IPL 2024: ಆರ್‌ಸಿಬಿ ಕಪ್ ಗೆಲುವಿನ ಕನಸಿಗೆ ಜೀವ ತುಂಬಿದ ಭರವಸೆಯ ಆಲ್‌ರೌಂಡರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈ ಸುದ್ದಿ ವಿದೇಶಿ ಲೀಗ್‌ನಲ್ಲಿ ಫಾರ್ಮ್ ಇಲ್ಲದೆ ಪರದಾಡುತ್ತಿರುವ ತಮ್ಮ ನಾಯಕನ ಚಿಂತೆಯನ್ನು ದೂರ ಮಾಡಿದೆ. ಅಂದಹಾಗೆ ಈ ಪ್ಲೇಯರ್ ಆರ್‌ಸಿಬಿ ಕ್ಯಾಂಪ್‌ನಲ್ಲಿ ಹೊರ ಭರವಸೆಯ ಬೆಳಕನ್ನು ಮೂಡಿಸಿದ್ದಾರೆ. ಅಲ್ಲದೆ ಮಿಡ್ಲ್ ಆರ್ಡರ್ ನಲ್ಲಿ ಬ್ಯಾಟಿಂಗ್ ಮಾಡಿ ಬೌಲಿಂಗ್ ಮಾಡುವ ಕ್ಷಮತೆಯನ್ನು ಹೊಂದಿರುವ ಈ ಯಂಗ್ ಪ್ಲೇಯರ್, ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿದ್ದಾರೆ.
ದೂರದ ಗುಜರಾತ್‌ನಲ್ಲಿನ ಅಹಮದಾಬಾದ್ ಅಂಗಳದಲ್ಲಿ 24 ವರ್ಷದ ಪ್ಲೇಯರ್ ಬ್ಯಾಟಿಂಗ್ ಸದ್ದು, ರಾಜ್ಯಗಳ ಗಡಿಯನ್ನು ದಾಟಿ ಕರ್ನಾಟಕಕ್ಕೆ ಬಂದಿದೆ. ಅಲ್ಲದೆ ಇಲ್ಲಿನ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದೆ. ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಈ ಸಮಯದಲ್ಲಿ ಭರವಸೆಯ ಯುವ ಆಟಗಾರ ಲಯಕ್ಕೆ ಮರಳಿರುವುದು ತಂಡಕ್ಕೆ ಹೊಸ ಆಶಾಕಿರಣ ಮೂಡಿಸಿದೆ. ಈ ಮೂಲಕ ಟೀಮ್ ಮ್ಯಾನೇಜ್ಮೆಂಟ್ ಕೊಂಚ ರಿಲ್ಯಾಕ್ಸ್ ಆದಂತೆ ಕಾಣಿಸುತ್ತದೆ.

ಭರವಸೆ ಮೂಡಿಸಿದ ಆಟಗಾರ ಯಾರು?
ಸದ್ಯ ಭಾರತದಲ್ಲಿ ರಣಜಿ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ಹಲವು ಆಟಗಾರರು ನೀಡುತ್ತಿದ್ದಾರೆ. ಆದರೆ ಅಭಿಮಾನಿಗಳ ದೃಷ್ಟಿ ಮಾತ್ರ ತಮ್ಮದೇ ತಂಡದ ಐಪಿಎಲ್‌ನಲ್ಲಿ ತಾವು ಬೆಂಬಲಿಸುವ ಆಟಗಾರರ ಮೇಲೆ ಇರುತ್ತದೆ. ಗುಜರಾತ್‌ನಲ್ಲಿ ಯಂಗ್ ಪ್ಲೇಯರ್ ಬ್ಯಾಟಿಂಗ್ ಮೋಡಿಗೆ ಬೆಂಗಳೂರು ತಂಡದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ಆರ್‌ಸಿಬಿ ಅಭಿಮಾನಿಗಳ ಮುಖದಲ್ಲಿ ಸಂತಸ ಮೂಡಿಸಿದ ಪ್ಲೇಯರ್ ಮಹಿಪಾಲ್ ಲೋಮ್ರೋರ್.
2016ರಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್‌ನಲ್ಲಿ ತನ್ನ ಸ್ಥಿರ ಪ್ರದರ್ಶನದಿಂದಲೇ ಎಲ್ಲರ ಚಿತ್ತ ಕದ್ದ ಪ್ಲೇಯರ್ ಮಹಿಪಾಲ್ ಲೋಮ್ರೋರ್.. ಈ ವಿಶ್ವಕಪ್‌ನಲ್ಲಿ ಆಡಿದ ಎರಡನೇ ಪಂದ್ಯದಲ್ಲಿ ತನ್ನ ಕ್ಷಮತೆಯನ್ನು ಸಾಬೀತು ಮಾಡಿದರು. ಇವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 45 ರನ್ ಬಾರಿಸಿದ್ದು ಅಲ್ಲದೆ ಐದು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಇವರ ಆಟವನ್ನು ಕಂಡು ಆಗ ಡೆಲ್ಲಿ ಕ್ಯಾಪಿಟಲ್ಸ್ ಇವರಿಗೆ ಮಣೆ ಹಾಕಿತು. 2022 ಐಪಿಎಲ್ ಮೆಗಾ ಹರಾಜಿನಲ್ಲಿ ಮಹಿಪಾಲ್ ಲೋಮ್ರೋರ್ ಅವರನ್ನು ಆರ್‌ಸಿಬಿ 95 ಲಕ್ಷ ನೀಡಿ ಖರೀದಿ ಮಾಡಿತು.

ಹೇಗಿದೆ ಆಲ್‌ರೌಂಡರ್ ಪ್ರದರ್ಶನ
ಈ ಪ್ಲೇಯರ್ ರಣಜಿ ಟೂರ್ನಿ ಕ್ರಿಕೆಟ್ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ರಣಜಿ ಟೂರ್ನಿಯ ಪಂದ್ಯದಲ್ಲಿ ಮಣಿಪುರ ವಿರುದ್ಧ ಬ್ಯಾಟ್ ಮಾಡಿದ ರಾಜಸ್ಥಾನ ಪ್ಲೇಯರ್ ಮಹಿಪಾಲ್ ಲೋಮ್ರೋರ್ ಅಬ್ಬರಿಸಿದ್ದಾರೆ. ಇವರು 212 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಾಯದಿಂದ 117 ರನ್ ಸಿಡಿಸಿದ್ದಾರೆ. ಈ ಮೂಲಕ ತಮ್ಮನ್ನು ಕಡೆಗಣಿಸದಂತೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ಸಂದೇಶ ಸಾರಿದ್ದಾರೆ.
ಪ್ರಸಕ್ತ ರಣಜಿ ಟೂರ್ನಿಯಲ್ಲಿ ಮಹಿಪಾಲ್ ಆಡಿರುವ ನಾಲ್ಕು ಪಂದ್ಯಗಳಲ್ಲಿ 307 ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಮುಂಬರುವ ಐಪಿಎಲ್ ಆವೃತ್ತಿಯಲ್ಲೂ ಈ ಪ್ಲೇಯರ್‌ಗೆ ಆರ್‌ಸಿಬಿ ಅವಕಾಶವನ್ನು ನೀಡಿದಲ್ಲಿ ತನ್ನ ಕ್ಷಮತೆ ತೋರಿಸಿ ತಂಡಕ್ಕೆ, ಚೊಚ್ಚಲ ಟ್ರೋಫಿ ಮುಡಿಗೇರಿಸಲು ನೆರವಾಗಬಲ್ಲರು.
ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ?
ಆರ್‌ಸಿಬಿ ಪರ ಆರಂಭಿಕರಾಗಿ ಫಾಫ್ ಡುಪ್ಲೇಸಿಸ್ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ರಜತ್ ಪಟಿದಾರ್ ಆಡುವ ಸಾಧ್ಯತೆ ಹೆಚ್ಚಿದೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಗ್ಲೇನ್ ಮ್ಯಾಕ್ಸ್‌ವೆಲ್ ಆಡುವುದು ಬಹುತೇಕ ಖಚಿತ. ಹೀಗಾಗಿ ಮಹಿಪಾಲ್ ಲೊಮ್ರೊರ್ ಬ್ಯಾಟಿಂಗ್ ಮಾಡಲು ಬಂದರೆ ನಾಲ್ಕನೇ ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಈ ಮೂಲಕ ಮಿಡ್ಲ್ ಆರ್ಡರ್‌ನಲ್ಲಿ ತಂಡಕ್ಕೆ ಆಧಾರಗುವ ಭರವಸೆ ಮೂಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications