Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಬಾಂಗ್ಲಾದಲ್ಲಿ ಸ್ಫೋಟಕ ಶತಕ ಸಿಡಿಸಿದ ವಿಲ್ ಜ್ಯಾಕ್ಸ್; RCB ಫ್ಯಾನ್ಸ್ ದಿಲ್ ಖುಷ್!

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್‌ಗಳು ಜಗತ್ತಿನಾದ್ಯಂತದ ಟಿ20 ಲೀಗ್‌ಗಳಲ್ಲಿ ಅಬ್ಬರಿಸುತ್ತಿದ್ದಾರೆ.

ತಮ್ಮ ಚೊಚ್ಚಲ ಪ್ರಶಸ್ತಿ ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಗೆ ತಮ್ಮ ಆಟಗಾರರು ಸಿಹಿ ಸುದ್ದಿ ನೀಡುತ್ತಿದ್ದಾರೆ. ಇತ್ತೀಚಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ್ದರೆ, ಇದೀಗ ವಿಲ್ ಜ್ಯಾಕ್ಸ್ ಮತ್ತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಸದ್ಯ ನಡೆಯುತ್ತಿರುವ 2024ರ ಬಿಪಿಎಲ್ ಋತುವಿನ ಪಂದ್ಯದ ಸಂಖ್ಯೆ 29ರಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್ ಚಟ್ಟೋಗ್ರಾಮ್ ಚಾಲೆಂಜರ್ಸ್ ವಿರುದ್ಧ ಕೇವಲ 53 ಎಸೆತಗಳಲ್ಲಿ ಅಜೇಯ 108 ರನ್ ಗಳಿಸಿದರು.

IPL 2024: RCB Batter Will Jacks Hits Unbeaten 108 Runs off 53 Balls in BPL 2024

25 ವರ್ಷದ ಇಂಗ್ಲೆಂಡ್ ಬ್ಯಾಟರ್ ತಮ್ಮ ಶತಕದ ಆಟದಲ್ಲಿ 10 ಸಿಕ್ಸರ್‌ಗಳನ್ನು ಸಿಡಿಸಿದರು, ವಿಕ್ಟೋರಿಯನ್ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಶೋಹಿದುಲ್ ಇಸ್ಲಾಂ ಅವರ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರ್ಣಗೊಳಿಸಿದರು.

ಚಟ್ಟೋಗ್ರಾಮ್‌ನಲ್ಲಿ ವಿಲ್ ಜ್ಯಾಕ್ಸ್‌ನ 53 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ತಮ್ಮ ಎರಡನೇ ಟಿ20 ಶತಕವನ್ನು ಗಳಿಸಿದಂತಾಯಿತು. ಮುಂದಿನ ತಿಂಗಳು ತನ್ನ ಮೊದಲ ಐಪಿಎಲ್ ಪಂದ್ಯಕ್ಕಾಗಿ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಸ್ಪಷ್ಟ ಸಂದೇಶ ನೀಡಿದ್ದಾನೆ. ಅಲ್ಲದೆ ತನ್ನ ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಗಳಿಸಿದನು.

2024ರ ಬಿಪಿಎಲ್‌ನಲ್ಲಿ ಸಿಕ್ಸರ್ ಮೂಲಕ ಶತಕ ಪೂರೈಸಿದ ವಿಲ್ ಜ್ಯಾಕ್ಸ್

ವಿಲ್ ಜ್ಯಾಕ್ಸ್ ಮತ್ತು ಅವರ ಆರಂಭಿಕ ಜೊತೆಗಾರ ಲಿಟ್ಟನ್ ದಾಸ್ ಅವರು ಮೊದಲು ಬ್ಯಾಟಿಂಗ್‌ಗೆ ಒಳಗಾದ ನಂತರ, ಕೊಮಿಲ್ಲಾ ವಿಕ್ಟೋರಿಯನ್ಸ್ ಇನ್ನಿಂಗ್ಸ್‌ನ ಮೊದಲ ಎಂಟು ಓವರ್‌ಗಳಲ್ಲಿ 86 ರನ್‌ಗಳ ವೇಗದ ಜೊತೆಯಾಟ ನಿರ್ಮಿಸಿದರು.

