ಐಪಿಎಲ್ 2024ರಲ್ಲಿ ಸತತ ಆರು ಸೋಲುಗಳ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವನ್ನು ಸೋಲಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು.
ಆ ಪಂದ್ಯದಲ್ಲಿ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಂದ ಸಾಮೂಹಿಕ ಪ್ರದರ್ಶನ ಬಂದ ಕಾರಣ, ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ 2024ರ ಅಭಿಯಾನದ ತನ್ನ ಎರಡನೇ ಪಂದ್ಯವನ್ನು ಗೆದ್ದುಕೊಂಡಿತು.

ಐಪಿಎಲ್ 2024ರ ಆವೃತ್ತಿಯಲ್ಲಿ ಕೆಲವೊಮ್ಮೆ ಆರ್‌ಸಿಬಿ ತಮ್ಮ ಬ್ಯಾಟಿಂಗ್‌ನಲ್ಲಿ ಕ್ಲಿನಿಕಲ್ ಪ್ರದರ್ಶನ ನೀಡಲಿಲ್ಲ. ಆದರೆ ಬೌಲರ್‌ಗಳಿಂದ ಕಳಪೆ ಪ್ರದರ್ಶನವು ತಂಡದ ದೊಡ್ಡ ಸಮಸ್ಯೆಯಾಗಿ ಮುಂದುವರೆದಿದೆ.
ಆರ್‌ಸಿಬಿ ತಂಡದ ಬೌಲರ್‌ಗಳು ಪವರ್‌ಪ್ಲೇನಲ್ಲಿ ಹೆಚ್ಚು ರನ್ ಸೋರಿಕೆ ಮಾಡಿದರು. ಆದರೆ ಒಂದು ಅಪರೂಪದ ಬದಲಾವಣೆ ಎಂಬಂತೆ ಬೌಲರ್‌ಗಳು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಫಾರ್ಮ್‌ಗೆ ಮರಳಿದರು.
ಇದೇ ವೇಳೆ ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಪ್ರತಿ ಪಂದ್ಯದಲ್ಲೂ ರನ್ ಗಳಿಸಲು ಬ್ಯಾಟರ್‌ಗಳನ್ನು ಅವಲಂಬಿಸುವುದನ್ನು ಮುಂದುವರಿಸಿದರೆ, ಆರ್‌ಸಿಬಿ ತಂಡ ಎಂದಿಗೂ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವುದಿಲ್ಲ ಎಂದು ಪುನರುಚ್ಚರಿಸಿದರು.

ಮುಂದಿನ ಬಾರಿ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕೆಲವು ಸಾಮಾನ್ಯ ಜ್ಞಾನವನ್ನು ಬಳಸಬೇಕು ಮತ್ತು ಗುಣಮಟ್ಟದ ಬೌಲರ್‌ಗಳನ್ನು ಆಯ್ಕೆ ಮಾಡಬೇಕು ಎಂದು ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ.
"ಖಂಡಿತವಾಗಿ, ಹರಾಜಿನಲ್ಲಿ ಕುಳಿತುಕೊಳ್ಳುವ ಅರ್‌ಸಿಬಿ ಮ್ಯಾನೇಜ್‌ಮೆಂಟ್ ಸಮತೋಲಿತ ತಂಡವನ್ನು ಹೊಂದಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ದೊಡ್ಡ ಬ್ಯಾಟಿಂಗ್ ವಿಭಾಗವನ್ನು ಆಯ್ಕೆ ಮಾಡುವುದರಿಂದ ಯಾವಾಗಲೂ ನೀವು ಪಂದ್ಯಗಳನ್ನು ಗೆಲ್ಲುವುದಿಲ್ಲ. ನೀವು ಉತ್ತಮ ಬೌಲರ್‌ಗಳನ್ನು ಆಯ್ಕೆ ಮಾಡುವವರೆಗೆ, ನೀವು ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಿಲ್ಲ," ಎಂದು ಹರ್ಭಜನ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಆರ್‌ಸಿಬಿ ತಂಡದ ಸಹಾಯಕ ಸಿಬ್ಬಂದಿಯಲ್ಲಿ ಒಬ್ಬ ಭಾರತೀಯ ವ್ಯಕ್ತಿ ಇರಲೇಬೇಕು ಎಂದು ಹರ್ಭಜನ್ ಸಿಂಗ್ ಭಾವಿಸಿದ್ದು, ಅವರು ಅನ್‌ಕ್ಯಾಪ್ಡ್ ಭಾರತದ ಆಟಗಾರರಿಗೆ, ವಿಶೇಷವಾಗಿ ಬೌಲರ್‌ಗಳಿಗೆ ಸಹಾಯ ಮಾಡುತ್ತಾರೆ ಎಂದರು.

"ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನ ದೃಷ್ಟಿಕೋನದಿಂದ, ಭಾರತೀಯ ಯುವಕರನ್ನು ಅರ್ಥಮಾಡಿಕೊಳ್ಳುವ ನಿರ್ವಹಣೆಯಲ್ಲಿ ಭಾರತೀಯ ಸಹಾಯಕ ಸಿಬ್ಬಂದಿಯನ್ನು ಹೊಂದಿರಬೇಕು. ಅವರು ಹೋಗಿ ದೇಶೀಯ ಕ್ರಿಕೆಟ್‌ನಲ್ಲಿ ಆಟಗಾರರ ಪ್ರದರ್ಶನಗಳನ್ನು (ಭಾರತೀಯ ಪ್ರತಿಭೆಗಳ) ನೋಡಬೇಕು ಮತ್ತು ಅವರನ್ನು ಆಯ್ಕೆ ಮಾಡಬೇಕೆ ಎಂದು ಖಚಿತಪಡಿಸಿಕೊಳ್ಳಬೇಕು".
"ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿರುವುದು ಬಹಳ ಮುಖ್ಯ. ಆರ್‌ಸಿಬಿ ಯಾವಾಗಲೂ ಅತ್ಯುತ್ತಮ ಬ್ಯಾಟಿಂಗ್ ಲೈನ್‌ಅಪ್ ಅನ್ನು ಹೊಂದಿದೆ. ಆದರೆ ತಂಡದ ಬೌಲಿಂಗ್ ಆರ್‌ಸಿಬಿ ಫ್ರಾಂಚೈಸಿ ಮತ್ತು ಅಭಿಮಾನಿಗಳನ್ನು ನಿರಾಸೆಗೊಳಿಸಿದೆ," ಎಂದು ಮಾಜಿ ಆರ್ಫ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದರು.
ಐಪಿಎಲ್ 2024ರಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ಏಳು ಸೋಲು ಮತ್ತು ಎರಡು ಗೆಲುವುಗಳೊಂದಿಗೆ, ಆರ್‌ಸಿಬಿ ಪ್ರಸ್ತುತ 10 ತಂಡಗಳ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಭಾನುವಾರ, ಏಪ್ರಿಲ್ 28ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿ ತಂಡ ಆಡುವ ಪ್ರತಿಯೊಂದು ಪಂದ್ಯವೂ ಇಲ್ಲಿಂದ ಸೆಮಿಫೈನಲ್ ಪಂದ್ಯವಾಗಿರಲಿದೆ.