Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ

ಶನಿವಾರ, ಏಪ್ರಿಲ್ 13ರಂದು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 27ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿ ನಡುವಿನ ಹೈ-ವೋಲ್ಟೇಜ್ ಕದನದಲ್ಲಿ ಮುಖಾಮುಖಿಯಾಗುತ್ತಿವೆ.

ಸತತ ನಾಲ್ಕು ಆರಂಭಿಕ ಗೆಲುವು ಸಾಧಿಸಿದ ನಂತರ, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಹಿಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್‌ಗಳಿಂದ ಮೊದಲ ಸೋಲನ್ನು ಅನುಭವಿಸಿತು.

IPL 2024 PBKS vs RR Match Preview Fantasy Dream Team Probable Playing XI


ಇದೀಗ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಹಿಂದಿನ ಸೋಲನ್ನು ಮರೆತು ಪಂಜಾಬ್ ಕಿಂಗ್ಸ್ ವಿರುದ್ಧ ಆಡುವಾಗ ಮತ್ತೆ ಪುಟಿದೇಳಲು ಎದುರು ನೋಡುತ್ತಿದೆ. ತಮ್ಮ ಹಿಂದಿನ ಪಂದ್ಯವನ್ನು ಸೋತ ನಂತರವೂ, ರಾಜಸ್ಥಾನ್ ರಾಯಲ್ಸ್ ಈಗಲೂ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಆದಾಗ್ಯೂ, ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ವಿಭಾಗವು ಕೊಂಚ ಕಳಪೆಯಾಗಿ ಕಾಣುತ್ತಿದೆ. ಕುಲದೀಪ್ ಸೇನ್ ಮತ್ತು ಯುಜ್ವೇಂದ್ರ ಚಹಾಲ್ ಹೊರತುಪಡಿಸಿ, ಇತರ ಬೌಲರ್‌ಗಳು ಹಿಂದಿನ ಪಂದ್ಯದಲ್ಲಿ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟರು.

ಮತ್ತೊಂದೆಡೆ, ಈ ಐಪಿಎಲ್ ಆವೃತ್ತಿಯಲ್ಲಿ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡ ಆಡಿದ ಐದು ಪಂದ್ಯಗಳಲ್ಲಿ ಮೂರು ಸೋಲು ಮತ್ತು ಎರಡು ಗೆಲುವು ಸಾಧಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲಿ ನೆಕ್-ಟು-ನೆಕ್ ಹೋರಾಟ ನಡೆಸಿದರು. ಅಂತಿಮವಾಗಿ ಎರಡು ರನ್‌ಗಳಿಂದ ರೋಚಕವಾಗಿ ಸೋತರು.

IPL 2024 PBKS vs RR Match Preview Fantasy Dream Team Probable Playing XI

ಪಿಬಿಕೆಎಸ್ vs ಆರ್‌ಆರ್‌ ಪಂದ್ಯದ ವಿವರ

ಸ್ಥಳ ಮತ್ತು ದಿನಾಂಕ: ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2024ರ ಪಂದ್ಯವು ಶನಿವಾರ, ಏಪ್ರಿಲ್ 13ರಂದು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸ್ಟೇಡಿಯಂನಲ್ಲಿ ನಡೆಯಲಿದೆ.

ಪಂದ್ಯದ ಸಮಯ: ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿದೆ.

ಪಿಬಿಕೆಎಸ್ vs ಆರ್‌ಆರ್‌ ಪಂದ್ಯದ ಟಿವಿ, ಲೈವ್ ಸ್ಟ್ರೀಮಿಂಗ್ ಮಾಹಿತಿ
ಐಪಿಎಲ್ 2024ರ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರವಾಗಲಿದ್ದರೆ, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

ಪಿಬಿಕೆಎಸ್ vs ಆರ್‌ಆರ್‌ ಫ್ಯಾಂಟಸಿ ಡ್ರೀಮ್ ಟೀಂ

ನಾಯಕ: ಜೋಸ್ ಬಟ್ಲರ್

ಉಪನಾಯಕ: ಶಶಾಂಕ್ ಸಿಂಗ್

ವಿಕೆಟ್‌ಕೀಪರ್: ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ

ಬ್ಯಾಟರ್‌ಗಳು: ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಜಾನಿ ಬೈರ್‌ಸ್ಟೋವ್, ಶಿಖರ್ ಧವನ್

ಆಲ್‌ರೌಂಡರ್‌ಗಳು: ಸ್ಯಾಮ್ ಕುರ್ರಾನ್, ಸಿಕಂದರ್ ರಜಾ

ಬೌಲರ್‌ಗಳು: ಕಗಿಸೊ ರಬಾಡ, ಯುಜ್ವೇಂದ್ರ ಚಹಾಲ್, ಅರ್ಶ್‌ದೀಪ್ ಸಿಂಗ್

ಪಿಬಿಕೆಎಸ್ vs ಆರ್‌ಆರ್‌ ಸಂಭಾವ್ಯ ಆಡುವ 11ರ ಬಳಗ

ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರ್ರಾನ್, ಹರ್ಷಲ್ ಪಟೇಲ್, ಪ್ರಭ್‌ಸಿಮ್ರಾನ್ ಸಿಂಗ್, ಜಾನಿ ಬೈರ್‌ಸ್ಟೋವ್, ಸಿಕಂದರ್ ರಜಾ, ಕಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ಶಶಾಂಕ್ ಸಿಂಗ್, ಅರ್ಶ್‌ದೀಪ್ ಸಿಂಗ್.

ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ಟ್ರೆಂಟ್ ಬೌಲ್ಟ್, ರವಿಚಂದ್ರನ್ ಅಶ್ವಿನ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಕುಲದೀಪ್ ಸೇನ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್.

Story first published: Saturday, April 13, 2024, 18:05 [IST]
Other articles published on Apr 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+