IPL 2024: ಅಭ್ಯಾಸದ ವೇಳೆ ರಿಂಕು ಬಾರಿಸಿದ ಚೆಂಡು ಬಾಲಕನಿಗೆ ಬಿದ್ದು ಗಾಯ
ಇಂಡಿಯನ್ ಪ್ರೀಮಿಯರ್ ಲೀಗ್ 2024ಕ್ಕಿಂತ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟ್ಸ್‌ಮನ್ ರಿಂಕು ಸಿಂಗ್ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ವೀಡಿಯೊ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇನ್ನೊಂದು ಸಂಗತಿಯಿದೆ. ಅದೆನ್ನಪ್ಪಾ ಅಂದರೆ ಅವರು ಬಾರಿಸಿದ
ಒಂದು ಹೊಡೆತವು ಬಾಲಕನಿಗೆ ಬಡಿದ ಪರಿಣಾಮ, ಆತನಿಗೆ ಗಾಯವಾಗಿದೆ.
ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ ಕ್ಯಾಂಪ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ರಿಂಕು ಸಿಕ್ಸರ್ ಬಾರಿಸಿದ್ದರು. ಈ ಚೆಂಡು ಬಾಲಕನ ತಲೆಗೆ ಬಡಿಯಿತು. ಇದಾದ ನಂತರ ರಿಂಕು ಆ ಮಗುವನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ, ಅದ್ಭುತವಾದ ಉಡುಗೊರೆಯನ್ನೂ ನೀಡಿದ್ದಾರೆ.

ವಿಡಿಯೋ ವೈರಲ್
ಕೋಲ್ಕತ್ತಾ ನೈಟ್ ರೈಡರ್ಸ್ ಮಂಗಳವಾರ, ಮಾರ್ಚ್ 12 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಬ್ಯಾಟ್ಸ್ ಮನ್ ಬಾಲಕನ ಬಳಿ ಹೋಗಿ ಕ್ಷಮೆ ಕೇಳುತ್ತಿರುವುದು ಕಂಡುಬಂದಿದೆ. ರಿಂಕು ಅವರೊಂದಿಗೆ ಕೆಕೆಆರ್ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಕೂಡ ವಿಡಿಯೋದಲ್ಲಿ ಕಂಡು ಬಂದಿದ್ದಾರೆ. ಅವರು ಮಗುವಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಕ್ಯಾಪ್ ನೀಡಿದರು. ಅಲ್ಲದೆ ಆ ಕ್ಯಾಪ್ ಮೇಲೆ ರಿಂಕು ಆಟೋಗ್ರಾಫ್ ನೀಡಿದ್ದಾರೆ.
ಐಪಿಎಲ್‌ನಲ್ಲಿ ಅಬ್ಬರ
ರಿಕು ಸಿಂಗ್ ಐಪಿಎಲ್ 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಭರ್ಜರಿ ಪ್ರದರ್ಶನ ನೀಡಿದ ಅವರು ಬಹಳ ಜನಪ್ರಿಯರಾದರು. ಇದರಿಂದಾಗಿ ಅವರು ಭಾರತದ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆದರು. ನಂತರ ಹಿಂತಿರುಗಿ ನೋಡಲಿಲ್ಲ. ಫಿನಿಶರ್ ಆಗಿ ಅವರು ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದರು. ರಿಂಕು ತನ್ನ ಚೊಚ್ಚಲ ಪಂದ್ಯದ ನಂತರ 15 ಪಂದ್ಯಗಳಲ್ಲಿ 356 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 176.23 ಮತ್ತು ಸರಾಸರಿ 89. ಅವರು 2 ಅರ್ಧಶತಕಗಳನ್ನು ಗಳಿಸಿದ್ದಾರೆ.

ವಿಶ್ವಕಪ್ ತಂಡದಲ್ಲಿ ಸ್ಥಾನ?
ಜೂನ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಭಾರತ ತಂಡದಲ್ಲಿ ರಿಂಕು ಸಿಂಗ್ ಆಯ್ಕೆ ಖಚಿತವಾಗಿದೆ. ಫಿನಿಶರ್ ಆಗಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಇತ್ತೀಚೆಗಷ್ಟೇ ಒಂದು ವರ್ಷದ ಅಂತರದ ನಂತರ ಟಿ20 ಸ್ವರೂಪಕ್ಕೆ ಮರಳಿರುವ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ರೋಹಿತ್ ಜೊತೆಗೆ ವಿರಾಟ್ ಕೊಹ್ಲಿ ಕೂಡ ಟಿ20 ವಿಶ್ವಕಪ್‌ನಲ್ಲಿ ಆಡುವ ನಿರೀಕ್ಷೆಯಿದೆ. ಭಾರತವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications