IPL 2024: ಡಿ.19ರ ಹರಾಜಿಗೂ ಮುನ್ನ ಐಪಿಎಲ್ ತಂಡಗಳ ಬಳಿ ಉಳಿದ ಪರ್ಸ್ ಮೊತ್ತ; ಆರ್‌ಸಿಬಿಗೆ ಅಗ್ರಸ್ಥಾನ
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಗೆ ಮುಂಚಿತವಾಗಿ ಎಲ್ಲಾ 10 ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ನಡೆಸಿವೆ.
ಗಡುವಿನ ದಿನವಾದ (ನವೆಂಬರ್ 26) ಭಾನುವಾರದಂದು ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಬಹಿರಂಗಪಡಿಸಿವೆ. 2024ರ ಐಪಿಎಲ್‌ಗಾಗಿ ಡಿಸೆಂಬರ್ 19ರಂದು ದುಬೈನಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಅದರಂತೆ, ಬಿಡ್ಡಿಂಗ್ ಯುದ್ಧಕ್ಕೆ ಮುಂಚಿತವಾಗಿ ಎಲ್ಲಾ 10 ಐಪಿಎಲ್ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಯಾವ ಆಟಗಾರರನ್ನು ಬಿಡುಗಡೆ ಮಾಡಬೇಕು ಎಂಬುದನ್ನು ನಿರ್ಧರಿಸಿವೆ.
ಎಲ್ಲಾ ಹತ್ತು ತಂಡಗಳಿಂದ ಒಟ್ಟು 85 ಆಟಗಾರರನ್ನು ಬಿಡುಗಡೆ ಮಾಡಲಾಗಿದೆ. ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ಗೆ ವ್ಯಾಪಾರವಾಗಲಿದ್ದಾರೆ ಎಂಬ ವರದಿಗಳಿಗೆ ವಿರುದ್ಧವಾಗಿ, ಮಾಜಿ ಚಾಂಪಿಯನ್ ಗುಜರಾತ್ ಟೈಟನ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರನ್ನು ಉಳಿಸಿಕೊಂಡಿದೆ.

ಡಿಸೆಂಬರ್ 19ರಂದು ಐಪಿಎಲ್ 2024ಕ್ಕಾಗಿ ನಡೆಯುವ ಮಿನಿ ಹರಾಜಿನಲ್ಲಿ ತಂಡಗಳು ಯಾವ ಬೆಲೆಗೆ ಎಷ್ಟು ಆಟಗಾರರನ್ನು ಖರೀದಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಐಪಿಎಲ್ ತಂಡಗಳ ಬಳಿ ಉಳಿದ ಪರ್ಸ್ ಮೊತ್ತ
ರಾಯಲ್ ಚಾಲೆಂಜರ್ಸ್ ಬೆಂಗಳೂರು - 40.75 ಕೋಟಿ ರೂಪಾಯಿ
ಸನ್ ರೈಸರ್ಸ್ ಹೈದರಾಬಾದ್ - 34 ಕೋಟಿ ರೂಪಾಯಿ
ಕೋಲ್ಕತ್ತಾ ನೈಟ್ ರೈಡರ್ಸ್ - 32.7 ಕೋಟಿ ರೂಪಾಯಿ
ಚೆನ್ನೈ ಸೂಪರ್ ಕಿಂಗ್ಸ್ - 31.4 ಕೋಟಿ ರೂಪಾಯಿ
ಪಂಜಾಬ್ ಕಿಂಗ್ಸ್ - 29.1 ಕೋಟಿ ರೂಪಾಯಿ
ದೆಹಲಿ ಕ್ಯಾಪಿಟಲ್ಸ್ - 28.95 ಕೋಟಿ ರೂಪಾಯಿ
ಮುಂಬೈ ಇಂಡಿಯನ್ಸ್ - 15.25 ಕೋಟಿ ರೂಪಾಯಿ
ರಾಜಸ್ಥಾನ್ ರಾಯಲ್ಸ್ - 14.5 ಕೋಟಿ ರೂಪಾಯಿ
ಲಕ್ನೋ ಸೂಪರ್ ಜೈಂಟ್ಸ್ - 13.9 ಕೋಟಿ ರೂಪಾಯಿ
ಗುಜರಾತ್ ಟೈಟನ್ಸ್ - 13.8 ಕೋಟಿ ರೂಪಾಯಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications