Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ರಿಶ್ತೆ ಮೆ ಹಮ್‌ ತುಮಾರೆ ಕ್ಯಾಪ್ಟನ್‌ ಲಗ್ತೇ ಹೈ ನಾಮ್‌ ಹೈ ಪಾಂಡೆ: ಇದನ್ನು ಹೇಳಿದ್ದು ಯಾರಿಗೆ?

ಹಾರ್ದಿಕ್ ಪಾಂಡ್ಯ ಈ ಹೆಸರು ಕೇಳಿದ್ರೆ ಸಾಕು ಒಂದಷ್ಟು ಅಭಿಮಾನಿಗಳು ಖುಷಿ ಆದರೆ, ಇವರನ್ನು ನೋಡಿದರೆ ಕೆಂಡ ಕಾರುವ ಅಭಿಮಾನಿಗಳ ಬಳಗ ಒಂದು ಹುಟ್ಟಿಕೊಂಡಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್‌ ನಾಯಕತ್ವವನ್ನು ರೋಹಿತ್‌ ಶರ್ಮಾರಿಂದ ಕಸಿದುಕೊಂಡು, ಹಾರ್ದಿಕ್ ಪಾಂಡ್ಯ ಅವರಿಗೆ ನೀಡಿದ ಮೇಲಂತೂ, ಕೆಂಡ ಕಾರುವವರ ಸಂಖ್ಯೆ ಹೆಚ್ಚಾಗಿದೆ.

ಇಷ್ಟು ದಿನಗಳ ಕಾಲ ಮುಸುಕಿನ ಗುದ್ದಾಟದಂತೆ ಕಂಡು ಬಂದ ಈ ಒಂದು ನಾಯಕತ್ವದ ಪ್ರಕರಣಕ್ಕೆ ಫುಲ್‌ ಸ್ಟಾಪ್‌ ಹಾಕಲು ಹಾರ್ದಿಕ್ ಭರ್ಜರಿ ವೇದಿಕೆಯನ್ನೇ ಬಳಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಹಾರ್ದಿಕ್ ಪಾಂಡ್ಯ ನೀಡಿದ ಉತ್ತರ ಬೇರೆ ನೀಡಿದಂತೆ ಕಾಣುತ್ತಿದೆ.

IPL 2024 Rishte me hum tumhare captain lagte hai naam hai Pandey

ಐಪಿಎಲ್ 2024 ರ ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ನಾಯಕನನ್ನಾಗಿ ಮಾಡಿದಾಗಿನಿಂದ, ಹಾರ್ದಿಕ್ ಮೇಲೆ ಬಹಳಷ್ಟು ಪ್ರಶ್ನೆಗಳನ್ನು ಎತ್ತಲಾಗಿದೆ. ಇದೀಗ ಮತ್ತೊಮ್ಮೆ ಹಾರ್ದಿಕ್ ಪಾಂಡ್ಯ ತಮ್ಮ ಹೇಳಿಕೆಯೊಂದರಿಂದ ಸುದ್ದಿಯಾಗಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ನಂತರ ಇದೀಗ ಅಭಿಮಾನಿಗಳ ಮನಸ್ಸಿನಲ್ಲಿ ವಿವಿಧ ಪ್ರಶ್ನೆಗಳು ಹುಟ್ಟಿಕೊಂಡಿವೆ. ಹಾರ್ದಿಕ್ ಪಾಂಡ್ಯ ತಮ್ಮ ಹೇಳಿಕೆ ಯಾರನ್ನು ಎತ್ತಿ ತೋರಿಸುತ್ತಿದ್ದಾರೆ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ.

ಖಡಕ್ ಡೈಲಾಗ್

ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮವೊಂದರಲ್ಲಿ ಹಾರ್ದಿಕ್ ಪಾಂಡ್ಯ ಈ ಸಂಭಾಷಣೆಯನ್ನು ಹೇಳಿದ್ದರು. ಕಾರ್ಯಕ್ರಮದ ವೇಳೆ, ಆ್ಯಂಕರ್ ಹಾರ್ದಿಕ್ ಪಾಂಡ್ಯ ಅವರ ಹುಟ್ಟುಹಬ್ಬದ ಬಗ್ಗೆ ಕೇಳಿದಾಗ, ಕಾರ್ಯಕ್ರಮದಲ್ಲಿ ಕುಳಿತಿದ್ದ ಅಭಿಮಾನಿಯೊಬ್ಬರು ಹಾರ್ದಿಕ್ ಅವರ ಹುಟ್ಟುಹಬ್ಬ ಅಕ್ಟೋಬರ್ 11 ರಂದು ಎಂದು ಹೇಳಿದರು.

IPL 2024 Rishte me hum tumhare captain lagte hai naam hai Pandey

ಅದೇ ಸಮಯದಲ್ಲಿ, ಅಕ್ಟೋಬರ್ 11 ರಂದು, ಬಿಗ್ ಬಿ ಅಂದರೆ ಮೆಗಾಸ್ಟಾರ್ ಅಬಿತಾಬ್ ಬಚ್ಚನ್ ಅವರ ಜನ್ಮದಿನವೂ ಬರುತ್ತದೆ. ಹಾರ್ದಿಕ್‌ಗೆ ಅಮಿತಾಭ್ ಬಚ್ಚನ್ ಅವರ ಯಾವುದೇ ಡೈಲಾಗ್ ಅನ್ನು ತಮ್ಮದೇ ಆದ ರೀತಿಯಲ್ಲಿ ಹೇಳುವಂತೆ ಕೇಳಿದ್ದರು.

ಅದರ ನಂತರ ಹಾರ್ದಿಕ್ ಪಾಂಡ್ಯ ಅಮಿತಾಬ್ ಬಚ್ಚನ್ ಅವರ ಚಿತ್ರದ ಸಂಭಾಷಣೆಯನ್ನು ತಮ್ಮದೇ ಆದ ರೀತಿಯಲ್ಲಿ ಹೇಳಿದರು. ಇದರಲ್ಲಿ ಹಾರ್ದಿಕ್, 'ನಮ್ಮ ಸಂಬಂಧದಲ್ಲಿ ನಾನು ನಿಮ್ಮ ನಾಯಕನಂತೆ ಕಾಣುತ್ತೇನೆ, ನನ್ನ ಹೆಸರು ಪಾಂಡ್ಯ' ಎಂದು ಹೇಳಿದ್ದಾರೆ.

ವಿಶ್ವಕಪ್‌ ವೇಳೆ ಗಾಯ

2023 ರ ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಈಗ ಡಿವೈ ಪಾಟೀಲ್ ಟಿ 20 ಕಪ್ 2024 ಮೂಲಕ ಮೈದಾನಕ್ಕೆ ಮರಳಿದ್ದಾರೆ. ಇದಾದ ನಂತರ ಹಾರ್ದಿಕ್ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಹಾರ್ದಿಕ್ ಮುಂಬೈ ಇಂಡಿಯನ್ಸ್ ನಾಯಕನಾಗಿ ಮರಳಿದ್ದಾರೆ. ಅವರು ಮುಂಬೈ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು.

Story first published: Monday, March 4, 2024, 11:44 [IST]
Other articles published on Mar 4, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+