ಮುಂಬರುವ ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 17ರ ಉತ್ಸಾಹವು ನಿಧಾನವಾಗಿ ಏರಿಕೆಯಾಗುತ್ತಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಮಾರ್ಚ್ 22ರಿಂದ ಪ್ರಾರಂಭವಾಗುವ ಸಾಧ್ಯತೆ ಇದ್ದು, ಇದಕ್ಕಾಗಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಯಾರಿ ನಡೆಸಿವೆ.
ಇದೇ ವೇಳೆ ಐಪಿಎಲ್ ಪ್ರಾರಂಭವಾದಾಗಿನಿಂದಲೂ ಪ್ರಶಸ್ತಿ ವಂಚಿತ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಮ್ಮ ಚೊಚ್ಚಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.

2024ರ ಐಪಿಎಲ್‌ಗೂ ಮುನ್ನ ನಡೆದ ಆಟಗಾರರ ಬಿಡುಗಡೆ ಮತ್ತು ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬೌಲಿಂಗ್ ದುರ್ಬಲವಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪರಿಗಣಿಸಿದ್ದಾರೆ.
ಬೆಂಗಳೂರು ಮೂಲದ ಫ್ರಾಂಚೈಸಿ 2024ರ ಐಪಿಎಲ್ ಹರಾಜಿನ ಮೊದಲು ಜೋಶ್ ಹ್ಯಾಜಲ್‌ವುಡ್, ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ಅವರಂತಹ ಕೆಲವು ಸ್ಟಾರ್ ಬೌಲರ್‌ಗಳನ್ನು ಕೈಬಿಟ್ಟಿತು.
ಆರ್‌ಸಿಬಿ ತಮ್ಮ ವೇಗದ-ಬೌಲಿಂಗ್ ವಿಭಾಗವನ್ನು ಸುಧಾರಿಸಲು ಮಿನಿ ಹರಾಜಿನಲ್ಲಿ ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಳ್ ಮತ್ತು ಟಾಮ್ ಕರ್ರಾನ್ ಅವರನ್ನು ಖರೀದಿಸಿತು. ಗಮನಾರ್ಹವಾಗಿ, ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್ ಕೂಡ ತಂಡದಲ್ಲಿಲ್ಲ.

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರ ಬದಲಾವಣೆಯ ನಂತರ, ತಮ್ಮ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆಯೇ ಅಥವಾ ದುರ್ಬಲಗೊಳಿಸಿದೆಯೇ ಎಂದು ಸುನಿಲ್ ಗವಾಸ್ಕರ್ ಅವರನ್ನು ಕೇಳಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಭಾರತ ತಂಡದ ಮಾಜಿ ನಾಯಕ, "ಆರ್‌ಸಿಬಿ ತಂಡದ ಬೌಲಿಂಗ್ ದುರ್ಬಲವಾಗಿದೆ ಎಂದು ನಾನು ಭಾವಿಸುತ್ತೇನೆ, ಅದರ ಬಗ್ಗೆ ಪ್ರಶ್ನೆಯೇ ಇಲ್ಲ. ಜೋಶ್ ಹ್ಯಾಜಲ್‌ವುಡ್ ಪೂರ್ಣ ಋತುವಿನಲ್ಲಿ ಲಭ್ಯವಿರುವುದಿಲ್ಲ ಎಂದು ನಮಗೆ ತಿಳಿದಿತ್ತು. ಆದ್ದರಿಂದ ಅವರನ್ನು ಆಯ್ಕೆ ಮಾಡದಿರುವುದು ಅರ್ಥವಾಗುವಂತಹದ್ದಾಗಿದೆ," ಎಂದರು.
ಇನ್ನು ಹರ್ಷಲ್ ಪಟೇಲ್ ಮತ್ತು ವನಿಂದು ಹಸರಂಗ ಅವರನ್ನು ತಂಡದಿಂದ ಬಿಡುಗಡೆ ಮಾಡಿದ್ದಕ್ಕಾಗಿ ಭಾರತದ ಮಾಜಿ ನಾಯಕ ಆರ್‌ಸಿಬಿ ಫ್ರಾಂಚೈಸಿಯನ್ನು ಪ್ರಶ್ನಿಸಿದ್ದಾರೆ.

"ಆದರೆ, ಹರ್ಷಲ್ ಪಟೇಲ್ ಕೈಬಿಟ್ಟರು, ವನಿಂದು ಹಸರಂಗ ಬಿಟ್ಟರು. ಇಬ್ಬರೂ ಪವರ್ ಪ್ಲೇ, ಮಧ್ಯಮ ಮತ್ತು ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುತ್ತಿದ್ದರು. ಅಂತಹ ಅನುಭವಿ ಬೌಲರ್‌ಗಳನ್ನು ಬಿಟ್ಟುಕೊಟ್ಟಿದ್ದು, ಅವರು ಬಹುಶಃ ತಮ್ಮ ತಂಡಕ್ಕೆ ಸಹಾಯ ಮಾಡಿಲ್ಲ," ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.
ಐಪಿಎಲ್ 2023ರ ಐಪಿಎಲ್‌ನಲ್ಲಿ ಹರ್ಷಲ್ ಪಟೇಲ್ ಆಡಿದ 13 ಪಂದ್ಯಗಳಲ್ಲಿ 9.65ರ ಎಕಾನಮಿ ದರದಲ್ಲಿ 14 ವಿಕೆಟ್‌ಗಳನ್ನು ಪಡೆದರು. ವನಿಂದು ಹಸರಂಗ ಆಡಿದ ಎಂಟು ಪಂದ್ಯಗಳಲ್ಲಿ 9 ವಿಕೆಟ್ ಪಡೆದರು ಮತ್ತು ಕಳೆದ ಋತುವಿನಲ್ಲಿ ಪ್ರತಿ ಓವರ್‌ಗೆ ಸರಾಸರಿ 8.89 ರನ್‌ಗಳನ್ನು ಬಿಟ್ಟುಕೊಟ್ಟರು.
ಬ್ಯಾಟಿಂಗ್ ಸ್ನೇಹಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಪಿಚ್‌ನಲ್ಲಿ ಅಲ್ಜಾರಿ ಜೋಸೆಫ್ ಯಶಸ್ವಿಯಾಗುವುದರ ಬಗ್ಗೆ ಸುನಿಲ್ ಗವಾಸ್ಕರ್ ಆಶಾವಾದಿಯಾಗಿರಲಿಲ್ಲ.
"ಹೌದು, ಆರ್‌ಸಿಬಿ ತಂಡದಲ್ಲಿ ಲಾಕಿ ಫರ್ಗುಸನ್ ಅವರನ್ನು ಪಡೆದಿದೆ ಮತ್ತು ಅಲ್ಜಾರಿ ಜೋಸೆಫ್ ಅವರನ್ನು ಹೊಂದಿದೆ. ಅವರು ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡಿದಾಗ ಬಹುಶಃ ಐಪಿಎಲ್‌ನಲ್ಲಿ ಅತ್ಯುತ್ತಮ ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಜಾರಿ ಜೋಸೆಫ್ 12 ರನ್‌ಗಳಿಗೆ 6 ವಿಕೆಟ್‌ಗಳನ್ನು ಹೊಂದಿದ್ದಾರೆ. ಅಂತಹದ್ದೇನಾದರೂ ಚಿನ್ನಸ್ವಾಮಿ ಪಿಚ್‌ಗಳಲ್ಲಿ ಅದನ್ನು ಪುನರಾವರ್ತಿಸಬಹುದೇ? ಅದು ಸಮಸ್ಯೆಯಾಗಲಿದೆ," ಎಂದು ಭಾರತದ ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟರು.
ಆರ್‌ಸಿಬಿ ತಮ್ಮ ಬೌಲಿಂಗ್‌ನಲ್ಲಿ ರಾಜಿ ಮಾಡಿಕೊಂಡಿದೆ ಎಂದು ಪುನರುಚ್ಚರಿಸುವ ಮೂಲಕ ಕ್ರಿಕೆಟಿಗ ಕಂ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ತಮ್ಮ ಅನಿಸಿಕೆ ತಿಳಿಸಿದರು.
"ಹೀಗಾಗಿ ಆರ್‌ಸಿಬಿ ಬೌಲಿಂಗ್ ಖಂಡಿತವಾಗಿಯೂ ಸ್ವಲ್ಪ ದುರ್ಬಲವಾಗಿದೆ. ಏಕೆಂದರೆ ಸ್ಪಿನ್ ಆಯ್ಕೆಗಳು ಸಹ ಸಾಕಷ್ಟು ಇಲ್ಲ. ವನಿಂದು ಹಸರಂಗ ಇಲ್ಲ ಮತ್ತು ಹರ್ಷಲ್ ಪಟೇಲ್ ಜೊತೆ ಹೊಂದಿದ್ದ ಡೆತ್-ಓವರ್ ಆಯ್ಕೆಗಳು ಸಹ ಸಾಕಷ್ಟು ಇಲ್ಲ," ಎಂದು ಹೇಳಿದರು.
ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) 11.75 ಕೋಟಿ ರೂಪಾಯಿಗೆ ಹರ್ಷಲ್ ಪಟೇಲ್ ಅವರನ್ನು ಖರೀದಿಸಿತು. ಆದರೆ, ಮರಳಿ ಪಡೆಯಲು ಆರ್‌ಸಿಬಿ ಪ್ರಯತ್ನಿಸಲಿಲ್ಲ.
ಇನ್ನು ವನಿಂದು ಹಸರಂಗ ಅವರಿಗೂ ಆರ್‌ಸಿಬಿ ಬಿಡ್ ಮಾಡಲಿಲ್ಲ. ಶ್ರೀಲಂಕಾದ ಲೆಗ್ ಸ್ಪಿನ್ನರ್‌ನನ್ನು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಅವರ ಮೂಲ ಬೆಲೆ 1.50 ಕೋಟಿ ರೂಪಾಯಿಗೆ ಖರೀದಿಸಿತು.