IPL 2024: ಮುನಿಸು ಮರೆತು ಒಂದಾದ ಕೆಎಲ್ ರಾಹುಲ್-ಸಂಜೀವ್ ಗೋಯೆಂಕಾ; ಫೋಟೋ ವೈರಲ್
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ 2024ರ ಪಂದ್ಯದಲ್ಲಿ 10 ವಿಕೆಟ್‌ಗಳ ಹೀನಾಯ ಸೋಲಿನಿಂದಾಗಿ ಕೋಪಗೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರು ಮೈದಾನದಲ್ಲೇ ತಮ್ಮ ತಂಡದ ನಾಯಕ ಕೆಎಲ್ ರಾಹುಲ್ ಮೇಲೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ, ಬೈಗುಳ ನೀಡಿದ್ದರು.
ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವಿವಾದ ಹುಟ್ಟುಹಾಕಿತ್ತು ಮತ್ತು ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಅವರ ಅಭಿಮಾನಿಗಳು ಸಂಜೀವ್ ಗೋಯೆಂಕಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇತ್ತ ಕೆಎಲ್ ರಾಹುಲ್ ಮಾತ್ರ ಪಂದ್ಯ ಮುಗಿದ ನಂತರ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.

ಇದೀಗ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಮಾಲೀಕ ಸಂಜೀವ್ ಗೋಯೆಂಕಾ ಮತ್ತು ತಂಡದ ನಾಯಕ ಕೆಎಲ್ ರಾಹುಲ್ ತಮ್ಮ ನಡುವಿನ ಭಿನ್ನಾಭಿಪ್ರಾಯದ ವದಂತಿಗಳನ್ನು ಕೊನೆಗೊಳಿಸಲು ನಿರ್ಧರಿಸಿದರು. ಇದಕ್ಕಾಗಿ ಸಂಜೀವ್ ಗೋಯೆಂಕಾ ಅವರು ತಮ್ಮ ಮನೆಗೆ ಕೆಎಲ್ ರಾಹುಲ್ ಅವರನ್ನು ಆಹ್ವಾನಿಸುವ ಮೂಲಕ ಆತಿಥ್ಯ ನೀಡಿದ್ದಾರೆ.
ಸಂಜೀವ್ ಗೋಯೆಂಕಾ ಅವರು ಕೆಎಲ್ ರಾಹುಲ್ ಅವರನ್ನು ತಬ್ಬಿಕೊಂಡಿರುವ ಫೋಟೋ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.
ತನ್ನ ಮಾಲೀಕನ ಬೈಗುಳವನ್ನು ತಾಳ್ಮೆಯಿಂದಲೇ ಸಹಿಸಿಕೊಂಡಿದ್ದ ಕನ್ನಡಿಗ ಕೆಎಲ್ ರಾಹುಲ್ ಮೌನವಾಗಿ ನಿಂತಿದ್ದರು. ಭಾರತದ ಅಂತಾರಾಷ್ಟ್ರೀಯ ಆಟಗಾರನಿಗೆ ಸರಿಯಾದ ಗೌರವವನ್ನು ನೀಡದ ಸಂಜಿವ್ ಗೋಯೆಂಕಾ ವಿರುದ್ಧ ಭಾರತ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನವನ್ನು ತೋರಿಸಿದ್ದರಿಂದ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಈ ಘಟನೆಯ ನಂತರ, ಪ್ರಸಕ್ತ ಐಪಿಎಲ್ ಆವೃತ್ತಿಯ ಕೊನೆಯಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಏಕೆಂದರೆ, ಕೆಲವೇ ತಿಂಗಳುಗಳಲ್ಲಿ ಮೆಗಾ ಹರಾಜು ನಡೆಯಲಿದ್ದು, ಬೇರೆ ತಂಡವನ್ನು ಸೇರುವ ವದಂತಿಗಳು ಹಬ್ಬಿದ್ದವು. ಇದೀಗ ಮಾಲೀಕ ಮತ್ತು ನಾಯಕ ಮುನಿಸು ಮರೆತು ಒಂದಾಗಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಕೆಎಲ್ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಹಾಕಿದ್ದು, ಇದರಲ್ಲಿ ಸೂರ್ಯಾಸ್ತದ ಚಿತ್ರವಿದೆ ಮತ್ತು "ಚಂಡಮಾರುತದ ನಂತರದ ಶಾಂತ' ಎಂದು ಬರೆದುಕೊಂಡಿದ್ದಾರೆ.
ಆನ್‌ಫೀಲ್ಡ್‌ನಲ್ಲಿ ಬೈಗುಳದ ನಂತರ, ಎಲ್ಲವೂ ನಿಯಂತ್ರಣಕ್ಕೆ ಬಂದಂತೆ ತೋರುತ್ತಿದೆ ಎಂದು ಅಭಿಮಾನಿಗಳು ಗಮನಿಸಿದಂತೆ ಆ ರಹಸ್ಯ ಪೋಸ್ಟ್ ಕೂಡ ಮುಖ್ಯಾಂಶವಾಗಿದೆ.
ಆದರೆ ಮಂಗಳವಾರ ಮತ್ತೊಂದು ಫೋಟೋ ವೈರಲ್ ಆಗಿದ್ದು, ಇದು ಸಂಜಿವ್ ಗೋಯೆಂಕಾ ತಮ್ಮ ನಿವಾಸದಲ್ಲಿ ಕೆಎಲ್ ರಾಹುಲ್ ಅವರನ್ನು ಭೇಟಿ ಮಾಡಿದ ಸಂದರ್ಭ. ಟ್ವಿಟ್ಟರ್ ಪ್ರಕಾರ, ಸಂಜೀವ್ ಗೋಯೆಂಕಾ ಅವರು ಸೋಮವಾರ ರಾತ್ರಿ ಕೆಎಲ್ ರಾಹುಲ್ ಅವರನ್ನು ಊಟಕ್ಕೆ ಆಹ್ವಾನಿಸಿದರು ಮತ್ತು ಇಬ್ಬರೂ ಪರಸ್ಪರ ತಬ್ಬಿಕೊಂಡರು.
ಮಂಗಳವಾರದಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುತ್ತಿದೆ. ಲಕ್ನೋ ತಂಡಕ್ಕೆ ಲೀಗ್‌ನಲ್ಲಿ ಎರಡು ಪಂದ್ಯಗಳು ಉಳಿದಿವೆ ಮತ್ತು ಈ ಪಂದ್ಯಗಳನ್ನು ಗೆದ್ದರೆ, ನಂತರ ಇತರ ಪಂದ್ಯಗಳ ಫಲಿತಾಂಶಗಳು ತಮ್ಮ ಪರವಾಗಿ ಬರುತ್ತವೆ ಎಂದು ಭಾವಿಸಿದರೆ ಅವರು ಇನ್ನೂ ಪ್ಲೇಆಫ್‌ಗೆ ಪ್ರವೇಶಿಸಬಹುದಾಗಿದೆ.
ಇನ್ನುಈ ಪಂದ್ಯ ಸೋತರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇಆಫ್ ರೇಸ್‌ನಿಂದ ಹೊರಬೀಳಲಿದೆ. ರಿಷಭ್ ಪಂತ್ ಪಡೆಗೆ ಅರ್ಹತೆಯ ಸಾಧ್ಯತೆಗಳು ತುಂಬಾ ಕಡಿಮೆ. ಆದರೆ ಲೆಕ್ಕಾಚಾರದ ಪ್ರಕಾರ ಇನ್ನೂ ಪ್ಲೇಆಫ್ ರೇಸ್‌ನಲ್ಲಿದ್ದಾರೆ.
ಇದೀಗ ಎಲ್‌ಎಸ್‌ಜಿ ನಾಯಕ ರಾಹುಲ್ ತಮ್ಮ ಸ್ಟ್ರೈಕ್ ರೇಟ್ ಸುಧಾರಿಸುವ ಮತ್ತು ಅಗ್ರಸ್ಥಾನದಲ್ಲಿ ಹೆಚ್ಚು ಆಕ್ರಮಣಕಾರಿ ಆಟವಾಡುವ ಗುರಿಯನ್ನು ಹೊಂದಿರುವುದರಿಂದ ಎಲ್ಲರ ಕಣ್ಣುಗಳು ಅವರ ಮೇಲಿರುತ್ತವೆ. ಲಕ್ನೋದಲ್ಲಿ ಎಸ್‌ಆರ್‌ಹೆಚ್ ಪಂದ್ಯದ ನಂತರ ನಡೆದ ವಿವಾದದ ಬಳಿಕ ಕೆಎಲ್ ರಾಹುಲ್ ಅವರಿಂದ ಅದ್ಭುತ ಪುನರಾಗಮನಕ್ಕಾಗಿ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications