For Quick Alerts
ALLOW NOTIFICATIONS  
For Daily Alerts
 

IPL 2024: ಅಗ್ರ 4ರಲ್ಲಿ ಸ್ಥಾನ ಪಡೆಯುತ್ತಾ ಆರ್‌ಸಿಬಿ?; ಪ್ಲೇಆಫ್ ಅರ್ಹತಾ ಸನ್ನಿವೇಶ ಹೇಗಿದೆ?

ಗುರುವಾರ, ಮೇ 9ರಂದು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್‌ಗಳಿಂದ ಸೋಲಿಸಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024ರ ಪ್ಲೇಆಫ್ ಅರ್ಹತಾ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತು.

ಮಾಜಿ ಫೈನಲಿಸ್ಟ್ ಆರ್‌ಸಿಬಿ ತಂಡ ಸತತ ನಾಲ್ಕು ಪಂದ್ಯಗಳ ಗೆಲುವಿನ ಓಟದಲ್ಲಿದ್ದು, ಹೀಗಾಗಿ ಲೀಗ್ ಅಂತ್ಯದ ವೇಳೆಗೆ ತಂಡದ ಪುನರಾಗಮನವು ನಿಷ್ಠಾವಂತ ಅಭಿಮಾನಿಗಳಿಗೆ ಹೊಸ ಭರವಸೆಯನ್ನು ನೀಡಿದೆ.

IPL 2024 RCB to Finish in Top 4 What is the Playoffs Qualification Scenario

ಆರ್‌ಸಿಬಿ ತಂಡಕ್ಕೆ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಮುಖ್ಯವಾಗಿದೆ. ಅಲ್ಲದೆ, ಬೇರೆ ತಂಡಗಳ ಫಲಿತಾಂಶಗಳು ಸಹ ಪ್ರಮುಖವಾಗಿವೆ. ಆದರೆ, ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಆರ್‌ಸಿಬಿ ಅವಕಾಶಗಳು ಈಗ ಕೇವಲ ಗಣಿತದ ಲೆಕ್ಕಾಚಾರಕ್ಕಿಂತ ಹೆಚ್ಚಾಗಿದೆ.

ಆರ್‌ಸಿಬಿ ಸತತ ನಾಲ್ಕು ಪಂದ್ಯಗಳ ಗೆಲುವಿನ ನಾಗಾಲೋಟದಲ್ಲಿದೆ. ಆದರೆ ತಮ್ಮ ಮೊದಲ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿದ್ದಾರೆ. ಈ ವೇಳೆ ಸತತ 6 ಪಂದ್ಯಗಳಲ್ಲಿ ಸೋತಿರುವುದು ಹಿನ್ನಡೆಗೆ ಕಾರಣವಾಗಿದೆ.

IPL 2024 RCB to Finish in Top 4 What is the Playoffs Qualification Scenario

ಗುರುವಾರದಂದು ಧರ್ಮಶಾಲಾದಲ್ಲಿ ತಮ್ಮ ಅದ್ಭುತ ಗೆಲುವಿನ ನಂತರ, ಆರ್‌ಸಿಬಿ ತಂಡ 12 ಪಂದ್ಯಗಳಿಂದ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಇನ್ನು ನೆಟ್ ರನ್ ರೇಟ್ ಏರಿಕೆ ಕಂಡಿತು ಮತ್ತು ಧನಾತ್ಮಕ ಅಂಕಿಗೆ ಬಂದಿದೆ.

ಆರ್‌ಸಿಬಿ ತಂಡ ಸದ್ಯ 12 ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗಿಂತ ಕೇವಲ ಎರಡು ಅಂಕಗಳಿಂದ ಹಿಂದುಳಿದಿದೆ.

ಆರ್‌ಸಿಬಿ ನಿಜವಾಗಿಯೂ ಪ್ಲೇಆಫ್‌ಗೆ ಪ್ರವೇಶಿಸಬಹುದೇ?

ಹೌದು ಮತ್ತು ಇಲ್ಲ ಎಂಬ ಉತ್ತರಗಳು ಸಿಗಲಿವೆ. ಆದರೆ ಆರ್‌ಸಿಬಿ ತಂಡದ ನಿಷ್ಠಾವಂತ ಅಭಿಮಾನಿಗಳಿಗೆ ಮಾಹಿತಿ ಇಲ್ಲಿದೆ. ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನವನ್ನು ಗಳಿಸಬಹುದು. ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ವಿವರ.

ಐಪಿಎಲ್ 2024: ಆರ್‌ಸಿಬಿ ತಂಡಕ್ಕೆ ಉಳಿದಿರುವ ಪಂದ್ಯಗಳು

ಮೇ 12ರಂದು ಬೆಂಗಳೂರಿನಲ್ಲಿ vs ಡೆಲ್ಲಿ ಕ್ಯಾಪಿಟಲ್ಸ್
ಮೇ 18ರಂದು ಬೆಂಗಳೂರಿನಲ್ಲಿ vs ಚೆನ್ನೈ ಸೂಪರ್ ಕಿಂಗ್ಸ್

ಆರ್‌ಸಿಬಿ ಪ್ಲೇಆಫ್‌ಗೆ ಪ್ರವೇಶಿಸಲು ಎರಡು ಅತ್ಯುತ್ತಮ ಸನ್ನಿವೇಶಗಳಿವೆ. ಆರ್‌ಸಿಬಿ ಗರಿಷ್ಠ 14 ಅಂಕಗಳೊಂದಿಗೆ ಮುಕ್ತಾಯಗೊಳ್ಳುವ ಕಾರಣ, ಅಗ್ರ 2ರಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ. ಕೆಕೆಆರ್ ಮತ್ತು ರಾಜಸ್ಥಾನ್ ರಾಯಲ್ಸ್ ಮೇ 10ರ ವೇಳೆಗೆ ಈಗಾಗಲೇ 16 ಅಂಕಗಳನ್ನು ಹೊಂದಿವೆ.

ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸನ್ನಿವೇಶ 1

* ಆರ್‌ಸಿಬಿ ತಂಡಕ್ಕೆ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ಒಂದೇ ಅನಿವಾರ್ಯವಾಗಿದೆ.

* ಆರ್‌ಸಿಬಿ ಅಂಕಪಟ್ಟಿಯ ಮಧ್ಯದಿಂದ ಮೇಲೆ ಹೇಗೆ ಜಿಗಿಯಬಹುದು ಮತ್ತು 3ನೇ ಸ್ಥಾನವನ್ನು ಗಳಿಸಬಹುದು ಎಂಬುದು ಇಲ್ಲಿದೆ.

* ಸನ್‌ರೈಸರ್ಸ್ ಹೈದರಾಬಾದ್ ತಂಡದ ತನ್ನ ಉಳಿದ ಎಲ್ಲಾ ಪಂದ್ಯಗಳನ್ನು ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಬೇಕು.

* ಚೆನ್ನೈ ಸೂಪರ್ ಕಿಂಗ್ಸ್ ತನ್ನ ಉಳಿದ ಎಲ್ಲಾ ಪಂದ್ಯಗಳನ್ನು ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲಬೇಕಿದೆ.

* ಆರ್‌ಸಿಬಿ ಮತ್ತು ಲಕ್ನೋ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಾಣಬೇಕು.

* ಲಕ್ನೋ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಬೇಕು, ಆದರೆ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಬೇಕು.

ಮೇಲಿನ ಎಲ್ಲವು ನಿಜವಾದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡ 4ನೇ ಸ್ಥಾನದೊಂದಿಗೆ ಮತ್ತು ಆರ್‌ಸಿಬಿ ತಂಡ 3ನೇ ಸ್ಥಾನವನ್ನು ಗಳಿಸುವ ಉತ್ತಮ ಅವಕಾಶವನ್ನು ಹೊಂದಿವೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಕ್ನೋ ತಂಡವನ್ನು ಸೋಲಿಸಿದರೂ ಆರ್‌ಸಿಬಿ 3ನೇ ಸ್ಥಾನವನ್ನು ಗಳಿಸಬಹುದು. ಆದರೆ ಡೆಲ್ಲಿ ತಂಡಕ್ಕಿಂತ ಆರ್‌ಸಿಬಿ ಉತ್ತಮ ನೆಟ್ ರನ್ ರೇಟ್ ಕಾಪಾಡಿಕೊಳ್ಳಬೇಕು.

ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸನ್ನಿವೇಶ 2

* ಆರ್‌ಸಿಬಿ ತನ್ನ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು ಮತ್ತು ಎಸ್‌ಆರ್‌ಹೆಚ್, ಸಿಎಸ್‌ಕೆ ಉಳಿದ ಪಂದ್ಯಗಳಲ್ಲಿ ಕನಿಷ್ಠ ಪಂದ್ಯಗಳಲ್ಲಿ ಸೋಲಬೇಕು.

* ಎಸ್‌ಆರ್‌ಹೆಚ್, ಸಿಎಸ್‌ಕೆ ತಂಡಗಳಿಗೆ 3 ಪಂದ್ಯಗಳು ಬಾಕಿ ಇದ್ದು, 18 ಅಂಕ ಗಳಿಸುವ ಅವಕಾಶವಿದೆ.

* ಉಭಯ ತಂಡಗಳು ಕನಿಷ್ಠ 16 ಅಂಕ ಗಳಿಸಿದರೆ ಆರ್‌ಸಿಬಿ ಪ್ಲೇಆಫ್ ಅವಕಾಶ ಕೈಬಿಟ್ಟಂತಾಗುತ್ತದೆ.

* ಎರಡು ತಂಡಗಳಲ್ಲಿ ಒಂದು ತಂಡ 16 ಅಥವಾ 18 ಮತ್ತು ಇನ್ನೊಂದು ತಂಡ 14 ಅಂಕಗಳಲ್ಲಿ ಮುಗಿಸಿದರೆ, ಆರ್‌ಸಿಬಿ ತಮ್ಮ ಅವಕಾಶಗಳನ್ನು ಬಳಸಿಕೊಳ್ಳಲಿದೆ.

* ಇಂತಹ ಸನ್ನಿವೇಶದಲ್ಲಿ ಆರ್‌ಸಿಬಿ 14 ಅಂಕಗಳಲ್ಲಿ 3 ತಂಡಗಳ ಜೊತೆಗೆ ಟೈ ಆಗಲಿದೆ. ಆಗ ಉತ್ತಮ ನೆಟ್ ರನ್ ರೇಟ್ ಪ್ಲೇಆಫ್‌ಗೆ ಅವಕಾಶ ನೀಡಲಿದೆ.

Story first published: Friday, May 10, 2024, 11:07 [IST]
Other articles published on May 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+