For Quick Alerts
ALLOW NOTIFICATIONS  
For Daily Alerts
 

IPL 2024: ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್‌ ಟೆನ್ಷನ್‌ ಹೆಚ್ಚಿಸಿದ ಸ್ಟಾರ್ ಪ್ಲೇಯರ್ ಫಾರ್ಮ್‌

ಐಪಿಎಲ್‌ ಆರಂಭಕ್ಕೆ ಭರದ ಸಿದ್ಧತೆಗಳು ನಡೆದಿವೆ. ಸ್ಟಾರ್ ಆಟಗಾರರು ಸಹ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಅಬ್ಬರಿಸುವ ಮೂಲಕ, ಶ್ರೀಮಂತ ಲೀಗ್‌ನ ಎದುರಾಳಿ ತಂಡಕ್ಕೆ ಎಚ್ಚರಿಕೆಯ ಗಂಟೆಯನ್ನು ನೀಡುತ್ತಿದ್ದಾರೆ. ರಾಷ್ಟ್ರೀಯ ತಂಡದ ಪರ ಅಷ್ಟೇ ಏಕೆ ಯುವಕರು ದೇಶೀಯ ಟೂರ್ನಿಗಳಲ್ಲಿ ತಮ್ಮ ಧಮಾಕೆದಾರ ಪ್ರದರ್ಶನದ ಮೂಲಕ ಅಭಿಮಾನಿಗಳ ಚಿತ್ತ ಕದ್ದಿದ್ದಾರೆ. ಆದರೆ, ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್ ಮಾತ್ರ ತನ್ನ ತಂಡದ ಸ್ಟಾರ್ ಪ್ಲೇಯರ್‌ ಫಾರ್ಮ್‌ ನೋಡಿ ಸಖತ್ ಟೆನ್ಷನ್‌ನಲ್ಲಿದೆ.

ಈ ಬಾರಿಯಾದರೂ ಆರ್‌ಸಿಬಿ ಕಪ್‌ ಗೆಲ್ಲುತ್ತದೆ ಎಂಬ ಆಸೆಯನ್ನು ಹೊಂದಿಕೊಂಡಿದ್ದ ಅಭಿಮಾನಿಗಳ ಆಸೆಗೆ ವಿದೇಶಿ ಪ್ರೀಮಿಯರ್‌ ಲೀಗ್‌ನಲ್ಲಿ ಸ್ಟಾರ್ ಆಟಗಾರ ಆಡಿದ ಆಟ ನಿಜಕ್ಕೂ ಚಿಂತೆಯ ಗೆರೆಗಳನ್ನು ಮೂಡುವಂತೆ ಮಾಡಿವೆ.

IPL 2024: RCB Team Management Tense as Star Players Form Raises Concerns

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೂ ಯಾವುದೇ ಐಪಿಎಲ್ ಪ್ರಶಸ್ತಿ ಗೆಲ್ಲಲು ತಂಡ ವಿಫಲವಾಗಿರುವುದು ಸುದ್ದಿಯಲ್ಲಿಯೇ ಉಳಿದಿದೆ. ಇದೀಗ ಐಪಿಎಲ್ 2024ಕ್ಕೂ ಮುನ್ನ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರ ಕಳಪೆ ಫಾರ್ಮ್ ಅಭಿಮಾನಿಗಳ ಆತಂಕವನ್ನು ಹೆಚ್ಚಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಈಗ ನಡೆಯುತ್ತಿರುವ SA20 ನಲ್ಲಿ ಫಾಫ್ ಡು ಪ್ಲೆಸಿಸ್ ನಿರಂತರವಾಗಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ತಮ್ಮ ಅಬ್ಬರದ ಆಟದಿಂದಲೇ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸುತ್ತಿದ್ದ ಫಾಫ್ ಬ್ಯಾಟ್ ಮೌನಕ್ಕೆ ಜಾರಿದೆ.

ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ಫ್ಲಾಪ್‌ ಶೋ

ಡು ಪ್ಲೆಸಿಸ್ ಅವರು SA20 ನಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ಅನ್ನು ಮುನ್ನಡೆಸುತ್ತಿದ್ದಾರೆ. ಸೂಪರ್ ಕಿಂಗ್ಸ್ ತಂಡದ ಪರ ನಾಯಕ ಡು ಪ್ಲೆಸಿಸ್ ಕೂಡ ಬ್ಯಾಟ್ ಬೀಸುತ್ತಿದ್ದಾರೆ. ಡು ಪ್ಲೆಸಿಸ್ ಇದುವರೆಗೆ ಪಂದ್ಯಾವಳಿಯ ಐದು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಅದರಲ್ಲಿ ಎರಡು ಬಾರಿ ಮಾತ್ರ ಎರಡಂಕಿ ದಾಟಲು ಸಾಧ್ಯವಾಗಿದೆ. ಆದರೆ 5 ಇನ್ನಿಂಗ್ಸ್‌ಗಳಲ್ಲಿ ಸೂಪರ್ ಕಿಂಗ್ಸ್ ನಾಯಕನ ಗರಿಷ್ಠ ಸ್ಕೋರ್ ಕೇವಲ 17 ರನ್. ಡು ಪ್ಲೆಸಿಸ್ ಅವರ ಕಳಪೆ ಫಾರ್ಮ್ ಆರ್‌ಸಿಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

IPL 2024: RCB Team Management Tense as Star Players Form Raises Concerns

ಎಂಐ ಕೇಪ್ ಟೌನ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಡು ಪ್ಲೆಸಿಸ್ ಕೇವಲ 6 ರನ್ ಗಳಿಸಿದ್ದರು. ಅಂದಿನಿಂದ ಅವನು ತಮ್ಮ ಲಯವನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ. ನಂತರ ಡರ್ಬನ್ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಡು ಪ್ಲೆಸಿಸ್ 7 ರನ್ ಗಳಿಸಿ ಔಟಾದರು. ಇದರ ನಂತರ, ಸೂಪರ್ ಕಿಂಗ್ಸ್‌ನ ನಾಯಕ ಪಾರ್ಲ್ ರಾಯಲ್ಸ್ ವಿರುದ್ಧ ಕೇವಲ 10 ರನ್ ಗಳಿಸಲು ಸಾಧ್ಯವಾಯಿತು, ಪ್ರೋಟೀಸ್ ಕ್ಯಾಪಿಟಲ್ಸ್ ವಿರುದ್ಧ 9 ರನ್ ಗಳಿಸಿದರು. ಮತ್ತು ಪಾರ್ಲ್ ರಾಯಲ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಕೇವಲ 17 ರನ್ ಗಳಿಸಿ ನಿರಾಸೆಯ ಕಡಲಿನಲ್ಲಿ ಪಯಾಣ ಮಾಡುತ್ತಿದ್ದಾರೆ. ಡು ಪ್ಲೆಸಿಸ್ ಕಳೆದ 5 ಇನ್ನಿಂಗ್ಸ್‌ಗಳಲ್ಲಿ ಒಟ್ಟಾರೆ 49 ರನ್ ಸಿಡಿಸಿದ್ದಾರೆ.

ಡು ಪ್ಲೆಸಿಸ್ ನಾಯಕತ್ವದ ಜೋಬರ್ಗ್ ಸೂಪರ್ ಕಿಂಗ್ಸ್ ಸ್ಥಿತಿಯೂ ತೀರಾ ಹದಗೆಟ್ಟಿದೆ. ತಂಡವು ಈಗ ಐದು ಪಂದ್ಯಗಳನ್ನು ಆಡಿದೆ. ಇಲ್ಲಿಯವರೆಗೆ ಆಡಿದ ಐದು ಪಂದ್ಯಗಳಲ್ಲಿ, ಸೂಪರ್ ಕಿಂಗ್ಸ್ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು, ಆದರೆ ಮಳೆಯಿಂದಾಗಿ ಒಂದು ಪಂದ್ಯದಲ್ಲಿ ಫಲಿತಾಂಶ ರಹಿತವಾಗಿದೆ. ತಂಡ 3 ಪಂದ್ಯಗಳಲ್ಲಿ ಸೋತಿದೆ.

ಐಪಿಎಲ್‌ನಲ್ಲಿ ಹೇಗಿದೆ ಪ್ರದರ್ಶನ

ದಕ್ಷಿಣ ಆಫ್ರಿಕಾದ ಸ್ಟಾರ್ ಪ್ಲೇಯರ್ ಫಾಫ್ ಡುಪ್ಲೇಸಿಸ್ 2012ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇದು ವರೆಗೆ ಅವರು 130 ಪಂದ್ಯಗಳಲ್ಲಿ ಬ್ಯಾಟ್ ಮಾಡಿ 4133 ರನ್ ಸಿಡಿಸಿದ್ದಾರೆ. ಇದರಲ್ಲಿ 33 ಅರ್ಧಶತಕ ಸೇರಿವೆ. ಇವರ ಗರಿಷ್ಠ ಸ್ಕೋರ್‌ 96 ರನ್ ಆರ್‌ಸಿಬಿ ಪರವಾಗಿ ಬಂದಿದೆ. ಇವರು ಸತತ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಈ ವೇಳೆ ಆಡಿದ 30 ಪಂದ್ಯಗಳಲ್ಲಿ ಡುಪ್ಲೇಸಿಸ್ 1198 ರನ್ ಕಲೆ ಹಾಕಿದ್ದು, 11 ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ.

Story first published: Saturday, January 27, 2024, 9:46 [IST]
Other articles published on Jan 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+