ಭಾನುವಾರ, ಏಪ್ರಿಲ್ 7ರಂದು ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಎರಡು ಪಂದ್ಯಗಳ ಫಲಿತಾಂಶವು ಅಂಕಪಟ್ಟಿಯಲ್ಲಿ ಭಾರೀ ವ್ಯತ್ಯಾಸವನ್ನುಂಟು ಮಾಡಿದೆ.
ಭಾನುವಾರದಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 29 ರನ್‌ಗಳಿಂದ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಮೊದಲ ಬಾರಿಗೆ ಮೇಲಕ್ಕೇರಿದೆ.


ರಾಜಸ್ಥಾನ್ ರಾಯಲ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ 4 ಗೆಲುವು ಸಾಧಿಸುವ ಮೂಲಕ 8 ಅಂಕಗಳು ಮತ್ತು +1.120 ನೆಟ್ ರನ್ ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆಡಿದ 3 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ 6 ಅಂಕಗಳು ಮತ್ತು +2.518 ನೆಟ್ ರನ್ ರೇಟ್‌ನೊಂದಿಗೆ 2ನೇ ಸ್ಥಾನದಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲು ಕಂಡಿದ್ದು, ಒಟ್ಟು 6 ಅಂಕಗಳು ಮತ್ತು +0.775 ನೆಟ್ ರನ್ ರೇಟ್‌ನೊಂದಿಗೆ 3ನೇ ಸ್ಥಾನ ಪಡೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ 2 ಗೆಲುವು ಹಾಗೂ 2 ಸೋಲು ಕಂಡಿದೆ. ಒಟ್ಟು 4 ಅಂಕಗಳು ಮತ್ತು +0.517 ನೆಟ್ ರನ್ ರೇಟ್‌ನೊಂದಿಗೆ 4ನೇ ಸ್ಥಾನಕ್ಕೆ ಇಳಿದಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ 4 ಪಂದ್ಯಗಳಲ್ಲಿ 2 ಗೆಲುವು ಮತ್ತು 2 ಸೋಲು ಕಂಡಿದ್ದು, 4 ಅಂಕಗಳು ಹಾಗೂ +0.409 ನೆಟ್ ರನ್ ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿದೆ.
ಪಂಜಾಬ್ ಕಿಂಗ್ಸ್ ತಂಡವು ಆಡಿದ 4 ಪಂದ್ಯಗಳಲ್ಲಿ 2 ಗೆಲುವು ಹಾಗೂ 2 ಸೋಲು ಅನುಭವಿಸಿದ್ದು, ಒಟ್ಟು 4 ಅಂಕಗಳು ಮತ್ತು -0.220 ನೆಟ್ ರನ್ ರೇಟ್‌ನೊಂದಿಗೆ 6ನೇ ಸ್ಥಾನ ಹೊಂದಿದೆ.
ಗುಜರಾತ್ ಟೈಟನ್ಸ್ ತಂಡವು ಆಡಿದ 5 ಪಂದ್ಯಗಳಲ್ಲಿ 2 ಗೆಲುವು ಮತ್ತು 3 ಸೋಲು ಕಂಡಿದೆ. ಈ ಮೂಲಕ 4 ಅಂಕಗಳು ಮತ್ತು -0.797 ನೆಟ್ ರನ್ ರೇಟ್‌ನೊಂದಿಗೆ 7ನೇ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ 4 ಪಂದ್ಯಗಳಲ್ಲಿ 1 ಗೆಲುವು ಮತ್ತು 3 ಸೋಲು ಕಂಡಿದ್ದು, 2 ಅಂಕಗಳು ಹಾಗೂ -0.704 ನೆಟ್ ರನ್ ರೇಟ್‌ನೊಂದಿಗೆ 8ನೇ ಸ್ಥಾನಕ್ಕೇರಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 5 ಪಂದ್ಯಗಳಲ್ಲಿ 1 ಗೆಲುವು ಮತ್ತು 4 ಸೋಲು ಅನುಭವಿಸಿದ್ದು, 2 ಅಂಕಗಳು ಮತ್ತು -0.843 ನೆಟ್ ರನ್ ರೇಟ್‌ನೊಂದಿಗೆ 9ನೇ ಸ್ಥಾನದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೀಗ ಆಡಿದ 5 ಪಂದ್ಯಗಳಲ್ಲಿ 1 ಗೆಲುವು ಮತ್ತು 4 ಸೋಲು ಅನುಭವಿಸಿ -1.370 ನೆಟ್ ರನ್ ರೇಟ್‌ನೊಂದಿಗೆ ಕೊನೆಯ ಸ್ಥಾನಕ್ಕೆ ಇಳಿದಿದೆ.