IPL 2024: ಬೆಂಗಳೂರಿನಲ್ಲಿ ಕಾಳಗಕ್ಕೂ ಮುನ್ನ ಆರ್‌ಸಿಬಿ vs ಪಂಜಾಬ್ ಕಿಂಗ್ಸ್ ಹೆಡ್-ಟು-ಹೆಡ್ ದಾಖಲೆ
ಸೋಮವಾರ, ಮಾರ್ಚ್ 25ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳು ಮುಖಾಮುಖಿಯಾಗಲಿವೆ.
2024ರ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡ ಸಿಎಸ್‌ಕೆ ತಂಡದ ಎದುರು 6 ವಿಕೆಟ್‌ಗಳ ಸೋಲು ಅನುಭವಿಸಿತು. ಇನ್ನು ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಎದುರು 4 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿ ಮುಂದಿನ ಪಂದ್ಯಕ್ಕೆ ಬರುತ್ತಿದೆ.
ಉಭಯ ತಂಡಗಳು ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಅನ್ವೇಷಣೆಯಲ್ಲಿದ್ದು, ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಇನ್ನೂ ಒಮ್ಮೆಯೂ ಯಶಸ್ಸನ್ನು ಅನುಭವಿಸಿಲ್ಲ. ಆರ್‌ಸಿಬಿ ಪ್ರತಿ ವರ್ಷ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದರೂ ಪಂದ್ಯಾವಳಿಯಲ್ಲಿ ಗುರುತು ಮೂಡಿಸಲು ಕಷ್ಟಪಡುತ್ತಿದೆ.

ಪಂಜಾಬ್ ಕಿಂಗ್ಸ್ ಕೂಡ ಇದೇ ಕಥೆಯನ್ನು ಹೊಂದಿದೆ. ಅಲ್ಲಿ ಯುವರಾಜ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್, ವೀರೇಂದ್ರ ಸೆಹ್ವಾಗ್ ಮತ್ತು ಇತರ ಹಲವಾರು ಆಟಗಾರರನ್ನು ಹೊಂದಿದ್ದರು. ಆದರೆ ಒಮ್ಮೆ ಕೂಡ ಟ್ರೋಫಿ ಎತ್ತುವಲ್ಲಿ ವಿಫಲರಾಗಿದೆ.
ಆರ್‌ಸಿಬಿ ತಂಡ 2009, 2011 ಮತ್ತು 2016ರಲ್ಲಿ ಫೈನಲ್ ತಲುಪುವ ಮೂಲಕ ಮೂರು ಬಾರಿ ಟ್ರೋಫಿ ಗೆಲ್ಲುವ ಸಮೀಪಕ್ಕೆ ಬಂದಿತ್ತು. ಇನ್ನು 2014ರಲ್ಲಿ ಒಮ್ಮೆ ಮಾತ್ರ ಫೈನಲ್ ತಲುಪಿದ ಪಂಜಾಬ್ ಕಿಂಗ್ಸ್ ಒಂದು ಹೆಜ್ಜೆ ಮುಂದೆ ಹೋಗಲು ವಿಫಲವಾಯಿತು.
ಐಪಿಎಲ್‌ನ 16 ಆವೃತ್ತಿಗಳಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಪಂಜಾಬ್ ಕಿಂಗ್ಸ್ 17 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬ 14 ಪಂದ್ಯಗಳನ್ನು ಗೆದ್ದಿದೆ.
ಮೇ 5, 2008ರಂದು ಅವರ ಎರಡು ತಂಡಗಳ ಮೊದಲ ಮುಖಾಮುಖಿಯಲ್ಲಿ ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳ ಗೆಲುವಿನೊಂದಿಗೆ ಪ್ರಾಬಲ್ಯ ಸಾಧಿಸಿತು.
2023ರ ಏಪ್ರಿಲ್ 20ರಂದು ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆದ ತಮ್ಮ ಕೊನೆಯ ಮುಖಾಮುಖಿಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸುವ ಮೂಲಕ 24 ರನ್‌ಗಳಿಂದ ಗೆಲುವು ಸಾಧಿಸಿತು.

ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ಫಾಫ್ ಡು ಪ್ಲೆಸಿಸ್ ವಹಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ಶಿಖರ್ ಧವನ್ ವಹಿಸಿದ್ದಾರೆ.
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ vs ಪಂಜಾಬ್ ಕಿಂಗ್ಸ್ ಹೆಡ್-ಟು-ಹೆಡ್
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆರ್‌ಸಿಬಿಯ ತವರು ಮೈದಾನವಾಗಿದ್ದು, ಇಲ್ಲಿ ಆತಿಥೇಯ ತಂಡವು ಆರು ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಎಂ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ ವರದಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಅದರ ಅಸಾಧಾರಣ ಬ್ಯಾಟಿಂಗ್ ಮೇಲ್ಮೈ ಮತ್ತು ಹೆಚ್ಚಿನ ಸ್ಕೋರಿಂಗ್ ಪಂದ್ಯಗಳಿಗೆ ಹೆಸರುವಾಸಿಯಾಗಿದೆ. ಇದಕ್ಕೆ ಇಲ್ಲಿನ ಸಣ್ಣ ಬೌಂಡರಿಗಳು ಮತ್ತು ವೇಗದ ಔಟ್‌ಫೀಲ್ಡ್ ಕಾರಣ.
ಮೊದಲು ಬ್ಯಾಟಿಂಗ್ ಮಾಡಲಿ ಅಥವಾ ಎರಡನೇ ಇನ್ನಿಂಗ್ಸ್ ಆಗಿರಲಿ, ಈ ಪಿಚ್‌ನಲ್ಲಿ ಯಾವುದೇ ಮೊತ್ತವು ಸುರಕ್ಷಿತವಾಗಿ ಕಂಡುಬರುವುದಿಲ್ಲ. ಏಕೆಂದರೆ ತಂಡಗಳು ಸಾಮಾನ್ಯವಾಗಿ ಅನಿಶ್ಚಿತ ಸನ್ನಿವೇಶಗಳಿಂದ ಗೆಲ್ಲುತ್ತವೆ.
ಆದಾಗ್ಯೂ, ಮೊದಲು ಬ್ಯಾಟಿಂಗ್ ಮಾಡುವ ತಂಡವು ಪಂದ್ಯದಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು 200ಕ್ಕಿಂತ ಹೆಚ್ಚು ಸ್ಕೋರ್ ಮಾಡುವ ಗುರಿಯನ್ನು ಹೊಂದಿರಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications