IPL 2024: ಲಾಯಲ್ ಫ್ಯಾನ್ಸ್ ಕೂಗಿಗೆ ಮಣಿದ ರಾಯಲ್ ಚಾಲೆಂಜರ್ಸ್; ರಿಷಬ್ ಶೆಟ್ರು ಹೇಳಿದ್ದು ಅರ್ಥವಾಯ್ತಾ?
ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಗೆ ಕೇವಲ ಹತ್ತು ದಿನಗಳು ಮಾತ್ರ ಬಾಕಿ ಉಳಿದಿದ್ದು, ವಿಶ್ವದ ಶ್ರೀಮಂತ ಟಿ20 ಲೀಗ್ ಆರಂಭಕ್ಕಾಗಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.
ಇದೇ ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ರೋಚಕ ಉದ್ಘಾಟನಾ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಮುಖಾಮುಖಿಯಾಗಲಿವೆ.

ಪ್ರತಿ ವರ್ಷ ಒಂದಿಲ್ಲೊಂದು ಬದಲಾವಣೆ ಮತ್ತು ಹೊಸ ಅನ್ವೇಷಣೆಗೆ ಹೆಸರುವಾಸಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಮತ್ತೊಂದು ದೊಡ್ಡ ಬದಲಾವಣೆ ಕೈ ಹಾಕಿದೆ. ಇದಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ ನಟ ರಿಷಬ್ ಶೆಟ್ಟಿ ಕೈಜೋಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಷ್ಟ್ ಮಾಡಲಾಗಿರುವ ವಿಡಿಯೋದಲ್ಲಿ, ಖ್ಯಾತಿಯ ನಟ ರಿಷಬ್ ಶೆಟ್ಟಿ ಮತ್ತು ಮೂರು ಕಂಬಳದ ಕೋಣಗಳನ್ನು ಕಾಣಬಹುದು.
ಸಿನಿಮಾ ಸ್ಟೈಲ್‌ನಲ್ಲೇ ಎಂಟ್ರಿ ಕೊಡಲಿರುವ ನಟ ರಿಷಬ್ ಶೆಟ್ಟಿ ಅವರು ಮೂರು ಕಂಬಳ ಕೋಣಗಳ ಮೇಲೆ Royal, Challengers, Bangalore ಎಂದು ಕೆಂಪು ಬಟ್ಟೆ ಹಾಕಲಾಗಿರುತ್ತದೆ. ಈ ವೇಳೆ Bangalore ಎಂದು ಇರುವ ಕೋಣವನ್ನು 'ಇದು ಬ್ಯಾಡ, ಭಟ್ರೇ, ತಗೊಂಡು ಹೋಗಿ ಇದನ್ನು' ಎಂದು ಹೇಳಿದ್ದಾರೆ.

ಇದಕ್ಕೆ ಟ್ವಿಟ್ಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಮಾಜಿಕ ಮಾಧ್ಯಮದಲ್ಲಿ ಶೀರ್ಷಿಕೆ ನೀಡಲಾಗಿದ್ದು, "ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?" ಎಂದು ಬರೆಯಲಾಗಿದೆ.
ಇದು ಮುಂಬರುವ ಐಪಿಎಲ್‌ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಹೆಸರಿನ ಬದಲಾವಣೆಗೆ ಮುಂದಾಗಿರುವ ಸುಳಿವು ನೀಡಿದೆ ಎಂದು ಆರ್‌ಸಿಬಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ಖುಷಿಪಡುತ್ತಿದ್ದಾರೆ.
ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು ತವರಿನ ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ, ಮಾರ್ಚ್ 19ರಂದು "ಅನ್‌ಬಾಕ್ಸ್ ಇವೆಂಟ್' ಆಯೋಜನೆಯಾಗಿದ್ದು, ಇಲ್ಲಿ ತಂಡದ ಜೆರ್ಸಿ ಅನಾವರಣ ಮತ್ತು ಆಟಗಾರರ ಪರಿಚಯ ನಡೆಯಲಿದೆ.
ಏಕೆಂದರೆ, 2014ರ ನವೆಂಬರ್ 1ರಂದು ಸರ್ಕಾರಿ ಕಡತ ಮತ್ತು ಸಾರ್ವಜನಿಕವಾಗಿ Bangalore (ಬ್ಯಾಂಗಲೋರ್) ಬದಲಾಗಿ Bengaluru (ಬೆಂಗಳೂರು) ಎಂದು ಬದಲಾವಣೆ ಆದೇಶ ಹೊರಡಿಸಲಾಗಿದೆ.
ಇದೇ ವೇಳೆ ಕೋಟ್ಯಂತರ ನಿಷ್ಠಾವಂತ ಅಭಿಮಾನಿಗಳ ದಶಕದ ಕೂಗಿಗೆ ಮಣಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಫ್ರಾಂಚೈಸಿ ತನ್ನ ಹೆಸರು ಬದಲಾವಣೆ ಮುಂದಾಗಿದೆ.
ಇಂಗ್ಲಿಷ್‌ನಲ್ಲಿ Royal Challengers Bangalore ಎಂದು ಫ್ರಾಂಚೈಸಿ ಹೆಸರು ಇದೆ. ಇದೀಗ Bangalore ಎಂಬ ಹಳೆಯ ಹೆಸರಿಗೆ ಕೊಕ್ ನೀಡಿ Bengaluru ಸೇರಿಸಲು ನಿರ್ಧರಿಸಿದೆ.
ಆದರೆ, 9 ವರ್ಷಗಳು ಕಳೆದರೂ ಆರ್‌ಸಿಬಿ ಫ್ರಾಂಚೈಸಿ Royal Challengers Bangalore ಎಂದೇ ಬಳಸುತ್ತಿತ್ತು. ಕಳೆದ 16 ವರ್ಷಗಳಲ್ಲಿ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆಲ್ಲದ ತಂಡಕ್ಕೆ ಇದೀಗ ಹೆಸರು ಬದಲಾವಣೆ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಬಾರಿಯಾದರೂ ಆರ್‌ಸಿಬಿ ತಂಡಕ್ಕೆ ಅದೃಷ್ಟ ಬದಲಾಗಲಿ ಎಂದು ಕಾಯುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications