ಬುಧವಾರ ಏಪ್ರಿಲ್ 24ರಂದು ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಇಂಡಿಯನ್ಸ್ ಪ್ರೀಮಿಯರ್ ಲೀಗ್ ಲೀಗ್ (ಐಪಿಎಲ್)ನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (ಜಿಟಿ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಭರ್ಜರಿ ಜಯ ದಾಖಲಿಸಿದೆ.
ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಸಿಡಿಲಬ್ಬರದ ಪ್ರದರ್ಶನ ನೀಡಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಪಂತ್ ಗುಜರಾತ್ ಟೈಟನ್ಸ್ ಬೌಲರ್ಸ್ ಅನ್ನು ಬೆಂಡೆತ್ತಿದರು.

ಇಂತಹ ಅದ್ಭುತ್ ಇನ್ನಿಂಗ್ಸ್ ಕಟ್ಟಿದ್ದ ಪಂತ್ ಗೊತ್ತಿದ್ದೋ ಗೊತ್ತಿಲ್ಲದೆಯೋ ದೊಡ್ಡ ತಪ್ಪು ಮಾಡಿದ್ದಾರೆ. ಗುಜರಾತ್ ಟೈಟನ್ಸ್ ಪರ 16ನೇ ಓವರ್ ಬೌಲಿಂಗ್ ಮಾಡಿದ ಮೋಹಿತ್ ಶರ್ಮಾ ಅವರ ಮೊದಲ ಎಸೆತವನ್ನು ಎದರುಸಿದ ಪಂತ್ ಹೆಲಿಕ್ಯಾಪ್ಟರ್ ಶಾಟ್ ಆಡುವ ಮೂಲಕ ಬಲವಾಗಿ ಸಿಕ್ಸರ್ ಬಾರಿಸಿದರು.
ಈ ಸಿಕ್ಸರ್ ನೇರವಾಗಿ ಕ್ಯಾಮರಾಮೆನ್ ಕೈಗೆ ಬಡಿಯಿತು. ಪರಿಣಾಮ ಕ್ಯಾಮರಾಮೆನ್ ಗಾಯಗೊಂಡರು. ಈ ವೇಳೆ ಕ್ಯಾಮರಾಮೆನ್ ಗಾಯಗೊಂಡಿರುವ ಬಗ್ಗೆ ಪಂತ್ ಗಮನಹರಿಸಿರಲಿಲ್ಲ. ಪಂದ್ಯದ ಬಳಿಕ ವಿಷಯ ತಿಳಿದ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಜೊತೆ ಕ್ಯಾಮರಾಮನ್ ಅವರಿಗೆ ಕ್ಷಮೆಯಾಚಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ರಿಷಬ್ ಪಂತ್, ದೇಬಾಶಿಶ್ ಭಾಯ್ ನನ್ನನ್ನು ಕ್ಷಮಿಸಿ, ನಿಮ್ಮನ್ನು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ. ಆದರೆ ನೀವು ಶೀಘ್ರದಲ್ಲೇ ಗುಣಮುಖರಾಗುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಗುಜರಾತ್ ಟೈಟನ್ಸ್ ಎದುರು ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಷಬ್ ಪಂತ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಜಿಟಿ ಬೌಲರ್ಸ್ ಮೇಲೆ ಸವಾರಿ ಮಾಡಿದ ಪಂತ್, 43 ಎಸೆತಗಳಲ್ಲಿ 5 ಬೌಂಡರಿ ಹಾಗು 8 ಅರ್ಕಷಕ ಸಿಕ್ಸರ್‌ಗಳ ನೆರೆವಿನಿಂದ ಅಜೇಯ 88 ರನ್‌ಗಳನ್ನು ಬಾರಿಸಿದರು. ಈ ಮೂಲಕ ಡೆಲ್ಲಿ ಬೃಹತ್ ಸ್ಕೋರ್ ಗಳಿಸಲು ಸಾಧ್ಯವಾಯಿತು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ್ದ ಗುಜರಾತ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 220 ರನ್ ಗಳಿಸಿ 4 ರನ್‌ಗಳಿಂದ ಸೋಲನುಭವಿಸಿತು. ಗುಜರಾತ್ ಪರ ಸಾಯಿ ಸುದರ್ಶನ್ ಮತ್ತು ಡೇವಿರ್ ಮಿಲ್ಲರ್ ಅರ್ಧಶತಕ ಸಿಡಿಸಿ ಮಿಂಚಿದರು.