IPL 2024: ಆರ್‌ಸಿಬಿ ಒಂದು ಕಾರ್ಡ್ ಪ್ಲೇ ಮಾಡಿ ಆಟವನ್ನೇ ಗೆದ್ದಿತು
ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ತಂಡಗಳು ಈಗಾಗಲೇ ಭರ್ಜರಿ ತಯಾರಿ ನಡೆಸಿವೆ. ಆಟಗಾರರು ಮೈದಾನದಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ಮಾಡಿದರೆ, ಥಿಂಕ್ ಟ್ಯಾಂಕ್ ಮೈದಾನದ ಹೊರಗಡೆ ನಿಂತು ಪ್ಲ್ಯಾನ್ ಮಾಡುತ್ತವೆ. ಒಂದೊಮ್ಮೆ ಮೈದಾನದ ಹೊರಗಡೆ ಮಾಡುವ ರಣತಂತ್ರವೇ ವಿರೋಧಿಗಳ ತಂತ್ರವನ್ನೇ ಬುಡಮೇಲು ಮಾಡುತ್ತದೆ.
ಆಟಗಾರರನ್ನು ಖರೀದಿಸುವುದು ಹಾಗೂ ಟ್ರೇಡ್ ಮಾಡುವುದು ಟೀಮ್ ಮ್ಯಾನೇಜ್ಮೆಂಟ್‌ಗೆ ಬಿಟ್ಟ ವಿಚಾರ. ಆಟಗಾರರಿಗೆ ಎಷ್ಟು ಹಣ ಹೂಡಬೇಕು?, ಯಾರಿಗೆ ಏನು ಜವಾಬ್ದಾರಿಯನ್ನು ನೀಡಬೇಕು ಎಂಬುದನ್ನೆಲ್ಲಾ ಟೀಮ್ ಮ್ಯಾನೇಜ್ಮೆಂಟ್ ಡಿಸೈಡ್ ಮಾಡುತ್ತದೆ. ಅಲ್ಲದೆ, ಎದುರಾಳಿ ತಂಡದ ಆಟಗಾರನನ್ನು ಟ್ರೇಡ್ ಮಾಡುವಾಗಲು ಎಚ್ಚರಿಕೆಯ ನಡೆ ಇಡುತ್ತದೆ. ಅಸಲಿಗೆ ಆರ್‌ಸಿಬಿ ಫ್ರಾಂಚೈಸಿ ಪ್ಲೇ ಮಾಡಿದ ಒಂದು ಕಾರ್ಡ್‌ನಿಂದ ಮುಂಬೈ ಇಂಡಿಯನ್ಸ್ ತಂಡದ ಗೇಮ್ ಚೇಂಜ್ ಆಗಿದೆ.

ಆಗಿದ್ದು ಏನು?
ಐಪಿಎಲ್ ಮಿನಿ ಹರಾಜಿಗೂ ಮುನ್ನವೇ ಆರ್‌ಸಿಬಿ ತಂಡ ಚದುರಂಗದಾಟವನ್ನು ಆರಂಭಿಸಿತು. ಈ ಆಟದಲ್ಲಿ ಒಂದೊಂದೆ ಮೂವ್ ಇರಲೇ ಇಲ್ಲ. ಬದಲಿಗೆ ಆರ್‌ಸಿಬಿ ರ್ಯಾಪಿಡ್ ಚೆಸ್ ಆಡಲು ಶುರು ಮಾಡಿತು. ಪರಿಣಾಮವೇ ಬೆಂಗಳೂರು ತಂಡ ಮುಂಬೈ ತಂಡದ ಸ್ಟಾರ್ ಆಲ್‌ರೌಂಡರ್‌ನನ್ನು ಭಾರೀ ಮೊತ್ತ ನೀಡಿ ಖರೀದಿಸಿತು. ಕ್ಯಾಮೆರಾನ್ ಗ್ರೀನ್ 2023ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಆರ್‌ಸಿಬಿ ತನ್ನ ತಂಡವನ್ನು ಸ್ಟ್ರಾಂಗ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಗ್ರೀನ್ ಅವರಿಗೆ ಮಣೆ ಹಾಕಿತು. ಕೆಲವೇ ಮೂವ್‌ಗಳಲ್ಲಿ ಮುಂಬೈ ಇಂಡಿಯನ್ಸ್ ತಾನು ಪಂದ್ಯ ಗೆದ್ದ ಬಿಟ್ಟೇ ಎಂಬ ಖುಷಿಯಲ್ಲಿ ತೇಲಾಡಿತು. ಆದರೆ, ದಿನ ಕಳೆದಂತೆ ಆರ್‌ಸಿಬಿ ಬಿಟ್ಟ ಒಂದು ದಾಳ ಹೇಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಚೆಕ್ ಮೀಟ್ ರೀತಿ ಪರಿಣಮಿಸಿದೆ ಎಂಬುದು ತಂಡಕ್ಕೆ ತಡವಾಗಿ ಅರ್ಥವಾಯಿತು.