IPL 2024: RCB Batter Will Jacks Hits Unbeaten 108 Runs off 53 Balls in BPL 2024

ಲಿಟ್ಟನ್ ದಾಸ್ 31 ಎಸೆತಗಳಲ್ಲಿ 60 ರನ್ ಗಳಿಸಿ ಔಟಾದ ಬಳಿಕ, ರನ್ ಹೆಚ್ಚಿಸುವ ಜವಾಬ್ದಾರಿಯು ವಿಲ್ ಜಾಕ್ಸ್ ಹೆಗಲ ಮೇಲೆ ಬಿದ್ದಿತು. ಬಲಗೈ ಬ್ಯಾಟರ್ ಅಂತಿಮವಾಗಿ ಚಟ್ಟೋಗ್ರಾಮ್ ಚಾಲೆಂಜರ್ಸ್ ಬೌಲಿಂಗ್ ದಾಳಿಯನ್ನು ಒಂದು ಅದ್ಭುತ ಶತಕದೊಂದಿಗೆ ಮಣ್ಣುಮುಕ್ಕಿಸಿದರು.

ವಿಲ್ ಜ್ಯಾಕ್ಸ್ ಅಂತಿಮವಾಗಿ ತಮ್ಮ ಇನ್ನಿಂಗ್ಸ್ ಅನ್ನು 53 ಎಸೆತಗಳಲ್ಲಿ ಅಜೇಯ 108 ರನ್‌ಗಳೊಂದಿಗೆ ಮುಗಿಸಿದರು. ಈ ಮೂಲಕ ಕೊಮಿಲ್ಲಾ ವಿಕ್ಟೋರಿಯನ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 239 ರನ್‌ಗಳನ್ನು ತಲುಪಿದರು.

ಈ ಬೃಹತ್ ಮೊತ್ತವು ಕೊಮಿಲ್ಲಾ ವಿಕ್ಟೋರಿಯನ್ಸ್ ತಂಡಕ್ಕೆ ಪಂದ್ಯ ವಿಜೇತವಾಗಿ ಹೊರಹೊಮ್ಮಿತು. ಚಟ್ಟೋಗ್ರಾಮ್ ಚಾಲೆಂಜರ್ಸ್ ಬೃಹತ್ ಗುರಿ ರನ್-ಚೇಸಿಂಗ್‌ನಲ್ಲಿ ಹಿಂದೆ ಬಿದ್ದು 73 ರನ್‌ಗಳಿಂದ ಸೋಲು ಅನುಭವಿಸಿತು.

ಮುಂಬರುವ 2024ರ ಐಪಿಎಲ್ ಋತುವಿಗಾಗಿ 2023ರ ಡಿಸೆಂಬರ್‌ನಲ್ಲಿ ನಡೆದ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ವಿಲ್ ಜ್ಯಾಕ್ಸ್ ಅವರನ್ನು ಉಳಿಸಿಕೊಂಡಿತು.

ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 2024ರ SA20 ಲೀಗ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಪರ ಬ್ಯಾಟ್‌ನೊಂದಿಗೆ ಸಾಧಾರಣವಾಗಿದ್ದರೂ, 2024ರ ಬಿಪಿಎಲ್‌ನಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ತಂಡಕ್ಕಾಗಿ ಅದ್ಭುತ ಶತಕದೊಂದಿಗೆ ತಮ್ಮ 2024ರ ಐಪಿಎಲ್ ರಿಟೇನ್ ಅನ್ನು ಸಮರ್ಥಿಸಿಕೊಂಡರು.

ಐಪಿಎಲ್ 2023ರಲ್ಲಿ ಗಾಯದ ಕಾರಣದಿಂದಾಗಿ ಪಂದ್ಯಾವಳಿಯಿಂದ ಹಿಂದೆ ಸರಿದ ನಂತರ, ವಿಲ್ ಜ್ಯಾಕ್ಸ್ ಈ ವರ್ಷ ಮೊದಲ ಬಾರಿಗೆ ಆರ್‌ಸಿಬಿ ಶಿಬಿರವನ್ನು ಸೇರುವ ನಿರೀಕ್ಷೆಯಿದೆ.

Story first published: Wednesday, February 14, 2024, 10:51 [IST]
Other articles published on Feb 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+