು ಇದೀಗ ಭಾರತೀಯ ತಂಡದ ಭಾಗವಾಗಿ ಮುಂಬರುವ 2024ರ ಟಿ20 ವಿಶ್ವಕಪ್‌ಗಾಗಿ ತಯಾರಿಯನ್ನು ಪ್ರಾರಂಭಿಸಲಿದ್ದಾರೆ.

"ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ. ಎಲ್ಲಾ ಭಾರತೀಯರು ನಿಮಗಾಗಿ ಹುರಿದುಂಬಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾವು ನಿಮಗೆ ಶುಭ ಹಾರೈಸುತ್ತೇವೆ," ಎಂದು ನೀತಾ ಅಂಬಾನಿ ತಿಳಿಸಿದರು.

2024ರ ಟಿ20 ವಿಶ್ವಕಪ್‌ನಲ್ಲಿ ಜೂನ್ 5ರಂದು ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದೊಂದಿಗೆ ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ತಂಡದ ಅಭಿಯಾನ ಪ್ರಾರಂಭವಾಗುತ್ತದೆ. ಜೂನ್ 1ರಂದು ಭಾರತ ತಂಡ ಬಾಂಗ್ಲಾದೇಶ ತಂಡವನ್ನು ಅಭ್ಯಾಸ ಪಂದ್ಯದಲ್ಲಿ ಎದುರಿಸಲಿದೆ.

Story first published: Tuesday, May 21, 2024, 16:41 [IST]
Other articles published on May 21, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+