ಹಾರ್ದಿಕ್ ಟ್ರೇಡ್
ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲೌರೌಂಡರ್‌ಗೆ ಆರ್‌ಸಿಬಿ ಗಾಳ ಹಾಕುತ್ತಲೇ, ಮುಂಬೈ ಕಾರ್ಯಪ್ರವೃತ್ತವಾಗಿ ತನ್ನ ಚಾಣಕ್ಯ ನಡೆಯನ್ನು ಪ್ರದರ್ಶಿಸಿತು. ಫಲವಾಗಿ, ಗುಜರಾತ್ ಟೈಟನ್ಸ್ ತಂಡವನ್ನು ಎರಡು ಬಾರಿ ಫೈನಲ್‌ಗೆ ಕೊಂಡೊಯ್ದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಟ್ರೇಡ್ ಮಾಡಲು ಮುಂದಾಯಿತು. ಆಗ ಹಾರ್ದಿಕ್, ತವರು ತಂಡಕ್ಕೆ ಮರಳಲು ಒಪ್ಪಿದರು. ಅಲ್ಲದೆ ಒಂದು ಷರತ್ತನ್ನು ಇಟ್ಟರು. ಈ ಷರತ್ತು ಮುಂಬೈ ಇಂಡಿಯನ್ಸ್ ತಂಡಕ್ಕೆ ನುಂಗಲಾಗದ ಬಿಸಿ ತುಪ್ಪದಂತೆ ಭಾಸವಾಯಿತು. ಕಷ್ಟ ಪಟ್ಟು ಭವಿಷ್ಯದ ದೃಷ್ಟಿಯಿಂದ ಹಾರ್ದಿಕ್ ಹೇಳಿದ ಮಾತಿಗೆ ಒಪ್ಪಿಕೊಂಡು ತಮ್ಮ ತಂಡಕ್ಕೆ ಬರಮಾಡಿಕೊಂಡಿತು. ಹಾರ್ದಿಕ್ ಪಾಂಡ್ಯ ಘರ್ ವಾಪಸಿಯಿಂದ ಅಸಮಾಧಾನ ಭುಗಿಲೆದ್ದಿತು. ಇದಕ್ಕೆ ಕಾರಣ ನಾಯಕತ್ವದ ಬದಲಾವಣೆ
ಮುಂಬೈ ಇಂಡಿಯನ್ಸ್ ಒನ್ ಫ್ಯಾಮಿಲಿ ಎಂಬ ಟ್ಯಾಗ್ ಲೈನ್ ಮುಂಬೈ ತಂಡಕ್ಕೆ ಮುಳುವಾಗಲು ಆರಂಭಿಸಿತು. ತಂಡಕ್ಕೆ ಐದು ಬಾರಿ ಚಾಂಪಿಯನ್ ಮುಕುಟ ತೊಡಿಸಿದ ಸ್ಟಾರ್ ನಾಯಕ ರೋಹಿತ್ ಶರ್ಮಾ ಅವರನ್ನು ಬದಿಗೊತ್ತಿ, ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಲಾಯಿತು. ಭವಿಷ್ಯದ ದೃಷ್ಟಿಯಿಂದ ಮುಂಬೈ ಸರಿಯಾದ ನಿರ್ಧಾರವಾಗಿತ್ತು.

ಅಸಮಾಧಾನಕ್ಕೆ ಕಾರಣವೇನು?
ದಿನಗಳು ಉರುಳುತ್ತಿದಂತೆ ಮುಂಬೈ ಇಂಡಿಯನ್ಸ್ ಛಾವಣಿಯಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿತು. ಅಂದಹಾಗೆ ಈ ಅಸಮಾಧಾನಕ್ಕೆ ಮೂಲ ಕಾರಣ ನಾಯಕತ್ವ.. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಸೂರ್ಯಕುಮಾರ್ ಯಾದವ್ ಹಾಗೂ ಜಸ್ಪ್ರಿತ್ ಬುಮ್ರಾ ಸಹ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದರು. ಹಾರ್ದಿಕ್ ಆಗಮನದಿಂದ ಇವರ ಆಸೆ ದೂರ ಸರಿಯಿತು. ಈಗಲೂ ಮುಂಬೈ ತಂಡದ ಸ್ಟಾರ್ ಆಟಗಾರರು ಬೇರೆ ತಂಡಗಳತ್ತ ಮುಖ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಮುಂಬೈ ಇಂಡಿಯನ್ಸ್ ಮನೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅಂದಹಾಗೆ ಇಷ್ಟಕ್ಕೆಲ್ಲಾ ಕಾರಣ ಆರ್‌ಸಿಬಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಒಂದು ವೇಳೆ ಆರ್‌ಸಿಬಿ ಕ್ಯಾಮೆರೂನ್ ಗ್ರೀನ್‌ಗೆ ಟ್ರೇಡ್ ಮಾಡದೇ ಹೋಗಿದ್ದರೆ, ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡುವ ಮನಸ್ಸು ಮಾಡುತ್ತಿರಲಿಲ್ಲವೇನು. ಅದು ಏನೇ ಆಗಲಿ ಆರ್‌ಸಿಬಿಯ ಮಾಸ್ಟರ್ ಸ್ಟ್ರೋಕ್‌ಗೆ ಮುಂಬೈ ಕಕ್ಕಾಬಿಕ್ಕಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications