ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಒಂದು ಬಾರಿ ಕಪ್‌ಗೆಲ್ಲದೇ ಇದ್ದರೂ ದಾಖಲೆಯ ವಿಚಾರದಲ್ಲಿ ಹಲವು ಮೈಲುಗಲ್ಲನ್ನು ಸ್ಥಾಪಿಸಿದೆ. ಈ ಬಾರಿಯ ಐಪಿಎಲ್‌ನ ಮೂರನೇ ಪಂದ್ಯದಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿದರೂ, ಕೆಕೆಆರ್ ವಿರುದ್ಧ ಸೋಲು ಕಂಡಿತು. ಈ ಪಂದ್ಯದಲ್ಲಿ ಆರ್‌ಸಿಬಿ ದಾಖಲೆಯನ್ನು ನಿರ್ಮಿಸಿದೆ.
ಐಪಿಎಲ್ 2024 ರ 10 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ RCB ತಂಡ 7 ವಿಕೆಟ್‌ಗಳ ಸೋಲನ್ನು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ RCB ತಂಡ 182 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ KKR 16.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಅಗತ್ಯ ರನ್ ಕಲೆ ಹಾಕಿ ಬೀಗಿತು. ಈ ಮೂಲಕ ಆರ್‌ಸಿಬಿ ಟೂರ್ನಿಯಲ್ಲಿ ಮತ್ತೊಂದು ಸೋಲು ಕಂಡಿತು.

ಆರ್‌ಸಿಬಿ ಪರ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿದರು. ಆರ್‌ಸಿಬಿ ಪರ ಬ್ಯಾಟ್ಸ್‌ಮನ್‌ಗಳು, ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಒಟ್ಟು 11 ಸಿಕ್ಸರ್‌ಗಳನ್ನು ಬಾರಿಸಿದ್ದರು. ತಂಡದ ಪರ ವಿರಾಟ್ ಕೊಹ್ಲಿ ನಾಲ್ಕು ಸಿಕ್ಸರ್, ಕ್ಯಾಮರೂನ್ ಗ್ರೀನ್ ಎರಡು ಸಿಕ್ಸರ್, ದಿನೇಶ್ ಕಾರ್ತಿಕ್ 3 ಸಿಕ್ಸರ್, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ತಲಾ ಒಂದು ಸಿಕ್ಸರ್ ಬಾರಿಸಿದರು. ಇದರೊಂದಿಗೆ ಆರ್‌ಸಿಬಿ ತಂಡ ಐಪಿಎಲ್ ಇತಿಹಾಸದಲ್ಲಿ 1500 ಸಿಕ್ಸರ್‌ಗಳನ್ನು ಪೂರೈಸಿದ ದಾಖಲೆಗೆ ತನ್ನ ಹೆಸರನ್ನು ನಮೂದಿಸಿಕೊಂಡಿತು.
ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ. ಲೀಗ್‌ನಲ್ಲಿ 1500ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನದಲ್ಲಿದೆ. ಮುಂಬೈ ಓಟ್ಟು 1575 ಸಿಕ್ಸರ್‌ಗಳನ್ನು ಬಾರಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನಲ್ಲಿ 1421 ಸಿಕ್ಸರ್‌ಗಳನ್ನು ಬಾರಿಸಿದ್ದು, ಮೂರನೇ ಸ್ಥಾನದಲ್ಲಿದೆ.
ಉಳಿದಂತೆ 17ನೇ ಆವೃತ್ತಿ ಆಡುತ್ತಿರುವ ಪಂಜಾಬ್ ಕಿಂಗ್ಸ್ 1405 ಸಿಕ್ಸರ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ 1378 ಸಿಕ್ಸರ್ ಸಿಡಿಸಿವೆ.

RCB ವಿರುದ್ಧದ KKR ನಾಯಕ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಮಾಡಿದರು. ವಿರಾಟ್ ಕೊಹ್ಲಿ RCB ಏಕಾಂಗಿ ಹೋರಾಟವನ್ನು ನಡೆಸಿದರು. ಇವರಿಗೆ ಯಾರೊಬ್ಬರೋ ಸಾಥ್ ನೀಡಲಿಲ್ಲ. ಅವರು 83 ರನ್ ಗಳಿಸಿದರು. ಇದಲ್ಲದೇ ಕ್ಯಾಮರೂನ್ ಗ್ರೀನ್ 33 ರನ್ ಗಳಿಸಿದರು. ಡೆತ್ ಓವರ್‌ಗಳಲ್ಲಿ ದಿನೇಶ್ ಕಾರ್ತಿಕ್ 8 ಎಸೆತಗಳಲ್ಲಿ ಮೂರು ಸಿಕ್ಸರ್ ಒಳಗೊಂಡ 20 ರನ್ ಗಳಿಸಿದರು.
ಈ ಆವೃತ್ತಿಯಲ್ಲಿ ಇನ್ನು 11 ಪಂದ್ಯಗಳನ್ನು ಆರ್‌ಸಿಬಿ ಆಡಬೇಕಿದ್ದು, ಅಂಗಳದಲ್ಲಿ ಯಾವೆಲ್ಲಾ ದಾಖಲೆಗಳನ್ನು ಬರೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆರ್‌ಸಿಬಿ ಏಪ್ರಿಲ್ 2 ರಂದು ಲಖ್ನೋ ಸೂಪರ್ ಜೈಂಟ್ಸ್ ತಂಡದ ಸವಾಲು ಎದುರಿಸಲಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಗೆಲುವಿನ ಕನಸು ಕಾಣುತ್ತಿದ್ದಾರೆ.