For Quick Alerts
ALLOW NOTIFICATIONS  
For Daily Alerts
 

ವಿರಾಟ್‌ ಕೊಹ್ಲಿಗೆ ಹತ್ತಿರವಾದವರನ್ನು ಕೈಬಿಡುತ್ತಲೇ ಇದೆ ಆರ್‌ಸಿಬಿ - ಏಕಾಂಗಿಯಾಗುತ್ತಲೇ ಇದ್ದಾರೆ ಕಿಂಗ್

ವಿರಾಟ್‌ ಕೊಹ್ಲಿ.. ಈಗ ಈ ಪ್ಲೇಯರ್‌ ಹಿಂದೆ ಅದೆಷ್ಟೋ ಬ್ರ್ಯಾಂಡ್‌ಗಳು ಮುಗಿ ಬೀಳುತ್ತವೆ. ಈ ಪ್ಲೇಯರ್‌ ಒಮ್ಮೆ ತನ್ನ ಪ್ರೋಡಕ್ಟ್‌ ಕೈಯಲ್ಲಿ ಹಿಡಿದರೆ ಸಾಕಪ್ಪ ಎಂದು ಅಂದುಕೊಳ್ಳುತ್ತವೆ. ಇಂದು ವಿರಾಟ್‌ ಕೊಹ್ಲಿ ಈ ಯಶಸ್ಸಿನ ಶಿಖರ ಏರಲು ಅವರ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯೆ ಕಾರಣ..

ನೀವು ವಿರಾಟ್‌ ಕೊಹ್ಲಿ ಅವರ ಸಂದರ್ಶನವನ್ನು ನೋಡಿರಬಹುದು ಅಥವಾ ಕೇಳಿರಬಹುದು. ಅವರಿಗೆ ಬಾಲ್ಯದ ನೆನಪನ್ನು ಕೇಳಿದಾಗ ತಡಮಾಡದೆ ಹೇಳುವ ಒಂದು ಹೆಸರು ಇಶಾಂತ್ ಶರ್ಮಾ. ಇವರಿಬ್ಬರೂ ದೆಹಲಿ ಮೂಲದವರು. ಕ್ಲಬ್‌ ಕ್ರಿಕೆಟ್‌ ಆಡಲು ಒಂದೇ ಬೈಕ್‌ನಲ್ಲಿ ಬರುತ್ತಿದ್ದೆವು ಎಂದು ವಿರಾಟ್‌ ಹೇಳಿಕೊಳ್ಳುತ್ತಾರೆ.

RCB keeps dropping those close to Virat Kohli

ವಿರಾಟ್‌ ಇಂದು ಯಶಸ್ಸಿನ ಉತ್ತಂಗದಲ್ಲಿರಬಹುದು ಆದರೆ, ಹಿಂದಿನ ಘಟನೆಗಳನ್ನು ಎಂದೂ ಮರೆತಿಲ್ಲ. ಮನಷ್ಯ ಸುಲಭವಾಗಿ ಕಷ್ಟದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಅದರಂತೆ ವಿರಾಟ್‌ ಬೆಳೆದು ಮೀಸೆ ಚಿಗುರುವ ಮುನ್ನವೇ ಆರ್‌ಸಿಬಿ ತಂಡವನ್ನು ಸೇರಿದರು.

ಆರ್‌ಸಿಬಿ ಸೇರುವಾಗಲು ವಿರಾಟ್‌ ಕೊಹ್ಲಿ ಒಬ್ಬಂಟಿಯಾಗಿ ಬಂದು ತಂಡ ಸೇರಿರಲಿಲ್ಲ. ಇವರೊಂದಿಗೆ 2008 ಅಂಡರ್ 19 ವಿಶ್ವಕಪ್‌ನಲ್ಲಿ ಆಡಿದ್ದ ಮನೀಶ್ ಪಾಂಡ್ಯ ಸಹ ಜೊತೆಗಿದ್ದರು. ಇಬ್ಬರೂ ಹೆಗಲ ಮೇಲೆ ಕೈ ಹಾಕಿಕೊಂಡೆ ತಂಡಕ್ಕೆ ಎಂಟ್ರಿ ನೀಡಿದರು. ವಿರಾಟ್‌ ಕ್ರಿಕೆಟ್ ಅಂಗಳದಲ್ಲಿ ವಿರಾಟಪರ್ವತದಂತೆ ಬೆಳೆದು ನಿಂತರು.

ದಿನಕಳೆದಂತೆ ಆಟ ಪಕ್ವ ಆಗುತ್ತಾ ಸಾಗಿತು. ಆಟದ ಜೊತೆಗೆ ಹೊಸ ಗೆಳೆತನ ವಿರಾಟ್‌ ಅವರನ್ನು ಹೆಚ್ಚಾಗಿ ಆಕರ್ಷಿಸಿತು. ವಿರಾಟ್‌ ಟೀಮ್ ಇಂಡಿಯಾಕ್ಕೆ ಎಂಟ್ರಿ ನೀಡಿದಾಗ ಸೂಪರ್‌ ಸ್ಟಾರ್ ರೀತಿ ಮೆರೆದ ಯುವರಾಜ್ ಸಿಂಗ್‌ಗೂ ಹಾಗೂ ವಿರಾಟ್‌ಗೂ ಉತ್ತಮ ಸ್ನೇಹ. ಯುವಿಯಂತೆ ತಾನೂ ಏಕದಿನ ವಿಶ್ವಕಪ್‌ ತಂಡಕ್ಕೆ ಗೆಲ್ಲಿಸಿ ಕೊಡಬೇಕು ಎಂದು ಧೇಯವನ್ನೇ ವಿರಾಟ್‌ ಹೊಂದಿದ್ದರು.

RCB keeps dropping those close to Virat Kohli

ಮ್ಯಾನೇಜ್ಮೆಂಟ್‌ ಜೊತೆ ಪಟ್ಟು ಹಿಡಿದು ಆರ್‌ಸಿಬಿಗೆ ಯುವಿಯನ್ನು ಕರೆದುಕೊಂಡು ಬಂದರು. ಈ ತಂಡದಲ್ಲಿ ಯುವಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಪರಿಣಾಮ ಅವರನ್ನು ತಂಡದಿಂದ ಕೈಬಿಡಲಾಯಿತು. ಆಗಲೂ ವಿರಾಟ್‌, ಸುಮ್ಮನೆ ಕೈ ಕೈ ಹಿಚಿಕೊಳ್ಳುತ್ತಾ ತಂಡದಲ್ಲೇ ಉಳಿದು ಬಿಟ್ಟರು.

ಇನ್ನು ಒಬ್ಬ ಸ್ನೇಹಿತ ಹೋದ ನೋವು ಮಾಸುವ ಮುನ್ನವೇ ವಿಂಡೀಸ್‌ ಪ್ಲೇಯರ್‌ ಕ್ರಿಸ್‌ ಗೇಲ್‌ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ವಿರಾಟ್‌ ಸಿಂಪ್ಲಿ ಸಿಟಿಗೆ ಮಾರುಹೋಗಿದ್ದರು. ಮೈದಾನದಲ್ಲಿ ಈ ಇಬ್ಬರ ಜೊತೆ ಸಾಕಷ್ಟು ಜೊತೆಯಾಟಗಳನ್ನು ಆಡಿರುವ ವಿರಾಟ್‌ ಮೈದಾನದ ಹೊರಗೂ ಬೆಸ್ಟ್‌ ಫ್ರೆಂಡ್ಸ್‌. ತಮ್ಮ ನಾಯಕತ್ವದಲ್ಲೇ ಗೇಲ್‌, ಎಬಿಡಿಯನ್ನು ಫ್ರಿ ಹ್ಯಾಂಡ್‌ ಆಗಿ ಆಡಲು ಬಿಟ್ಟ ವಿರಾಟ್‌ ನಿಜಕ್ಕೂ ತಮ್ಮಲ್ಲಿರುವ ನಾಯಕತ್ವ ಗುಣ ಸಾಬೀತು ಪಡಿಸಿದರು.

ಸಮಯ ಕಳೆಯುತ್ತಾ ಸಾಗಿತು ಎಬಿಡಿ ನಿವೃತ್ತಿ ಪಡೆದರು. ಕ್ರಿಸ್ ಗೇಲ್‌ ಬೇರೆ ತಂಡದತ್ತ ಮುಖ ಮಾಡಿದರು. ಕಣ್ಣಂಚಲಿ ನೀರು ತುಂಬಿಕೊಂಡಿದ್ದವು. ಆದರೆ ಅದನ್ನು ಬೇರೆಯವರಿಗೆ ತೋರಿಸದೆ ನಗುತ್ತಲೆ ಇಬ್ಬರಿಗೂ ಬೀಳ್ಕೋಟ್ಟರು.

Why Virat Kohli Close one are dropped From RCB

ಇಷ್ಟು ಸಮಯಕ್ಕಾಗಲೇ ವಿರಾಟ್‌ಗೆ ಸ್ಟಾರ್‌ ಗಿರಿ ಬಂದು ಬಿಟ್ಟಿತು. ಆದರೆ ವಿರಾಟ್‌ಗೆ ಬೆಸ್ಟ್‌ ಪ್ಲೇಯರ್ಸ್‌ ಕಂಡ್ರೆ ಎಲ್ಲಿಲ್ಲದ ಪ್ರೀತಿ. ಕರ್ನಾಟಕದ ದೇವದತ್‌ ಪಡೀಕ್ಕಲ್‌, ಕೆಎಲ್ ರಾಹುಲ್ ಅವರಿಗೆ ಅವಕಾಶವನ್ನು ಕಲ್ಪಿಸಿಕೊಟ್ಟರು. ಅಲ್ಲದೆ ಅವರಲ್ಲಿನ ಪ್ರತಿಭೆಯನ್ನು ಹೊರ ತೆಗೆಯಲು ವೇದಿಕೆ ಸಿದ್ಧ ಪಡಿಸಿಕೊಟ್ಟರು. ಹಾರಲು ಕಲಿತ ಪಕ್ಷಿ ಒಂದೇ ಕಡೆ ನಿಲ್ಲಲು ಸಾಧ್ಯವೇ, ಆಹಾರವನ್ನು ಹುಡುಕಿ ಹಾರಿತು.

ಇದೇ ವೇಳೆಗೆ ತಂಡವನ್ನು ಸೇರಿದ ಯುಜುವೇಂದ್ರ ಚಹಾಲ್‌ ಹಾಗೂ ಹರ್ಷಲ್‌ ಪಟೇಲ್‌ ಜೊತೆ ವಿರಾಟ್‌ ಕೊಂಚ್ ರಿಲ್ಯಾಕ್ಸ್ ಆಗಿ ಇರುತ್ತಿದ್ದರು. ಇವರಿಬ್ಬರೂ ಪ್ರತಿಭಾಂತ ಕ್ರಿಕೆಟ್ ಆಟಗಾರರೇ. ಈ ಇಬ್ಬರೂ ಆಟಗಾರರು ಈಗ ಬೇರೆ ಬೇರೆ ತಂಡಗಳ ಪರ ಐಪಿಎಲ್‌ ಆಡುತ್ತಿದ್ದಾರೆ.

ಇಷ್ಟದ ಆಟಗಾರರು ಬೇರೆ ತಂಡಗಳಿಗೆ ಮುಖ ಮಾಡಿದರೂ ಸಹ ವಿರಾಟ್‌, ಆರ್‌ಸಿಬಿ ಜೊತೆ ಗುರುತಿಸಿಕೊಂಡಿದ್ದಾರೆ. ಮೈದಾನದಲ್ಲಿ ಈಗ ವಿರಾಟ್‌ ಏಕಾಂಗಿ ಎಂಬ ಭಾವನೆ ಅವರನ್ನು ಕಾಡದೇ ಇರದು. ಆದರೆ, ಈ ಸಮಸ್ಯೆಯನ್ನು ಸಹ ವಿರಾಟ್‌ ಬಹು ಬೇಗ ಕಮ್‌ ಬ್ಯಾಕ್‌ ಮಾಡ್ತಾರೆ ಏಕಂದರೆ ಅವರು ಒಬ್ಬ ಸ್ನೇಹ ಜೀವಿ..

Story first published: Thursday, December 21, 2023, 7:00 [IST]
Other articles published on Dec 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+