IPL 2024: ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಗೆ RCB ರಾಯಲ್ ಟ್ರೀಟ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಇಲ್ಲಿದೆ ಖುಷಿ ಸುದ್ದಿ.. ವಿಶ್ವದ ಶ್ರೀಮಂತ ಲೀಗ್ ವೈಭವದ ಆರಂಭಕ್ಕೂ ಮುನ್ನವೇ, ಆರ್‌ಸಿಬಿ ಭರ್ಜರಿ ತಯಾರಿ ನಡೆಸಿದೆ. ಈ ದಿಸೇಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಫ್ರಾಂಚೈಸಿ ಮಾಡುತ್ತಲೇ ಇದೆ. ಸೆಂಟ್ ಮಾರ್ಕ್ಸ್ ರೋಡ್‌ನಲ್ಲಿ ಆರ್‌ಸಿಬಿ ಬಾರ್ ಹಾಗೂ ಕೆಫೆ ಓಪನ್ ಆದ ಬೆನ್ನಲ್ಲೆ ಮತ್ತೊಂದು ಔಟ್ ಲೆಟ್ ಓಪನ್ ಮಾಡಿದೆ. ನಿಜಕ್ಕೂ ಈ ಪ್ಲೇಸ್ ಅಭಿಮಾನಿಗಳನ್ನು ಕೈ ಬೀಸಿ ಕರೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು RCB ಬಾರ್ & ಕೆಫೆ ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಹೊಸ ಔಟ್ಲೆಟ್ ಅನ್ನು ಪ್ರಾರಂಭಿಸುವ ಘೋಷಣೆಯನ್ನು ಮಾಡಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಪ್ರಯಾಣಿಸುವಾಗ ನಿಮ್ಮಲ್ಲಿ ಎಷ್ಟು ಮಂದಿ ಈ ಹೊಸ ಬಾರ್ ಮತ್ತು ಕೆಫೆಗೆ ಭೇಟಿ ನೀಡಬಹುದಾಗಿದೆ.

ಕೆಲವೇ ದಿನಗಳಲ್ಲಿ ಓಪನ್
ಫೆಬ್ರವರಿ 13 ರಂದು, ಬಾರ್ & ಕೆಫೆ ವಿಮಾನ ನಿಲ್ದಾಣದಲ್ಲಿ ಆರಂಭವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಔಟ್ ಲೆಟ್ ಅಭಿಮಾನಿಗಳನ್ನು ಕೈ ಬೀಸಿ ಕರೆಯಲಿದೆ. ಇನ್ನು ಆರ್‌ಸಿಬಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಂಡಕ್ಕೆ ಸಪೋರ್ಟ್ ಮಾಡಲು ಮತ್ತೊಂದು ವೇದಿಕೆ ಸಿಕ್ಕಂತೆ ಆಗಿದೆ.
ಈಗಾಗಲೇ ತಮ್ಮ ನೆಚ್ಚಿನ ತಂಡಕ್ಕೆ ಹುರಿದುಂಬಿಸಲು ಅಭಿಮಾನಿಗಳು ಸೆಂಟ್ ಮಾರ್ಕ್ಸ್ ರೋಡ್‌ಗೆ ಹೋಗುತ್ತಿದ್ದರು. ಈಗ ಮತ್ತೊಂದು ಸ್ಟಾಲ್ ಓಪನ್ ಆಗಿದೆ. ಈ ಹೊಸ ಔಟ್‌ಲೆಟ್‌ನಿಂದ ಉತ್ತಮ ಅನುಭವಗಳನ್ನು ನಿರೀಕ್ಷಿಸಬಹುದು. ಗ್ಯಾಸ್ಟ್ರೊನೊಮಿಕ್ ಅನುಭವಕ್ಕಾಗಿ ಅದ್ಭುತ ಮೆನುವಿನಿಂದ ಐಪಿಎಲ್ ತಂಡ ಮತ್ತುಅಭಿಮಾನಿಗಳಿಗಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಏನು ವಿಶೇಷತೆ
ಈ ಬಾರ್‌ನ ಗೋಡೆಯ ಮೇಲೆ ಆರ್‌ಸಿಬಿ ತಂಡದ ಖ್ಯಾತ ನಾಮ ಆಟಗಾರರ ಫೊಟೋಗಳನ್ನು ಕಾಣಬಹುದಾಗಿದೆ. ವಿರಾಟ್ ಕೊಹ್ಲಿಯಿಂದ ಹಿಡಿದು ಫಾಫ್ ಡು ಪ್ಲೆಸಿಸ್ ವರೆಗೆ ಸ್ಟಾರ್ ಆಟಗಾರರ ಚಿತ್ರಗಳು ಅಭಿಮಾನಿಗಳನ್ನು ಮಂತ್ರ ಮುಗ್ಧರನ್ನಾಗಿಸಿವೆ. ಇನ್ನು ಒಳಗಡೆ ಹೋದಂತೆ ಆರ್‌ಸಿಬಿ ಅಭಿಮಾನಿಗಳಿಗೆ ಹೋಸ ಥ್ರಿಲ್ ಸಿಗೋದಂತು ಗ್ಯಾರಂಟಿ. ಈ ಸ್ಟಾಲ್‌ನಲ್ಲಿ ಆರ್‌ಸಿಬಿ ಆಟಗಾರರಿಗೆ ಇಷ್ಟವಾದ ಖಾದ್ಯಗಳು ಇವೆ. ಈ ಖಾದ್ಯಗಳು ಅಭಿಮಾನಿಗಳ ಹಸಿವನ್ನು ತಣಿಸಬಲ್ಲವು.
ಏನು ಸಿಗುತ್ತದೆ
ಅಭಿಮಾನಿಗಳ ಆಹಾರ ರುಚಿಗೆ ತಕ್ಕಂತೆ ಖಾದ್ಯಗಳು ರೆಡಿಯಾಗುತ್ತಿವೆ. ಅಂದಹಾಗೆ ಬಜೆಟ್ ಫ್ರೆಂಡ್ಲಿ ರೆಸ್ಟೋರೆಂಟ್ ಎಂದು ಹೇಳಬಹುದು. ಸೆಂಟ್ ಮಾರ್ಕ್ಸ್ ರೋಡ್‌ನಲ್ಲಿರುವ ಆರ್‌ಸಿಬಿ ಬಾರ್ ಹಾಗೂ ಕೆಫೆಯ ಮೆನ್ಯೂನಲ್ಲಿರುವ ಖಾದ್ಯಗಳು ವಿಮಾನ ನಿಲ್ದಾಣದಲ್ಲಿ ಕಾಣಬಹುದು. ಈ ಖಾದ್ಯಗಳು ಕೈಗೆಟಕುವ ದರದಲ್ಲಿರುವುದು ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದೆ. ನೆಚ್ಚಿನ ಆಟಗಾರರ ಹೆಸರಿನಲ್ಲಿ ಹಲವು ಖಾದ್ಯಗಳು ಇದ್ದು, ಈ ಖಾದ್ಯಗಳು ಅಭಿಮಾನಿಗಳನ್ನು ಒಂದು ಕ್ಷಣ ಯೋಚಿಸುವಂತೆ ಮಾಡುವುದಂತು ಸುಳ್ಳಲ್ಲ. ವೆಜ್ ಹಾಗೂ ನಾನ್ ವೆಜ್ ಆಹಾರ ಈ ಬಾರ್ ಹಾಗೂ ಕೆಫೆಯಲ್ಲಿ ಲಭ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications