For Quick Alerts
ALLOW NOTIFICATIONS  
For Daily Alerts
 

IPL 2024: ನಾಯಕತ್ವದಿಂದ ರೋಹಿತ್ ಶರ್ಮಾ ಕೆಳಗಿಳಿಸಲು ಅಸಲಿ ಕಾರಣ ಬಹಿರಂಗ

ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್‌ ಶರ್ಮಾ ಅವರಿಂದ ಕಸಿದು ಕೊಂಡು, ಹಾರ್ದಿಕ್ ಪಾಂಡ್ಯ ಅವರಿಗೆ ನೀಡಿದ ಬಗ್ಗೆ ಅಸಮಾಧಾನ ಮನೆ ಮಾಡಿದೆ. ಹಿಟ್‌ ಮ್ಯಾನ್‌ ಅವರ ನಾಯಕತ್ವವನ್ನು ಕಸಿದು ಬೇರೆ ಆಟಗಾರನಿಗೆ ನೀಡಲು ಬಲವಾದ ಕಾರಣ ಏನು ಎಂಬುದು ಈಗ ಬಯಲಾಗಿದೆ.

ರೋಹಿತ್ ಶರ್ಮಾ ನಾಯಕತ್ವ ಹಾಗೂ ಆರಂಭಿಕ ಆಟಗಾರ ಎರಡೂ ಹೊಣೆಯನ್ನು ಹೊತ್ತುಕೊಳ್ಳುವಲ್ಲಿ ಕಳೆದ ಎರಡು ಆವೃತ್ತಿಗಳಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಇವರನ್ನು ನಾಯಕ್ವದಿಂದ ಕೆಳಗಿಳಿಸಿದರೆ ಬ್ಯಾಟಿಂಗ್‌ಗೆ ಪೋಕಸ್‌ ಮಾಡುವಂತೆ ಆಗುತ್ತದೆ ಎಂದು ಇತ್ತೀಚಿಗೆ ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ತಿಳಿಸಿದ್ದರು. ಈ ಮೂಲಕ ತಮ್ಮ ತಂಡದ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದರು.

IPL 2024: Real reason for Rohit Sharmas removal from captaincy revealed

ಮುಂಬೈ, ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್‌ನಿಂದ ಟ್ರೇಡ್ ಮಾಡುವ ಮೂಲಕ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ನಂತರ ಕಳೆದ ವರ್ಷ ಡಿಸೆಂಬರ್‌ನಲ್ಲಿ, ಹರಾಜಿಗೂ ಮೊದಲು, ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು ಮತ್ತು ಹಾರ್ದಿಕ್ ಅವರನ್ನು ಹೊಸ ನಾಯಕನನ್ನಾಗಿ ಮಾಡಲಾಯಿತು.

ಮಾರ್ಕ್ ಬೌಚರ್ ಅವರು ಬ್ಯಾಂಟರ್ ವಿಥ್ ದಿ ಬಾಯ್ಸ್ ಈ ಬಗ್ಗೆ ಮಾತನಾಡಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲಿ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕುವುದು ಮ್ಯಾನೇಜ್‌ಮೆಂಟ್‌ನ ನಿರ್ಧಾರ ಎಂದು ಬಹಿರಂಗಪಡಿಸಿದರು. ಇದರಿಂದಾಗಿ ಅವರು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು ಎಂದು ತಿಳಿಸಿದ್ದಾರೆ.

2023ರ ಹರಾಜಿಗೂ ಮುನ್ನ ಎಂಐ ಮ್ಯಾನೇಜ್‌ಮೆಂಟ್ ಹಾರ್ದಿಕ್ ಅವರನ್ನು ಗುಜರಾತ್‌ಗೆ 15 ಕೋಟಿ ರೂ. ನೀಡಿ ಖರೀದಿಸಿತ್ತು. ಅಲ್ಲದೆ ಪ್ರತ್ಯೇಕ ಮೊತ್ತವನ್ನೂ ನೀಡಿದೆ. ಹರಾಜಿಗೂ ಮುನ್ನವೇ ಮ್ಯಾನೇಜ್‌ಮೆಂಟ್ ರೋಹಿತ್ ಅವರನ್ನು ತೆಗೆದು ಹಾರ್ದಿಕ್ ಅವರನ್ನು ನಾಯಕನನ್ನಾಗಿ ಮಾಡಿತ್ತು.

IPL 2024: Real reason for Rohit Sharmas removal from captaincy revealed

ಬೌಚರ್, 'ಕಳೆದ ಎರಡು ಸೀಸನ್‌ಗಳಲ್ಲಿ ರೋಹಿತ್ ಅವರ ಫಾರ್ಮ್ ಉತ್ತಮವಾಗಿರಲಿಲ್ಲ. ಅವರು ಬ್ಯಾಟಿಂಗ್‌ನಿಂದ ತಂಡಕ್ಕೆ ವಿಶೇಷವಾದ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಅವರ ನಾಯಕತ್ವವು ಅತ್ಯುತ್ತಮವಾಗಿತ್ತು. ಅವರು ಬಹು ವರ್ಷಗಳ ಕಾಲ ನಾಯಕತ್ವ ವಹಿಸಿದ್ದಾರೆ. ಅವರು ಮುಂಬೈ ಮತ್ತು ಭಾರತ ತಂಡದ ಪರ ಅದ್ಭುತವಾಗಿ ನಾಯಕತ್ವ ವಹಿಸಿದ್ದಾರೆ. ಮೈದಾನಕ್ಕಿಳಿದ ಕೂಡಲೇ ಆಟಗಾರರು ಹಾಗೂ ತಂತ್ರಗಾರಿಕೆಯತ್ತ ಗಮನ ಹರಿಸುತ್ತಾರೆ.

ಆಟಗಾರನಾಗಿ ರೋಹಿತ್ ನಮಗೆ ಬೇಕು. ನಾಯಕನಾಗದೆ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸ ನಮಗಿದೆ. ರೋಹಿತ್ ಖಂಡಿತವಾಗಿಯೂ ಭಾರತದ ನಾಯಕತ್ವ ವಹಿಸುತ್ತಾರೆ, ಆದರೆ ಈಗ ಅವರು ಈ ಒತ್ತಡವಿಲ್ಲದೆ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುತ್ತದೆ. ಬಹುಶಃ ನಾವು ಈಗ ರೋಹಿತ್ ಅವರ ಅತ್ಯುತ್ತಮವಾದದ್ದನ್ನು ನೋಡಬಹುದು ಎಂದು ಕೋಚ್‌ ತಿಳಿಸಿದ್ದಾರೆ.

ಕಳೆದ 2 ಸೀಸನ್‌ಗಳಲ್ಲಿ ರೋಹಿತ್ ಫಾರ್ಮ್ ಫ್ಲಾಫ್

ರೋಹಿತ್ ಕಳೆದ 2 ಐಪಿಎಲ್ ಸೀಸನ್‌ಗಳಲ್ಲಿ ಕೇವಲ 20ರ ಸರಾಸರಿಯಲ್ಲಿ 600 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ 126.84 ಆಗಿತ್ತು. ಅವರ ನಾಯಕತ್ವದಲ್ಲಿ ತಂಡವು 2020 ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಅನ್ನು ಗೆದ್ದಿತ್ತು. ತಂಡವು 2021 ಮತ್ತು 2022 ರಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಹ ಸಾಧ್ಯವಾಗಲಿಲ್ಲ. 2023 ರಲ್ಲಿ, ತಂಡವು ಅಗ್ರ-4 ತಂಡಗಳಲ್ಲಿ ಸ್ಥಾನ ಗಳಿಸಿತು, ಆದರೆ ಕ್ವಾಲಿಫೈಯರ್-2 ರಲ್ಲಿ ತಂಡವು ಗುಜರಾತ್ ಟೈಟಾನ್ಸ್‌ನಿಂದ ಸೋಲನ್ನು ಎದುರಿಸಬೇಕಾಯಿತು.

ರೋಹಿತ್ ಈ ಬಾರಿ ನಾಯಕತ್ವ ಇಲ್ಲದೇ ಮುಂಬೈ ಪರ ಆಡುತ್ತಾರಾ ಅಥವಾ ಬೇರೆ ತಂಡಗಳತ್ತ ಮುಖ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Story first published: Thursday, February 8, 2024, 13:59 [IST]
Other articles published on Feb 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+