ಐಪಿಎಲ್ 2024ಕ್ಕೆ ಚಾಲನೆ ಸಿಕ್ಕಿದೆ. ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಸ್ಟಾರ್ ಆಟಗಾರ ರಿಷಭ್ ಪಂತ್ ಅಂಗಳಕ್ಕೆ ಪ್ರವೇಶಿಸಲಿದ್ದಾರೆ.
2022ರ ಡಿಸೆಂಬರ್ ಅಂತ್ಯದಲ್ಲಿ ಕಾರು ಅಪಘಾತದಲ್ಲಿ ರಿಷಭ್ ಪಂತ್ ತೀವ್ರ ಗಾಯಕ್ಕೆ ತುತ್ತಾಗಿದ್ದರು. ಸ್ಟಾರ್ ಆಟಗಾರ ಬಹು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಸಮಯಕ್ಕೆ ತಕ್ಕಂತೆ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ತಮ್ಮ ಗಾಯ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ರಿಷಭ್ ಚೇತರಿಸಿಕೊಳ್ಳುತ್ತಿದ್ದಂತೆ ಅಭ್ಯಾಸ ಆರಂಭಿಸಿದ್ದಾರೆ.

ಆರಂಭದಲ್ಲಿ ತಮ್ಮ ದೇಹ ಸಡಿಲವಾಗಲು ವಾಕಿಂಗ್, ಸೈಕ್ಲಿಂಗ್ ಮಾಡಿದ ರಿಷಭ್, ಕ್ರಮೇಣ ವ್ಯಾಯಾಮ ಹೆಚ್ಚಿಸಿಕೊಂಡರು. ಈಗ ರಿಷಭ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆಂದು ಕಾಣುತ್ತಿದೆ. ಹೀಗಾಗಿ ಅವರಿಗೆ ಎನ್‌ಸಿಎ ಸಂಪೂರ್ಣ ಫಿಟ್ ಎಂದು ಘೋಷಿಸಿದೆ. ಈ ಬೆನ್ನಲ್ಲೆ ರಿಷಭ್ ಪಂತ್ ಮತ್ತೆ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.
ಡಿಸೆಂಬರ್ 25, 2022ರಂದು ರಿಷಭ್ ಪಂತ್ ಕೊನೆಯ ಬಾರಿಗೆ ಅಂಗಳಕ್ಕೆ ಇಳಿದಿದ್ದರು. ಈಗ ಸುಮಾರು 454 ದಿನಗಳ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಅಂಗಳಕ್ಕೆ ಇಳಿಯಲಿದ್ದಾರೆ. ಈ ಮೂಲಕ ರಿಷಭ್ ಭರ್ಜರಿ ಕಮ್‌ಬ್ಯಾಕ್ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಇವರು ಐಪಿಎಲ್ 2024ರ ಮೊದಲು ಪಂದ್ಯದಲ್ಲಿ ಶಿಖರ್ ಧವನ್ ಮುಂದಾಳತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಕಾದಾಟ ನಡೆಸಲಿದ್ದಾರೆ.

ಮೊಹಾಲಿಯ ಮಹಾರಾಜ ಯದ್ವೇಂದ್ರ ಸಿಂಗ್ ಸ್ಟೇಡಿಯಂನ ಪಿಚ್‌ಗೆ ನವೀಕರಣಗೊಂಡಿದೆ. ಇಲ್ಲಿನ ಪಿಚ್ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಗೆ ಸಮಾನವಾಗಿ ನೆರವು ನೀಡಲಿದೆ. ಪಿಚ್‌ನಲ್ಲಿ ಸಾಕಷ್ಟು ಬೌನ್ಸ್ ಇರುತ್ತದೆ, ಇದು ಬ್ಯಾಟಿಂಗ್‌ಗೆ ಸುಲಭವಾಗಿರುತ್ತದೆ. ಇಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವುದು ಗೆಲುವಿನ ಗ್ಯಾರಂಟಿ. ಇನ್ನೂ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಲಾಭವಾಗಬಹುದು. ಇಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಸಾಕಷ್ಟು ರನ್‌ಗಳು ದಾಖಲಾಗಿವೆ.
ಉಭಯ ತಂಡಗಳು ಈಗಾಗಲೇ 32 ಬಾರಿ ಮುಖಾಮುಖಿ ಆಗಿದ್ದು, ಉಭಯ ತಂಡಗಳು 16 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಅಲ್ಲದೆ ಇಷ್ಟೇ ಸಂಖ್ಯೆಯ ಪಂದ್ಯಗಳಲ್ಲಿ ಸೋಲು ಕಂಡಿವೆ. ಉಭಯ ತಂಡದ ಪರ ಗರಿಷ್ಠ ಸ್ಕೋರ್ 231 ಆಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪೂರ್ಣ ತಂಡ: ರಿಷಬ್ ಪಂತ್ (ನಾಯಕ), ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಒಸ್ತ್ವಾಲ್, ಪೃಥ್ವಿ ಶಾ, ಎನ್ರಿಕ್ ನಾರ್ಖಿಯಾ, ಅಭಿಷೇಕ್ ಪೊರೆಲ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಶಾನ್ ಮಾರ್ಶ್ಮದ್ ಶರ್ಮಾ, ಯಶ್ ಧುಲ್, ಮುಖೇಶ್ ಕುಮಾರ್, ಟ್ರಿಸ್ಟಾನ್ ಸ್ಟಬ್ಸ್, ರಿಕಿ ಭುಯಿ, ಕುಮಾರ್ ಕುಶಾಗ್ರಾ, ರಾಸಿಖ್ ದಾರ್, ಝಯ್ ರಿಚರ್ಡ್ಸನ್, ಸುಮಿತ್ ಕುಮಾರ್, ಶಾಯ್ ಹೋಪ್, ಸ್ವಸ್ತಿಕ್ ಚಿಕಾರಾ.
ಪಂಜಾಬ್ ಕಿಂಗ್ಸ್ ಪೂರ್ಣ ತಂಡ: ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಸಿಕಂದರ್ ರಜಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೇಡೆ, ಅರ್ಷ್‌ದೀಪ್ ಸಿಂಗ್, ನಾಥನ್ ಎಲ್ಲಿಸ್, ಸ್ಯಾಮ್ ಕರ್ರಾನ್, ಕಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್, ಹರ್ಷಲ್ ಪಟೇಲ್, ಕ್ರಿಸ್ ವೋಕ್ಸ್, ಅಶುತೋಷ್ ಶರ್ಮಾ, ವಿಶ್ವನಾಥ್ ಪ್ರತಾಪ್ ಸಿಂಗ್, ಶಶಾಂಕ್ ಸಿಂಗ್, ತನಯ್ ತ್ಯಾಗರಾಜನ್, ಪ್ರಿನ್ಸ್ ಚೌಧರಿ, ರಿಲೆ ರೂಸೋ.