IPL 2024: ಐಪಿಎಲ್‌ನಲ್ಲಿ ಈ ದಾಖಲೆಯ ಮೇಲೆ ರೋಹಿತ್ ಶರ್ಮಾ ಕಣ್ಣು
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ರಂಗು ಆರಂಭವಾಗಿದೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಬಾರಿ ರೋಹಿತ್ ಒಬ್ಬ ಪ್ಲೇಯರ್ ಆಗಿ ಮಾತ್ರ ಆಡುತ್ತಿರುವುದರಿಂದ ನಿರೀಕ್ಷೆಗಳು ಹೆಚ್ಚಿವೆ. ಸ್ಟಾರ್ ಆಟಗಾರನ ಬ್ಯಾಟಿಂಗ್ ಹೊಳಪು ಮತ್ತೊಮ್ಮೆ ಅನಾವರಣ ಆಗುವ ಸಾಧ್ಯತೆ ಇದೆ.
ಸತತ 11 ವರ್ಷಗಳ ಬಳಿಕ ರೋಹಿತ್ ಶರ್ಮಾ ಪ್ಲೇಯರ್ ಆಗಿ ಕಣಕ್ಕೆ ಇಳಿಯಲಿದ್ದಾರೆ. ಹಿಟ್ ಮ್ಯಾನ್ 11 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಮುಂಬೈ ತಂಡಕ್ಕೆ ಐದು ಬಾರಿ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ.

2008ರಲ್ಲಿ ಪದಾರ್ಪಣೆ
ರೋಹಿತ್ ಶರ್ಮಾ ಐಪಿಎಲ್ ವೃತ್ತಿಜೀವನವು 2008 ರಲ್ಲಿ ಡೆಕ್ಕನ್ ಚಾರ್ಜರ್ಸ್‌ನೊಂದಿಗೆ ಪ್ರಾರಂಭವಾಯಿತು. ಅವರು ಆಡಮ್ ಗಿಲ್‌ಕ್ರಿಸ್ಟ್ ನಾಯಕತ್ವದಲ್ಲಿ 2009 ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದ ತಂಡದ ಸದಸ್ಯ. ಇದಾದ ಬಳಿಕ 2011ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಬಂದಿದ್ದರು. ಅವರು 2013 ರಿಂದ ಇಲ್ಲಿಯವರೆಗೆ ಈ ತಂಡದ ನಾಯಕರಾಗಿ ಆಡಿದ್ದಾರೆ. ಇದೀಗ ಹಾರ್ದಿಕ್ ಪಾಂಡ್ಯ ಎಂಐ ತಂಡದ ನೂತನ ನಾಯಕರಾಗಿದ್ದಾರೆ.
ಪ್ಲೇಯರ್ ಆಗಿ ಕಣಕ್ಕೆ
ಸುಮಾರು 11 ವರ್ಷಗಳ ನಂತರ, ರೋಹಿತ್ ಶರ್ಮಾ ಅವರು 5 ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಅದೇ ತಂಡದ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ರೋಹಿತ್ ಮತ್ತು ಹಾರ್ದಿಕ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಮುಂಬೈ ಇಂಡಿಯನ್ಸ್ ಶಿಬಿರ ಆರಂಭವಾಗಿದ್ದು, ಶೀಘ್ರದಲ್ಲೇ ರೋಹಿತ್ ಶರ್ಮಾ ಕೂಡ ಅಲ್ಲಿಗೆ ತಲುಪುವ ನಿರೀಕ್ಷೆಯಿದೆ. ನಾಯಕ ಹಾರ್ದಿಕ್ ಈಗಾಗಲೇ ತಯಾರಿ ಆರಂಭಿಸಿದ್ದಾರೆ.

ದಾಖಲೆಯ ಮೇಲೆ ಕಣ್ಣು
ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ 7 ಶತಕಗಳನ್ನು ಗಳಿಸಿದ್ದಾರೆ. ಇದು ಟಿ20 ಅಂತರಾಷ್ಟ್ರೀಯ ಮತ್ತು ಐಪಿಎಲ್ ಅನ್ನು ಒಳಗೊಂಡಿದೆ. ಗ್ಲೆನ್ ಮ್ಯಾಕ್ಸೆಲ್, ಬ್ರೆಂಡನ್ ಮೆಕಲಮ್, ಲ್ಯೂಕ್ ರೈಟ್ ಕೂಡ ರೋಹಿತ್ ಶರ್ಮಾ ಅವರಷ್ಟು ಶತಕಗಳನ್ನು ಹೊಂದಿದ್ದಾರೆ. ಅಂದರೆ ಈ ಎಲ್ಲಾ ಆಟಗಾರರು ಟಿ20ಯಲ್ಲಿ ಏಳು ಶತಕಗಳನ್ನು ಗಳಿಸಿದ್ದಾರೆ.
ರೋಹಿತ್ ಶರ್ಮಾ ಈಗ ಮತ್ತೊಂದು ಶತಕ ಬಾರಿಸುವಲ್ಲಿ ಯಶಸ್ವಿಯಾದರೆ, ಅವರೆಲ್ಲರಿಗಿಂತ ಮುಂದೆ ಹೋಗುತ್ತಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಈಗ ನಿವೃತ್ತಿಯಾಗಿದ್ದಾರೆ. ಆದರೆ ಮ್ಯಾಕ್ಸ್‌ವೆಲ್ ಈ ವರ್ಷವೂ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಯಾರು?
ರೋಹಿತ್ ಶರ್ಮಾ ಮತ್ತೊಂದು ಶತಕ ಬಾರಿಸುವುದರೊಂದಿಗೆ ಅವರು ಈ ಮೂವರು ಆಟಗಾರರನ್ನು ಹಿಂದಿಕ್ಕಿ ಎಂಟು ಶತಕಗಳನ್ನು ಹೊಂದಿರುವ ಆರೋನ್ ಫಿಂಚ್, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ ಮತ್ತು ಮೈಕಲ್ ಕ್ಲಿಂಗರ್ ಅವರ ಪಟ್ಟಿಯನ್ನು ಸೇರಲಿದ್ದಾರೆ.
ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಕೂಡ ಐಪಿಎಲ್‌ನಲ್ಲಿ ಆಡಲಿದ್ದಾರೆ. ಕ್ರಿಸ್ ಗೇಲ್ ತಮ್ಮ ಟಿ20 ವೃತ್ತಿಜೀವನದಲ್ಲಿ ಒಟ್ಟು 22 ಶತಕಗಳನ್ನು ಗಳಿಸಿದ್ದಾರೆ. ಅವರ ಹತ್ತಿರವೂ ಯಾರೂ ಇಲ್ಲ. ಇದಾದ ಬಳಿಕ 11 ಶತಕ ಸಿಡಿಸಿರುವ ಪಾಕಿಸ್ತಾನದ ಬಾಬರ್ ಅಜಮ್ ಎರಡನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications