Virat Kohli: ಪಂಜಾಬ್ ಕಿಂಗ್ಸ್ ಬೌಲರ್‌ಗಳ ಪೋಷಕರನ್ನು ಭೇಟಿಯಾದ ಆರ್‌ಸಿಬಿ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ
ಗುರುವಾರ, ಮೇ 9ರಂದು ಧರ್ಮಶಾಲಾದ ಹೆಚ್‌ಪಿಸಿಎ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ರೋಚಕ ಪಂದ್ಯದ ನಂತರ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದರು.
ಪಂಜಾಬ್ ಕಿಂಗ್ಸ್ ತಂಡದ ಬೌಲರ್‌ಗಳಾದ ಅರ್ಶ್‌ದೀಪ್ ಸಿಂಗ್ ಮತ್ತು ಹರ್‌ಪ್ರೀತ್ ಬ್ರಾರ್ ಅವರ ಪೋಷಕರನ್ನು ಭೇಟಿಯಾದ ವಿರಾಟ್ ಕೊಹ್ಲಿ ಉಭಯ ಕುಶಲೋಪರಿ ನಡೆಸಿದರು.

ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಗೆಲ್ಲಲೇಬೇಕಾದ ನಿರ್ಣಾಯಕ ಪಂದ್ಯದಲ್ಲಿ ತಮ್ಮ ಪುತ್ರರನ್ನು ಬೆಂಬಲಿಸಲು ಬಂದಿದ್ದ ಇಬ್ಬರೂ ಪಂಜಾಬ್ ಕಿಂಗ್ಸ್ ಆಟಗಾರರ ಪೋಷಕರೊಂದಿಗೆ ವಿರಾಟ್ ಕೊಹ್ಲಿ ಆತ್ಮೀಯ ಸಂವಾದ ನಡೆಸಿದರು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಮೇತ 92 ರನ್ ಗಳಿಸಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ತಂಡವನ್ನು 60 ರನ್‌ಗಳ ಅಮೋಘ ಗೆಲುವಿನತ್ತ ಮುನ್ನಡೆಸಿದರು.

ಸತತ 4ನೇ ಗೆಲುವನ್ನು ದಾಖಲಿಸಿದ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದೇ ವೇಳೆ, ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ಬಳಿಕ ಐಪಿಎಲ್ 2024ರಲ್ಲಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದ 2ನೇ ತಂಡವೆನಿಸಿತು.
ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಅವರು ಅರ್ಶ್‌ದೀಪ್ ಸಿಂಗ್ ಮತ್ತು ಹರ್‌ಪ್ರೀತ್ ಬ್ರಾರ್ ಅವರ ಪೋಷಕರಿಗೆ ಶುಭಾಶಯ ಕೋರಲು ಸಮಯ ನೀಡಿದರು.
ಇಬ್ಬರೂ ಆಟಗಾರರ ಕುಟುಂಬ ಸದಸ್ಯರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡ ವಿರಾಟ್ ಕೊಹ್ಲಿ ಮೈದಾನದ ಹೊರಗೆ ಸೌಹಾರ್ದತೆಯ ಪ್ರದರ್ಶನವನ್ನು ಪ್ರದರ್ಶಿಸಿದರು. ಯುವ ಕ್ರಿಕೆಟಿಗರ ಕುಟುಂಬಸ್ಥರಿಗೆ ಕೈ ಜೋಡಿಸಿ ಶುಭಾಶಯ ಕೋರಿದ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲರೂ ನಗುಮುಖದಿಂದ ಕಂಡುಬಂದರು.
ಪಂಜಾಬ್ ಕಿಂಗ್ಸ್ ತಂಡದ ಜೆರ್ಸಿಗಳನ್ನು ಧರಿಸಿದ ಕುಟುಂಬಗಳೊಂದಿಗೆ ವಿರಾಟ್ ಕೊಹ್ಲಿ ಸಂಕ್ಷಿಪ್ತ ಸಂವಾದವನ್ನು ಹಂಚಿಕೊಂಡಾಗ ಮೈದಾನದ ಹೊರಗೆ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಲಾಯಿತು.
ವಿರಾಟ್ ಕೊಹ್ಲಿ ಕೂಡ ನವದೆಹಲಿಯ ಪಂಜಾಬಿ ಕುಟುಂಬದಿಂದ ಬಂದವರಾಗಿದ್ದಾರೆ. ಅವರು ಇತ್ತೀಚೆಗೆ ಧರ್ಮಶಾಲಾದಲ್ಲಿ ಹಿಮಾಚಲ ಪ್ರದೇಶ ಸ್ಥಳೀಯ ಆಟಗಾರರೊಂದಿಗೆ ಪಂಜಾಬಿಯಲ್ಲಿ ಮಾತನಾಡುತ್ತಿದ್ದರು. ಅಭಿಮಾನಿಯೊಬ್ಬರು ಬಿಡಿಸಿದ ಭಾವಚಿತ್ರಕ್ಕೆ ಸಹಿ ಹಾಕಿದ ವಿರಾಟ್ ಕೊಹ್ಲಿ ಅಭಿಮಾನಿಗಳ ಮನ ಗೆಲ್ಲುವಲ್ಲಿಯೂ ಯಶಸ್ವಿಯಾದರು.
ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 195.74ರ ಅದ್ಭುತ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು ಮತ್ತು ತಮ್ಮ ಸ್ಟ್ರೈಕ್‌ರೇಟ್ ಟೀಕಿಸುತ್ತಿರುವ ವಿಮರ್ಶಕರ ಬಾಯಿ ಮುಚ್ಚಿಸಿದರು.
92 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ನ ಹಾದಿಯಲ್ಲಿ ವಿರಾಟ್ ಕೊಹ್ಲಿ ಐಪಿಎಲ್ 2024ರಲ್ಲಿ 634 ರನ್‌ಗಳನ್ನು ತಲುಪಿದರು ಮತ್ತು ಆರೆಂಜ್ ಕ್ಯಾಪ್ ಅನ್ನು ತಮ್ಮಲ್ಲೇ ಉಳಿಸಿಕೊಂಡರು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ 4ನೇ ಬಾರಿಗೆ 600 ರನ್‌ಗಳ ಗಡಿಯನ್ನು ದಾಟಿದರು. ಈ ಮೂಲಕ ಕೆಎಲ್ ರಾಹುಲ್ ಅವರ ದಾಖಲೆಯನ್ನು ಸರಿಗಟ್ಟಿದರು.
ಇದೇ ವೇಳೆ ವಿರಾಟ್ ಕೊಹ್ಲಿ ಐಪಿಎಲ್ 2024ರಲ್ಲಿ 30 ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications