Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: RCBಗೆ ನೂತನ ಡೈರೆಕ್ಟರ್ ಆಫ್ ಕ್ರಿಕೆಟ್ ನೇಮಕ: ಮಹತ್ವದ ಜವಾಬ್ಧಾರಿ ಯಾರಿಗೆ ಗೊತ್ತಾ!

ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ ಆರ್‌ಸಿಬಿ ತಂಡದ ಸಿದ್ಧತೆ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ನೂತನ ಕ್ರಿಕೆಟ್ ನಿರ್ದೇಶಕರನ್ನು ನೇಮಕಗೊಳಿಸಲಾಗಿದ್ದು ಮೊ ಬೊಬಟ್ ಅವರು ಈ ಹುದ್ದೆಯನ್ನು ನಿರ್ವಹಿಸಲಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್‌ ತಂಡದಲ್ಲಿ ಪರ್ಫಾರ್ಮೆನ್ಸ್ ಡೈರೆಕ್ಟರ್ ಆಗಿ ಬೊಬಟ್ ಅದ್ಭುತ ಯಶಸ್ಸು ಪಡೆದುಕೊಂಡಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಲ್ಲಿ ಕಳೆದ 12 ವರ್ಷಗಳಿಂದ ಜವಾಬ್ಧಾರಿ ವಹಿಸಿಕೊಂಡಿರುವ ಬೊಬಟ್ ತಂಡದ ಯಶಸ್ಸಿನಲ್ಲಿಯೂ ಪಾತ್ರವಹಿಸಿದ್ದಾರೆ. 2019ರ ಬಳಿಕ ಅವರು ಇಂಗ್ಲೆಂಡ್ ತಂಡದ ಪರ್ಫಾಮೆನಮ್ಸ್ ಡೈರೆಕ್ಟರ್ ಆಗಿ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಇವರ ಅವಧಿಯಲ್ಲಿ ಇಂಗ್ಲೆಂಡ್ ತಂಡ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಕೂಡ ಅಲಂಕರಿಸಿದೆ.

IPL 2024: Royal Challengers Bangalore appointed Mo Bobat as Director of Cricket

ಇನ್ನು ಬೊಬಾಟ್ ಮತ್ತು ಆರ್‌ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್ ಈ ಹಿಂದೆ ಇಂಗ್ಲೆಂಡ್‌ನೊಂದಿಗೆ ಜೊತೆಯಾಗಿ ಕರ್ತವ್ಯ ನಿರ್ವಹಿಸಿದ್ದು ಈಗ ಈ ಜೋಡಿ ಮತ್ತೊಮ್ಮೆ ಒಟ್ಟಾಗಿದೆ. ಇದೀಗ ಜೋಡಿ ಈಗ ಆರ್‌ಸಿಬಿ ತಂಡದ ಐಪಿಎಲ್ ಟ್ರೋಫಿ ಗೆಲ್ಲುವ ಕನಸನ್ನು ನನಸಾಗಿಸಲು ಜೊತೆಯಾಗಿ ಶ್ರಮಿಸಲಿದ್ದಾರೆ.

ಬೊಬಟ್ ಇಂಗ್ಲೆಂಡ್‌ನ ತಂಡದ ಎಲ್ಲಾ ಮಾದರಿಯಲ್ಲಿಯೂ ಆಟಗಾರರ ದೊಡ್ಡ ಪಡೆಯನ್ನು ಸಿದ್ಧಪಡಿಸಿ ಅವರ ಬೆಳವಣಿಗೆ ಹಾಗೂ ಸಿದ್ಧತೆಗೆ ಮಹತ್ವದ ಪಾತ್ರವಹಿಸಿದ್ದಾರೆ. ಆರ್‌ಸಿಬಿ ತಂಡದಲ್ಲಿಯೂ ಅವರು ಪ್ರತಿಭೆಗಳ ನೇಮಕಾತಿ ಮತ್ತು ಕಾರ್ಯಕ್ಷಮತೆಯ ಯೋಜನೆಗಳನ್ನು ಮೇಲ್ವಿಚಾರಣೆಯ ಜವಾಬ್ಧಾರಿ ವಹಿಸಿಕೊಳ್ಳಲಿದ್ದು ಬಲಿಷ್ಠ ತಂಡವನ್ನು ಕಟ್ಟುವ ಯೋಜನೆ ಹೊಂದಿದ್ದಾರೆ.

ಇನ್ನು ಈ ನೇಮಕದ ಬಗ್ಗೆ ಆರ್‌ಸಿಬಿ ಚೇರ್‌ಮನ್ ಆಗಿರುವ ಪ್ರಥ್‌ಮೇಶ್ ಮಿಶ್ರಾ ಪ್ರತಿಕ್ರಿಯೆ ನೀಡಿದ್ದಾರೆ. "ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಮೊ ಬೊಬಟ್ ಅವರನ್ನು ಸ್ವಾಗತಿಸಲು ಬಹಳ ಸಂತೋಷವಾಗುತ್ತದೆ. ಆರ್‌ಸಿಬವಿ ಯಾವಾಗಲೂ ಪ್ರದರ್ಶನ ಆಧಾರಿತವಾಗಿ ಮುನ್ನಡೆಸಯಲು ಬಯಸುತ್ತದೆ. ತಂಡದ 'ಪ್ಲೇಬೋಲ್ಡ್' ತತ್ವದಲ್ಲಿ ಆಟದ ಸಂಸ್ಕೃತಿಯನ್ನು ರಚಿಸುವುದು ಪ್ರತಿಬಿಂಬಿಸುತ್ತದೆ. ಇಂಗ್ಲೆಂಡ್ ಪರವಾಗಿ ತಇದೇ ರೀತಿಯ ಜವಾಬ್ಧಾರಿಯಲ್ಲಿ ತನ್ನ ಸಾಮರ್ಥ್ಯವನ್ನು ಅವರು ಈಗಾಗಲೇ ತೋರಿಸಿದ್ದಾರೆ. ತಮ್ಮ ಅನುಭವ ಮತ್ತು ಸುದೀರ್ಘ ಅನುಭವದಿಂದಾಗಿ ಅವರು ಆರ್‌ಸಿಬಿ ತಂಡವನ್ನು ಹೊಸ ಎತ್ತರಕ್ಕೆ ಏರಲು ಮಾರ್ಗದರ್ಶನ ಮಾಡುತ್ತಾರೆ ಎಂದು ನಾನು ನಂಬುತ್ತೇನೆ" ಎಂದಿದ್ದಾರೆ.

ಇನ್ನು ಮೊ ಬೊಬಟ್ ಕೂಡ ಆರ್‌ಸಿಬಿ ತಂಡದ ಕ್ರಿಕೆಟ್ ನಿರ್ದೇಶಕರಾಗಿ ನೇಮಕಗೊಂಡ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. "ಆರ್‌ಸಿಬಿಗೆ ಕ್ರಿಕೆಟ್‌ನ ನಿರ್ದೇಶಕರಾಗಿ ಸೇರಲು ನನಗೆ ಸಾಕಷ್ಟು ಉತ್ಸುಕತೆ ಹಾಗೂ ಹೆಮ್ಮೆಯಾಗುತ್ತಿದೆ. ಆರ್‌ಸಿಬಿ ವಿಶ್ವದಲ್ಲೇ ಗುರುತಿಸಬಹುದಾದ ಫ್ರಾಂಚೈಸಿಗಳಲ್ಲಿ ಒಂದಾಗಿದ್ದು ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಹೊಂದಿದೆ. ಅದರ ಜವಾಬ್ಧಾರಿ ವಹಿಸಿಕೊಳ್ಳುವುದು ದೊಡ್ಡ ಗೌರವ. ಈ ಸಂದರ್ಭದಲ್ಲಿ ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ಅವರು ಇತ್ತೀಚಿನ ವರ್ಷಗಳಲ್ಲಿ ತಂಡಕ್ಕೆ ನೀಡಿದ ಸ್ಥಿರತೆಗಾಗಿ ಅವರನ್ನು ಸ್ಮರಿಸಬೇಕಿದೆ" ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

Story first published: Friday, September 29, 2023, 15:46 [IST]
Other articles published on Sep 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+