IPL 2024 Qualifier 1: ಅಗ್ರಸ್ಥಾನಿಯಾಗಿದ್ದರೂ SRH ವಿರುದ್ಧ ಗೆಲುವಿಗೆ KKR ತಂಡಕ್ಕೆ ಈ ಸಮಸ್ಯೆಗಳೇ ಕಂಟಕ!
ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಮಂಗಳವಾರ, ಮೇ 21ರಂದು ಕ್ವಾಲಿಫೈಯರ್ 1ರಲ್ಲಿ ಎರಡನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವನ್ನು ಎದುರಿಸಲಿದೆ.
ಆದರೆ, ಮೂರನೇ ಐಪಿಎಲ್ ಪ್ರಶಸ್ತಿಯ ಹುಡುಕಾಟದಲ್ಲಿ ಕೆಕೆಆರ್ ಕೆಲವು ಸಮಸ್ಯೆಗಳನ್ನು ಎದುರಿಸಬಹುದು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅನುಪಸ್ಥಿತಿಯು ಕೆಕೆಆರ್ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. ಆಡಿದ 12 ಪಂದ್ಯಗಳಲ್ಲಿ 435 ರನ್ ಗಳಿಸುವ ಮೂಲಕ ಕೆಕೆಆರ್ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಸುನಿಲ್ ನರೈನ್ ಜೊತೆಗೆ ಅಗ್ರ ಕ್ರಮಾಂಕದಲ್ಲಿ ಸ್ಫೋಟಕ ಹಾಗೂ ಅದ್ಭುತ ಆರಂಭ ಒದಗಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ನಾಲ್ಕು ಪಂದ್ಯಗಳ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಭಾಗವಹಿಸಲು ಫಿಲ್ ಸಾಲ್ಟ್ ತಮ್ಮ ತವರು ಇಂಗ್ಲೆಂಡ್‌ಗೆ ಮರಳಿದರು.

"ಖಂಡಿತವಾಗಿ ಒಂದೆರಡು ಸಮಸ್ಯೆ ಇರಬಹುದು. ಈ ಆವೃತ್ತಿಯಲ್ಲಿ ಫಿಲ್ ಸಾಲ್ಟ್ ಕೆಕೆಆರ್ ತಂಡದ ಯಶಸ್ಸಿಗೆ ಹೆಚ್ಚಿನ ಕೊಡುಗೆ ನೀಡಿದರು. ಸುನಿಲ್ ನರೈನ್ ಜೊತೆಗೆ ಅವರು ನೀಡುತ್ತಿದ್ದ ಆರಂಭಗಳು ಎದುರಾಳಿ ತಂಡವನ್ನು ಹಠಾತ್ತನೆ ಹಿಂದಿಕ್ಕಿದವು ಮತ್ತು ಅದರಿಂದ ಹೊರಬರಲು ಅವರು ತುಂಬಾ ಕಷ್ಟಪಡುತ್ತಿದ್ದರು. ಆದರೆ, ಇದೀಗ ಫಿಲ್ ಸಾಲ್ಟ್ ಕೆಕೆಆರ್ ತಂಡದಲ್ಲಿ ಇಲ್ಲ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
2ನೇ ಸಮಸ್ಯೆ ಶ್ರೇಯಸ್ ಅಯ್ಯರ್ ಸಾಕಷ್ಟು ರನ್ ಗಳಿಸಿಲ್ಲ: ಆಕಾಶ್ ಚೋಪ್ರಾ
ಫಿಲ್ ಸಾಲ್ಟ್ ಬದಲಿಗೆ ಅಫ್ಘಾನಿಸ್ತಾನದ ವಿಕೆಟ್‌ಕೀಪರ್-ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಕೆಕೆಆರ್ ಆಡುವ 11ರ ಬಳಗ ಸೇರಿಕೊಳ್ಳಲಿದ್ದಾರೆ.
22 ವರ್ಷದ ರಹಮಾನುಲ್ಲಾ ಗುರ್ಬಾಜ್ ಈ ಹಿಂದೆ ಗುಜರಾತ್ ಟೈಟನ್ಸ್ ಭಾಗವಾಗಿದ್ದರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಆದರೆ ಅಗ್ರ ಕ್ರಮಾಂಕದಲ್ಲಿ ಫಿಲ್ ಸಾಲ್ಟ್‌ನ ಸ್ಫೋಟಕ ಆರಂಭವನ್ನು ರಹಮಾನುಲ್ಲಾ ಗುರ್ಬಾಜ್ ಪುನರಾವರ್ತಿಸಬಹುದೇ ಎಂದು ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.

"ರಹಮಾನುಲ್ಲಾ ಗುರ್ಬಾಜ್ ಅವರು ಫಿಲ್ ಸಾಲ್ಟ್ ಬದಲಿಗೆ ಸ್ಥಾನ ಪಡೆಯದ್ದಾರೆ. ಕೆಕೆಆರ್ ಪರವಾಗಿ ಇರುವ ವಿಷಯವೆಂದರೆ ಅವರು ಕಳೆದ ವರ್ಷ ಗುಜರಾತ್ ಟೈಟನ್ಸ್‌ನ ಭಾಗವಾಗಿದ್ದರು. ಆದ್ದರಿಂದ ಈ ಹಿಂದೆ ಈ ಮೈದಾನದಲ್ಲಿ ಆಡಿದ್ದಾರೆ. ಆದರೆ ಅವರು ಹೆಚ್ಚಿನ ಅವಕಾಶಗಳನ್ನು ಪಡೆಯಲಿಲ್ಲ," ಎಂದು ಆಕಾಶ್ ಚೋಪ್ರಾ ತಿಳಿಸಿದರು.
ಆಕಾಶ್ ಚೋಪ್ರಾ ಅವರ ಗಮನಸೆಳೆದ ಮತ್ತೊಂದು ಸಂಭಾವ್ಯ ಸಮಸ್ಯೆಯೆಂದರೆ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಕಳಪೆ ಫಾರ್ಮ್. ಬಲಗೈ ಬ್ಯಾಟರ್ ಈ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಿಂದ 31.88ರ ಸರಾಸರಿಯಲ್ಲಿ ಕೇವಲ 287 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
"ಕೆಕೆಆರ್‌ನ ಎರಡನೆಯ ಸಮಸ್ಯೆ ಎಂದರೆ ಶ್ರೇಯಸ್ ಅಯ್ಯರ್ ಈ ವರ್ಷ ಅಷ್ಟು ರನ್ ಗಳಿಸಿಲ್ಲ. ಅವರು ಸ್ವಲ್ಪ ಮುನ್ನಡೆಸುವ ಪಾತ್ರವನ್ನು ವಹಿಸಿದ್ದಾರೆ. ಆದರೆ ಅವರ ಉಳಿದ ಎಲ್ಲಾ ಆಟಗಾರರು ರಾಕೆಟ್ ಲಾಂಚರ್‌ಗಳಂತೆ ಬರುತ್ತಾರೆ. ಈ ಬಾರಿ ನಾಯಕನ ಪಾತ್ರವಿದೆ ಎಂದೂ ಅವರು ಹೇಳಿದ್ದಾರೆ. ನಾವು ನಿರೀಕ್ಷಿಸಿದ ರೀತಿಯ ಸೀಸನ್ ಆಗಿಲ್ಲ," ಎಂದು ಆಕಾಶ್ ಚೋಪ್ರಾ ಹೇಳಿದರು.
ರಿಂಕು ಸಿಂಗ್ (168 ರನ್) ಅವರ ರನ್‌ಗಳ ಕೊರತೆ ಮತ್ತು 11.36ರ ಎಕಾನಮಿ ದರದಲ್ಲಿ ರನ್ ಸೋರಿಕೆ ಮಾಡಿ ಕೇವಲ 12 ವಿಕೆಟ್‌ಗಳನ್ನು ಪಡೆದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರ ಅಸ್ಥಿರ ಪ್ರದರ್ಶನಗಳ ಬಗ್ಗೆ ಆಕಾಶ್ ಚೋಪ್ರಾ ಕಳವಳ ಎತ್ತಿ ತೋರಿಸಿದರು.
"ಆದಾಗ್ಯೂ, ಅದರ ಅದೆಲ್ಲದರ ಹೊರತಾಗಿಯೂ, ಕೆಕೆಆರ್ ತಂಡವು ಅಗ್ರಸ್ಥಾನದವರೆಗೆ ತಲುಪಿದೆ. ಮೂರನೇ ಸಮಸ್ಯೆಯೆಂದರೆ ರಿಂಕು ಸಿಂಗ್ ಹೆಚ್ಚು ರನ್ ಗಳಿಸಿಲ್ಲ ಅಥವಾ ಹೆಚ್ಚಿನ ಅವಕಾಶಗಳನ್ನು ಪಡೆದಿಲ್ಲ. ಉಳಿದಂತೆ ಮಿಚೆಲ್ ಸ್ಟಾರ್ಕ್ ಅವರ ಫಾರ್ಮ್ 50-50 ಆಗಿದೆ," ಎಂದು ಆಕಾಶ್ ಚೋಪ್ರಾ ಮುಕ್ತಾಯಗೊಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications