IPL 2024: ವಿಶೇಷ ದಾಖಲೆ ಬರೆದ ಸ್ಯಾಮ್ಸನ್; ಸ್ಟಾರ್ ಬ್ಯಾಟರ್‌ಗಳು ಮಾಡದ ಸಾಧನೆ ಮಾಡಿರುವ ಸಂಜಯ
ಟೀಮ್ ಇಂಡಿಯಾದ ಭರವಸೆಯ ಆಟಗಾರ ಸಂಜು ಸ್ಯಾಮ್ಸನ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯಾವಗಲೂ ಬೇರೆಯದ್ದೇ ಖದರ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಐಪಿಎಲ್‌ನಲ್ಲಿ ಅಬ್ಬರದ ಪ್ರದರ್ಶನ ನೀಡುವ ಮೂಲಕವೇ ಬ್ಲ್ಯೂ ಜೆರ್ಸಿ ತೊಡುವ ಅವಕಾಶ ಪಡೆದರು. ಆದರೆ ಅವರಿಗೆ ಅಷ್ಟಾಗಿ ಅವಕಾಶಗಳು ಸಿಗುತ್ತಿಲ್ಲ ಎಂಬ ಕೂಗ ಸಹ ಕೇಳಿ ಬರುತ್ತಿದೆ.
ಜೈಪುರ್‌ದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಲಖ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಕಾದಾಟದಲ್ಲಿ ಸಂಜು ಅದ್ಭುತ ಬ್ಯಾಟಿಂಗ್ ನಡೆಸಿದರು. ರಾಜಸ್ಥಾನ ನಾಯಕ ತಂಡಕ್ಕೆ ಅಗತ್ಯ ಇದ್ದಾಗ ಬ್ಯಾಟ್ ಮಾಡಿ ಗಮನ ಸೆಳೆದರು. ಇವರು ಲಖ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್‌ಗಳನ್ನು ಕಾಡಿದರು. ಅಲ್ಲದೆ ಐಪಿಎಲ್ ಮೊದಲ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ತಾನು ಈ ಬಾರಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುವುದಾಗಿ ಸೂಚನೆ ನೀಡಿದ್ದಾರೆ.

ಪಂದ್ಯ ರಾಜಸ್ಥಾನ ರಾಯಲ್ಸ್ 5 ನೇ ಓವರ್‌ನಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ರನ್ ರೇಟ್ ಸ್ಥಿರವಾಗಿತ್ತು. ಇಲ್ಲಿಂದ ಅದೇ ವೇಗದಲ್ಲಿ ತಂಡದ ಇನಿಂಗ್ಸ್ ಮತ್ತು ರನ್ ಗಳಿಸುವ ದೊಡ್ಡ ಜವಾಬ್ದಾರಿ ಸಂಜು ಸ್ಯಾಮ್ಸನ್ ತಮ್ಮ ಮೇಲೆ ಹೊತ್ತುಕೊಂಡರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ಸಂಜು ಅರ್ಧಶತಕ ಗಳಿಸಿದರು. ಇದರೊಂದಿಗೆ ಸಂಜು ಸ್ಯಾಮ್ಸನ್ ಹೆಸರಲ್ಲಿ ದೊಡ್ಡ ದಾಖಲೆ ದಾಖಲಾಗಿದೆ.
ಸಂಜು ಬಾರಿದ ದಾಖಲೆ ಏನು?
ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ ತಂಡದ ನಾಯಕತ್ವದ ಇನ್ನಿಂಗ್ಸ್ ಆಡಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಸಂಜು ಸ್ಯಾಮ್ಸನ್ 50ಕ್ಕೂ ಹೆಚ್ಚು ರನ್ ಗಳಿಸಿದ ತಕ್ಷಣ, ಅವರು ದೊಡ್ಡ ಸಾಧನೆಗೆ ತಮ್ಮ ಹೆಸರನ್ನು ನಮೂದಿಸಿದರು. ಸಂಜು ಸ್ಯಾಮ್ಸನ್ ಐಪಿಎಲ್‌ನ ಕಳೆದ ಐದು ಆವೃತ್ತಿಗಳ ಮೊದಲ ಪಂದ್ಯದಲ್ಲಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್‌ನ ಮೊದಲ ಪಂದ್ಯ ಇದಾಗಿದ್ದು, ಸಂಜು ಮೊದಲ ಪಂದ್ಯದಲ್ಲೇ 82 ರನ್ ಬಾರಿಸಿದರು. ಇವರ ಅಮೋಘ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ, 6 ಸಿಕ್ಸರ್ ಸೇರಿವೆ.

ಇದಕ್ಕೂ ಮೊದಲು ಸಂಜು ಸ್ಯಾಮ್ಸನ್ 2020ರಲ್ಲಿ ಸಿಎಸ್‌ಕೆ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ 74 ರನ್, 2021ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 119 ರನ್, 2022ರಲ್ಲಿ ಎಸ್‌ಆರ್‌ಎಚ್ ವಿರುದ್ಧ 55 ರನ್ ಸಿಡಿಸಿದರು. ಇನ್ನು 2023ರಲ್ಲಿ ಎಸ್‌ಆರ್‌ಎಚ್ ವಿರುದ್ಧವೇ ಅಜೇಯ 50 ರನ್ ಸಿಡಿಸಿದ್ದರು. ಇನ್ನು ಭಾನುವಾರ ನಡೆದ ಪಂದ್ಯದಲ್ಲಿ ಸಂಜು 82 ರನ್ ಸಿಡಿಸಿದ್ದಾರೆ.
ನಾಯಕರಾಗಿ ಸಂಜು ದಾಖಲೆ
ಸಂಜು ಸ್ಯಾಮ್ಸನ್ 2021 ರಲ್ಲಿ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವದ ಪಟ್ಟವನ್ನು ಅಲಂಕರಿಸಿದರು. ಅಂದಿನಿಂದ ಅವರ ನಾಯಕತ್ವದಲ್ಲಿ ತಂಡ ಅದ್ಭುತ ಪ್ರದರ್ಶನ ನೀಡಿದೆ. ಸಂಜು ನಾಯಕತ್ವದಲ್ಲಿ ತಂಡ ಒಟ್ಟು 45 ಪಂದ್ಯಗಳನ್ನು ಆಡಿದ್ದು, 22 ಗೆಲುವು ಮತ್ತು 23 ಸೋಲು ಕಂಡಿವೆ. 2008 ರಿಂದ ರಾಜಸ್ಥಾನ್ ರಾಯಲ್ಸ್ ಒಮ್ಮೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದು ಸಾಧನೆ ಮಾಡಿತ್ತು. 2022ರಲ್ಲಿ ಸಂಜು ಮುಂದಾಳತ್ವದಲ್ಲಿ ರಾಜಸ್ಥಾನ ಫೈನಲ್‌ಗೆ ಅರ್ಹತೆ ಪಡೆದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications